ಕರ್ನಾಟಕದಲ್ಲಿ ಯೋಗ ಪ್ರದರ್ಶನ ಹೊಸ ದಾಖಲೆ ಸೃಷ್ಟಿ

4 years ago

ಬೆಂಗಳೂರು: ರಾಜ್ಯ ಯುವಜನ ಸೇವಾ ಇಲಾಖೆ ನೇತೃತ್ವದಲ್ಲಿ ನಡೆದ ಯೋಗ ಪ್ರದರ್ಶನ ಹೊಸ ದಾಖಲೆ ಸೃಷ್ಟಿಸಿದೆ.‌  ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಪ್ರದರ್ಶನ  ಇಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ ಗಿನ್ನೀಸ್ ದಾಖಲೆಯ ಪುಟಗಳನ್ನು ಸೇರಿದೆ.

ಈ ಮೊದಲು ರಾಜಸ್ತಾನದಲ್ಲಿ 1.60 ಲಕ್ಷ ಜನ ಏಕಕಾಲಕ್ಕೆ ಯೋಗ ಮಾಡುವ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಕರ್ನಾಟಕ ಅಳಿಸಿ ಹಾಕಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಆರು ಲಕ್ಷ ಜನ ಪಾಲ್ಗೊಂಡಿದ್ದರು.

ದಾಖಲೆಯ ಈ ಪ್ರದರ್ಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರೇಷ್ಮೆ, ಯುವ ಸಬಲೀಕರಣ ಸಚಿವ ನಾರಾಯಣಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವರು ಸಾಕ್ಷಿಯಾದರು.

ಹೊಸ ದಾಖಲೆ ಸೃಷ್ಠಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಸಚಿವ ನಾರಾಯಣ ಗೌಡ, ಗಿನ್ನೆಸ್ ದಾಖಲೆ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಐದು ಲಕ್ಷ ಜನರು ಸೇರಿ ಯೋಗ ಮಾಡುವ ಗುರಿ ಹೊಂದಲಾಗಿತ್ತು. ಸರ್ಕಾರದ ಈ ಪ್ರಯತ್ನ ವ್ಯಾಪಕ ಬೆಂಬಲ ಸಿಕ್ಕಿದ್ದು, ಆರೂವರೆ ಲಕ್ಷಕ್ಕೂ ಹೆಚ್ಚು ಜನರು ಇಂದಿನ ಯೋಗಥಾನ್‌ನಲ್ಲಿ ಪಾಲ್ಗೊಂಡಿದ್ದರು ಎಂದರು.

ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಯೋಗಪಟುಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.

Leave a Reply