ಬೆಂಗಳೂರು: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಅವರು, ಶ್ಯಾಡೋ ಸಿಎಂ ಸ್ಥಾನಕ್ಕಾಗಿ ಯತೀಂದ್ರ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಪ್ರಿಯಾಂಕ್ ಖರ್ಗೆ ಕೈಯಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿ ಎಂದು ಭಾವಿಸಿಕೊಂಡಂತೆ ಕಾಣುತ್ತಿದೆ ಎಂದು ಮಾಧುಸ್ವಾಮಿ ಬರೆದಿರುವ ಪೋಸ್ಟ್ ಈಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಮಾಧುಸ್ವಾಮಿ ತಮ್ಮ ಪೋಸ್ಟ್ ನಲ್ಲಿ ಹಣಕಾಸು ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯರವರು, ವಿನಾಕಾರಣ ಉತ್ತರ ನೀಡುವುದು ಪ್ರಿಯಾಂಕ್ ಖರ್ಗೆ..! ಎಂದಿದ್ದಾರೆ
ಅದೇ ರೀತಿ ಬೆಂಗಳೂರು ನಗರಾಭಿವೃದ್ಧಿ: ಸಚಿವ ಡಿ. ಕೆ. ಶಿವಕುಮಾರ್, ಚೆಸ್ ಆಡುತ್ತಿರುವುದು ಪ್ರಿಯಾಂಕ್ ಖರ್ಗೆ..!
ಗೃಹ ಇಲಾಖೆ: ಸಚಿವ ಖಾತೆ ಡಾ. ಜಿ. ಪರಮೇಶ್ವರ್, ಅಕಾರ ಚಲಾಯಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
ಕಾನೂನು ಮತ್ತು ಸಂಸದೀಯ ವ್ಯವಹಾರ: ಸಚಿವ ಎಚ್.ಕೆ. ಪಾಟೀಲ್, ಅನಕೃತ ನಿರ್ವಹಣೆ ಪ್ರಿಯಾಂಕ್ ಖರ್ಗೆ..!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ನಾಮಕಾವಸ್ಥೆ ದಿನೇಶ್ ಗುಂಡೂರಾವ್, ಮದ್ದು ಚುಚ್ಚುತ್ತಿರುವುದು ಪ್ರಿಯಾಂಕ್ ಖರ್ಗೆ..!
ಸಮಾಜ ಕಲ್ಯಾಣ: ತೋರಿಕೆಗಾಗಿ ಹೆಚ್.ಸಿ.ಮಹದೇವಪ್ಪ, ಕೈಯಾಡಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
ಕಂದಾಯ: ಹೇಳಿಕೊಳ್ಳಲು ಕೃಷ್ಣಭೈರೇಗೌಡ, ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ..! ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಎಲ್ಲಾ ಇಲಾಖೆಯಲ್ಲಿಯೂ ಹಸ್ತಕ್ಷೇಪವನ್ನು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.




