ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಮಹತ್ವ ದೊರಕಿದೆ: ಗೌತಮ್ ಕುಮಾರ್

4 years ago

ಬೆಂಗಳೂರು: ಭಾರತದ ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ ಎಂದು ಮಾಜಿ ಮೇಯರ್ ಗೌತಮ್ ಕುಮಾರ್ ಹೇಳಿದರು.

ಜೋಗುಪಾಳ್ಯ ವಾರ್ಡ್ ನಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಡಾ.ರಾಜ್ ಕುಮಾರ್ ಕಾರ್ಪೋರೇಷನ್ ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನದಲ್ಲಿ ಮಾತಾಡಿದ ಅವರು,  ಪ್ರಧಾನಿ ನರೇಂದ್ರ ಮೋದಿರವರು ಯೋಗದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ ಕಾರಣದಿಂದ ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ವಿಶೇಷ ಮಹತ್ವ ದೊರಕಿದೆ. ಯೋಗ ಬಲ್ಲವನಿಗೆ, ರೋಗವಿಲ್ಲ ಪ್ರತಿಯೊಬ್ಬರು ಪ್ರತಿ ದಿನ ಯೋಗ ಮಾಡಿ, ಆರೋಗ್ಯವಂತ ಜೀವನ ಸಾಗಿಸಿ ಎಂದರು.

Leave a Reply