ಇದು ಬರೋಬ್ಬರಿ 31 ಲಕ್ಷ ರೂ. ಕಳೆದುಕೊಂಡ ಮಹಿಳೆಯ ವ್ಯಥೆ

2 years ago

ಬೆಂಗಳೂರು: ವಿದೇಶಿ ಉಡುಗೊರೆಯ ಆಮಿಶಕ್ಕೆ ಬಲಿಯಾದ ಬೆಂಗಳೂರಿನ ವಿದ್ಯಾವಂತ ಮಹಿಳೆಯೊಬ್ಬರು ಸುಮಾರು 31 ಲಕ್ಷ ರೂ. ಹಣ ಕಳೆದುಕೊಂಡು ನಗರ ಪೊಲೀಸರ ಮೊರೆ ಹೋಗಿದ್ದಾರೆ. ಜಯನಗರ 3ನೇ ಬ್ಲಾಕ್ನ ನಿವಾಸಿ ಅನುಪಮಾ ಕಿರಣ್ ಎಂಬುವರು ತಮಗೆ ಮೋಸ ಮಾಡಲಾಗಿದೆ. ವಂಚಕರ ಮಾತು ನಂಬಿ ಮೋಸ ಹೋಗಿದ್ದೇನೆ ಎಂದು ದೂರು ದಾಖಲಿಸಿದ್ದಾರೆ.

ಲಕ್ಕಿ ಡ್ರಾ ಮೂಲಕ ತಮ್ಮ ಹೆಸರು ಆಯ್ಕೆಯಾಗಿದೆ. ಹೀಗಾಗಿ ತಾವು ನಿಮಗೆ 5 ಕೋಟಿ ಅಮೆರಿಕನ್ ಡಾಲರ್ ಉಡುಗೊರೆ ನೀಡುವುದಾಗಿ ಇಮೇಲ್ ಬಂದ ಬಳಿಕ ಮಹಿಳೆ ಹಣ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 12ರಂದು ತನಗೆ ಇಮೇಲ್ ಬಂದಿದ್ದು, ಸುಮಾರು 5 ಕೋಟಿ ಅಮೆರಿಕನ್ ಡಾಲರ್ ಗಿಫ್ಟ್ ಗೆದ್ದಿರುವುದಾಗಿ ತಿಳಿಸಿದ್ದರು. ಆಕೆಗೆ ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ರೇಮಂಡ್ ಆಸ್ಟಿನ್ ಎಂದು ಹೇಳಿಕೊಳ್ಳುವ ಒಬ್ಬ ಆರೋಪಿಯಿಂದ ಕರೆ ಬಂದಿದೆ. ಉಡುಗೊರೆಯನ್ನು ಪಡೆಯಲು ಶುಲ್ಕ ಪಾವತಿಸಲು ಅವರು ರಾಯಭಾರ ಕಚೇರಿಯಿಂದ ಇಮೇಲ್ ಸಂದೇಶ ಬರಲಿದೆ. ಅದರ ಮಾರ್ಗಸೂಚಿಯನ್ನು ತಾವು ಪಾಲಿಸಬೇಕು ಎಂದರು.

ಅದರಂತೆ ರಾಯಭಾರ ಕಚೇರಿಯ ಅಧಿಕಾರಿ ಎಂದು ಹೇಳಲಾದ ವ್ಯಕ್ತಿಯ ಮಾತಿನಂತೆ ಹದಿನೈದು ದಿನಗಳಲ್ಲಿ, ಆರೋಪಿಯು ವಿವಿಧ ರೀತಿಯ ಶುಲ್ಕಗಳಿಗೆ ಹಣವನ್ನು ವರ್ಗಾಯಿಸುವಂತೆ ಮಾಡಿದನು. ಸುಮಾರು ಎರಡು ತಿಂಗಳ ಕಾಲ ಈ ಹಗರಣ ಹಂತ ಹಂತವಾಗಿ ನಡೆದಿದ್ದು, ಆ ಸಮಯದಲ್ಲಿ ಆರೋಪಿ ಹಣವನ್ನು ವಿವಿಧ ರೀತಿಯ ಶುಲ್ಕಗಳಿಗಾಗಿ ವರ್ಗಾಯಿಸಿದ್ದಾಗಿ ತಿಳಿಸಿದ್ದಾನೆ. ಒಬ್ಬ ಆರೋಪಿ ಆಕೆಯ ಮನೆಗೆ ಭೇಟಿ ಕೂಡ ನೀಡಿದ್ದ.

ಆರೋಪಿಗಳಲ್ಲಿ ಒಬ್ಬ ಆಕೆಯ ಮನೆಗೆ ಭೇಟಿ ನೀಡಿ ವಿದೇಶಿ ಕರೆನ್ಸಿ ನೋಟುಗಳು ಅಸಲಿಯೇ ಎಂದು ಪರಿಶೀಲಿಸಲು ಕರೆನ್ಸಿ ನೀಡಿದ್ದಾನೆ. ಅನುಪಮಾ ಕರೆನ್ಸಿಯನ್ನು ಬ್ಯಾಂಕ್ ಮತ್ತು ವಿದೇಶಿ ವಿನಿಮಯ ಶಾಖೆಗೆ ಕೊಂಡೊಯ್ದು, ಅದು ಒರಿಜಿನಲ್ ಹಣ ಎಂದು ದೃಢಪಟ್ಟಿದೆ.

ಡಿಸೆಂಬರ್ 28 ರಂದು, ಗುಣ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಆಕೆಯ ಮನೆಯ ಬಳಿಗೆ ಬಂದು ಕೆಲವು ಡಾಲರ್ ನೀಡಿದ. ಡಾಲರ್ ನಿಜವೇ ಎಂದು ಪರಿಶೀಲಿಸುವಂತೆ ಕೇಳಿದ. ಡಾಲರ್ಗಳು ಅಸಲಿ ಎಂದು ತಿಳಿದ ನಂತರ, ಮಹಿಳೆ ಅವುಗಳನ್ನು ಹಣ ವಿನಿಮಯ ಕೇಂದ್ರದಲ್ಲಿ ರೂಪಾಯಿಗಳಿಗೆ ಬದಲಾಯಿಸಿದ್ದಾರೆ.

ಆಕೆ ಅವರಿಂದ ಸುಮಾರು 45,000 ರೂ. ಹಣ ಪಡೆದ ನಂತರ, ಅನುಪಮಾ ಅವರನ್ನು ಕುರುಡಾಗಿ ನಂಬಿದ್ದಾರೆ. ಅದಾದ ನಂತರ ಸುಮಾರು 31 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಿಫ್ಟ್ ಹಣ ನೀಡಲು ಬರುವಾಗ ತಾನು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಸಿಬಿಐ ಕ್ಲಿಯರೆನ್ಸ್ ಶುಲ್ಕ, ತನಿಖಾಧಿಕಾರಿ ಶುಲ್ಕ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಪಾವತಿಸದಿದ್ದರೆ ತೊಂದರೆಯಾಗುತ್ತದೆ ಎಂದು ವಂಚಕರು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ.

Leave a Reply