ವಿಶ್ವ ಛಾಯಾಗ್ರಹಣ ದಿನಾಚರಣೆ –  ಸಾರ್ವಜನಿಕರಿಗೆ ರೀಲ್ಸ್ ಸ್ಪರ್ಧೆ

3 years ago

#WorldPhotographyDay #Public #Reels #Competition

ಬೆಂಗಳೂರು: ಸಾರ್ವಜನಿಕರಿಗೆ ಮುಕ್ತ ರೀಲ್ಸ್ ಮಾಡುವ ಸ್ಪರ್ಧೆ ಏರ್ಪಡಿಸಲಾಗಿದ್ದು ಇದಕ್ಕೆ ಮುಂಗಾರಿನ ಸಂಭ್ರಮ ಎಂಬ ವಿಷಯ ವಸ್ತು ನೀಡಲಾಗಿದೆ. ರೀಲ್ಸ್ ಅವಧಿ ಒಂದು ನಿಮಿಷ ಮೀರುವಂತಿಲ್ಲ. ಇದಕ್ಕೆ 300 ರೂ ನೋಂದಣಿ ಶುಲ್ಕ ಇದ್ದು ಒಬ್ಬರು ಒಂದು ರೀಲ್ಸ್ ಮಾತ್ರ ಕಳುಹಿಸಬಹುದಾಗಿದೆ. ರೀಲ್ಸ್ ನಲ್ಲಿ ಕನಿಷ್ಠ ಒಬ್ಬರು ಗರಿಷ್ಠ 4 ಜನರಿರಬಹುದು. ರೀಲ್ಸ್ ವೀಡಿಯೋ ಲಂಬ(Vertical) ಆಕಾರದಲ್ಲಿರಬೇಕು. ಆಯಾತಾಕಾರದ(Horizontal) ವಿಡಿಯೋಗಳಿಗೆ ಆಸ್ಪದವಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ರೀಲ್ಸ್ ಗಳಿಗೆ ಅವಕಾಶವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ನೋಂದಣಿ ಶುಲ್ಕವನ್ನು 9731152537 ನಂಬರ್ ಗೆ ಗೂಗಲ್ ಪೇ ಮಾಡಿ ಅದರ ಸ್ಕ್ರೀನ್ ಶಾಟ್ಅನ್ನು ತಮ್ಮ ಹೆಸರು, ವಯಸ್ಸು, ಊರಿನ ವಿವರಗಳ ಸಮೇತ 8310826979 ನಂಬರ್ ಗೆ ವಾಟ್ಸ್ಆ್ಯಪ್ ಮಾಡಬೇಕು.

ಸಾಕ್ಷ್ಯಚಿತ್ರ ಮತ್ತು ರೀಲ್ಸ್ ಕಳುಹಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಸಾಕ್ಷ್ಯಚಿತ್ರ/ರೀಲ್ಸ್  ಲಿಂಕ್ ಅನ್ನು 8310826979 ಗೆ ವಾಟ್ಸ್ ಮಾಡಬಹುದು. ಅಥವಾ kodagupressclub.drushyam@gmail.com ಗೆ ಇ-ಮೇಲ್‌ ಮಾಡಬಹುದು.

ಸಾಕ್ಷ್ಯ ಚಿತ್ರ ಮತ್ತು ರೀಲ್ಸ್ ಗಳ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭ ವಿಶ್ವ ಛಾಯಾಗ್ರಹಣ ದಿನವಾದ ಆಗಸ್ಟ್ 19 ರಂದು ಮಡಿಕೇರಿಯ ನೂತನ ಗಾಂಧಿಭವನ ಸಭಾಂಗಣದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ-8197602051 ಅಥವಾ ಕಾರ್ಯಕ್ರಮ ಸಂಚಾಲಕ ಮಂದನೆರವಂಡ ಯುಗ ದೇವಯ್ಯ 9731152537 ಅವರನ್ನು ಸಂಪರ್ಕಿಸಬಹುದು.

Leave a Reply