ನಿಮ್ಮವರನ್ನು ಎಚ್ಚರಗೊಳಿಸಿ: ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್
ಬಳ್ಳಾರಿ: ದಿನನಿತ್ಯದ ಮೊಬೈಲ್ ಬಳಕೆಯಲ್ಲಿ ವ್ಯವಹರಿಸುವಾಗ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಅದೇ ರೀತಿ ಸುತ್ತ-ಮುತ್ತಲಿನವರನ್ನು ಎಚ್ಚರಿಕೆಯಿಂದಿರಲು ತಿಳಿಸಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಪಂ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ವಂಚನೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ‘ಜಾಗ್ರತೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ವ್ಯಸನಿಗಳು. ಇದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುಷ್ಪರಿಣಾಮವಿದೆ. ಹೀಗಾಗಿ ಜಾಗರೂಕರಾಗಿ ಬಳಸಬೇಕು ಎಂದರು.
ಸೈಬರ್ ಜಾಲಕ್ಕೆ ಪ್ರತಿಯೊಬ್ಬರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ. ಕೃತಕ ಬುದ್ದಿಮತ್ತೆ ಬಂದಾಗಿನಿಂದ ಇನ್ನಷ್ಟು ಬ್ಲಾಕ್ಮೇಲಲ್ಗ ಳು ಹೆಚ್ಚಾಗುತ್ತಿವೆ. ಯುವ ಪೀಳಿಗೆಯು ಸೈಬರ್ ವಂಚಕರಿಂದ ಎಚ್ಚರಿಕೆ ವಹಿಸಿ, ಸುತ್ತಮುತ್ತಲಿನವರನ್ನೂ ಜಾಗೃತಗೊಳಿಸಬೇಕು ಎಂದರು.
ವಾಹನ, ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದೇಶಗಳಲ್ಲಿ ಹೇಗೆ ಸಂಚಾರಿ ನಿಯಮಗಳನ್ನು ಪಾಲಿಸುತ್ತೇವೆಯೋ, ಅದೇರೀತಿಯಾಗಿ ನಮ್ಮ ದೇಶದಲ್ಲಿಯೂ ನಿಯಮಗಳನ್ನು ಪಾಲಿಸಬೇಕು. ಸ್ವಸ್ಥ ವಾತಾವರಣ ನಿರ್ಮಾಣ ಮಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆನ್ಲೈಾನ್ ವಂಚನೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಪೊಲೀಸ್ ಇಲಾಖೆಯು ರೀಲ್ಸ್ ವಿಡಿಯೋಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಸಾಕಷ್ಟು ಜಾಗೃತಿ ನೀಡುತ್ತಿದ್ದರೂ ವಂಚನೆಗೊಳಗಾಗುವುದು ತಪ್ಪುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 3 ಸಾವಿರ ಅಪರಾಧ ಪ್ರಕರಣಗಳು ದಾಖಲಾದರೆ, ಅದರಲ್ಲಿ 2 ಸಾವಿರ ಪ್ರಕರಣಗಳು ಸೈಬರ್ ವಂಚನೆ ಪ್ರಕರಣಗಳಾಗಿವೆ. ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆಯು ಜಾಗೃತಿಯ ಮೂಲಕ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಪೊಲೀಸರು ಮತ್ತು ಸಾರ್ವಜನಿಕರು ಜೊತೆಗೂಡಿದರೆ ಆಗುವ ಸಂಭವಿಸುವ ಪ್ರಕರಣಗಳನ್ನು ತಡೆಗಟ್ಟಬಹುದು ಎಂದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ‘ಜಾಗೃತ್’ ವೆಬ್ಸೈಣಟ್ಗೆಯ ಚಾಲನೆ ನೀಡಿ ಮಾತನಾಡಿದ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ನಿಯಮಗಳು, ಮಾದಕ ವಸ್ತುಗಳ ಜಾಗೃತಿ ಮತ್ತು ಪ್ರಕರಣ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್ ಇಲಾಖೆಯು ‘ಜಾಗೃತ್’ ಎಂಬ ವೆಬ್ಸೈೆಟ್ನ್ನು ಸಿದ್ದಪಡಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಜಾಗೃತಿ ವಿಡಿಯೋ ಬಿಡುಗಡೆ ಮಾಡಿ, ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಮಿನೆರ ಸ್ಟೀಲ್ಸ್ ಮತ್ತು ಪವರ್ ಪ್ರೈ.ಲಿಮಿಟೆಡ್ನ ನಿರ್ದೇಶಕ ಹನುಮಂತ ರೆಡ್ಡಿ, ಸ್ಮಯೋರ್ ಕಂಪನಿಯ ಏಕನಾಥ ಘೋರ್ಪಡೆ, ಕಿರ್ಲೋಸ್ಕರ್ ಕಂಪನಿಯ ಪ್ರಭುದೇವ ಸೇರಿದಂತೆ ಎನ್ಜಿರಒ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.




