ಜಯನಗರದಲ್ಲಿ ಎಲ್.ಸಿ.ಹೆಚ್.ರೆಸಿಡೆನ್ಸ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳಾ ದಿನಾಚರಣೆ
ಡಾ.ರಾಜ್ ಕುಮಾರ್ ನಟಿಸಿದ ಸತ್ಯಹರಿಶ್ಚಂದ್ರ ಚಲನಚಿತ್ರದ ಹಾಡಿಗೆ ಎನ್.ನಾಗರಾಜು ಡ್ಯಾನ್ಸ್
ಬೆಂಗಳೂರು: ಜಯನಗರದ ಭೈರಸಂದ್ರ ವಾರ್ಡ್, ಎಲ್.ಐ.ಸಿ.ಕಾಲೋನಿ ಅಮ್ಮ, ಮಕ್ಕಳ ಉದ್ಯಾನವನದಲ್ಲಿ ಎಲ್.ಸಿ.ಹೆಚ್.ರೆಸಿಡೆನ್ಸ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎನ್.ನಾಗರಾಜು ಮಾತನಾಡಿ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿರವರ ಮಾರ್ಗದರ್ಶನದಲ್ಲಿ ಭೈರಸಂದ್ರ ವಾರ್ಡ್ ಸಾಂಸ್ಕೃತಿಕ ಕೇಂದ್ರವಾಗಿದೆ. ಪ್ರತಿವರ್ಷ ಮಹಿಳಾ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ವೈದ್ಯರು, ಪೌರ ಕಾರ್ಮಿಕ ಮಹಿಳೆಯರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗುರುತಿಸಿ ಸನ್ಮಾನಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಹತ್ತು ತಿಂಗಳಲ್ಲಿ ಚುನಾವಣೆ ಪೂರ್ವ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ನಾಡಿನ ಪ್ರತಿಯೊಬ್ಬ ಕುಟುಂಬಕ್ಕೆ ತಲುಪಿದೆ ಎಂದರು.

ಜನರ ನಡುವೆ ಇದ್ದಾಗ ಜನರ ಸಮಸ್ಯೆ ನಿವಾರಣೆ ಸಾಧ್ಯ, 5 ಗ್ಯಾರಂಟಿ ಯೋಜನೆ ಪ್ರತಿ ಕುಟುಂಬಕ್ಕೆ ತಲುಪಿವೆ. ಭೈರಸಂದ್ರ ವಾರ್ಡ್ ನಲ್ಲಿ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷನಾಗಿ ನೇಮಕ ಮಾಡಿದ್ದಾರೆ ಎಂದರು.

ಜನರ ಜೊತೆಯಲ್ಲಿ ನಿರಂತರ ಸಂಪರ್ಕದಿಂದ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ನನ್ನ ರಾಜಕೀಯ ಕ್ಷೇತ್ರದಲ್ಲಿ ಯಶ್ವಸಿಯಾಗಲು ನೀವು ಕಾರಣ, ನಿಮ್ಮ ಋಣ ತೀರಿಸುವ ಮಾಡುತ್ತಿದ್ದೇನೆ ಎಂದರು.
ಎಲ್.ಸಿ.ಹೆಚ್.ರೆಸಿಡೆನ್ಸ್ ಅಸೋಸಿಯೇಷನ್ ಮಹಿಳೆಯರಿಂದ ಗೀತೆಗಾಯನ, ನೃತ್ಯ ಮತ್ತು ಡ್ಯಾನ್ಸ್ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಲ್.ಸಿ.ಹೆಚ್.ರೆಸಿಡೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಾಂಕ್ ಮಾರ್ಥ, ಕಾರ್ಯದರ್ಶಿ ಟಿ.ಕೆ.ಪರಮೇಶ್ವರನ್, ಉಪಾಧ್ಯಕ್ಷ ಜಿ.ಎನ್.ಮಂಜುನಾಥ್ ಮೊದಲಾದವರು ಇದ್ದರು.




