ಬೆಂಗಳೂರು: ಆರ್ಎಂಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಗ್ರಂಥಪಾಲಾಕಿಯಾಗಿ ಕೆಲಸ ಮಾಡುತ್ತಿರುವ ಯುವ ಕವಯಿತ್ರಿ ಕವಿತಾ ವಿ ಬಣಕಾರ್ ಅವರ “ವಿದ್ರುಮ” ಕವನ ಸಂಕಲನವನ್ನು ಆರ್ಎಂಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಪುಸ್ತಕ ಬಿಡುಗಡೆಗೊಳಿಸಿ ಹಾರೈಸಿದ ಶಾಲೆಯ ಪ್ರಾಂಶುಪಾಲರಾದ ಸುಮಾ ಪ್ರಸಾದ್, ಶಾಲೆಯಲ್ಲಿ ಬಿಡುವಿಲ್ಲದೆ ಕಾರ್ಯೋನ್ಮುಖವಾಗಿರುವ ಗ್ರಂಥಪಾಲಕಿಯೊಬ್ಬರು ಇಂತಹ ಸದಭಿರುಚಿಯನ್ನು ಬೆಳೆಸಿಕೊಂಡು ಕವನ ಸಂಕಲನವೊಂದನ್ನು ಹೊರತಂದಿರುವ ಅಪರೂಪದ ವಿಶೇಷ ಸಾಧನೆ. ಇದು ಇಂದಿನ ಯುವಪೀಳಿಗೆಗೆ ಮಾದರಿಯೂ ಆಗಿದೆ. ಹೀಗೆಯೇ ಇಂತಹ ಹೆಚ್ಚು ಹೆಚ್ಚು ಮೌಲ್ಯಯುತವಾದ ಪುಸ್ತಕಗಳನ್ನು ಕವಿತಾ ವಿ ಬಣಕಾರ್ ಅವರು ಹೊರತರುವಂತೆ ಆಗಲಿ ಎಂದರು.
ಶಾಲೆಯ ಸಹ ಶಿಕ್ಷಕರಾದ ಶಾಲಿನಿ ಎಸ್ ಆರ್, ಭಾರತಿ ಎಮ್ , ಸುಮಾ ಗೌಡ ಹಾಗೂ ಮುಂತಾದ ಸಹ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕನ್ನಡ ಟೈಮ್ಸ್ ಪಬ್ಲಿಕೇಷನ್ಸ್ ಇದನ್ನು ಪ್ರಕಟಿಸಿದೆ.




