ಮೈಸೂರು ಜಿಲ್ಲಾಧಿಕಾರಿಯಾಗಿದ್ದ ‘ಶರತ್’ ವರ್ಗಾವಣೆಗೆ ಕಾರಣವೇನು?

5 years ago

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಶಂಕರ್ ಅವರ ವಗಾ೯ವಣೆಯ ನಂತರ ತೆರವಾದ ಸ್ಥಾನಕ್ಕೆ ಶರತ್ ಎನ್ನುವ ಅಧಿಕಾರಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಇವರನ್ನು ಕೇವಲ ಒಂದೇ ತಿಂಗಳಲ್ಲಿ ವರ್ಗಾವಣೆ ಮಾಡಿದ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು  ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿತು. ಇನ್ನೊಂದು ಮಾತು ನೆನಪಿರಲಿ ಶರತ್ ಅವರಿಗೆ ಇನ್ನೂ ಪೋಸ್ಟಿಂಗ್ ನೀಡಿಲ್ಲ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ಅವರನ್ನು ವರ್ಗಾವಣೆ ಮಾಡಿದಾಗ ಸರ್ಕಾರದ ವಿರುದ್ಧ ಮಾತನಾಡಿದ್ದು ಸ್ವಪಕ್ಷೀಯ ಏಕೈಕ ಶಾಸಕ ನಂಜನಗೂಡಿನ ಬಿ.ಹಷ೯ವಧ೯ನ್. ಇದಕ್ಕೆ ಯಾವ ಜನಪ್ರತಿನಿಧಿಯೂ ಧ್ವನಿ ಗೂಡಿಸಲಿಲ್ಲ. ಬೆಂಬಲಕ್ಕೆ ನಿಲ್ಲಲೂ ಇಲ್ಲ. ಯಾವ ಮಾಧ್ಯಮಗಳು ಸಹ ಪ್ರಶ್ನಿಸಲಿಲ್ಲ. ಇವತ್ತು ಫೇಸ್ ಬುಕ್ ನಲ್ಲಿ ರೋಹಿಣಿ ಸಿಂಧೂರಿ ಪರವಾಗಿ ಚೀರಾಡುತ್ತಿರುವವರು ಯಾರೂ ಸಹ ಪ್ರಶ್ನಿಸಲಿಲ್ಲ. ಇವರೆಲ್ಲರೂ ಮೌನವಾಗಲು ಕಾರಣ ಶರತ್ ದಲಿತ ಅಧಿಕಾರಿ ಎಂಬುದು ಅಷ್ಟೇ. ಆದರೆ ಇಂದು ಕೆಲ ದಲಿತ ಯುವಕರು ರೋಹಿಣಿ ಸಿಂಧೂರಿಯವರ ಪರ ಇರುವುದನ್ನು ನೋಡಿ ಅಸಹ್ಯವಾಗುತ್ತಿದೆ!

ಶರತ್ ಅವರು ಗುಲ್ಬರ್ಗಾದ ಜಲ್ಲಾಧಿಕಾರಿಯಾಗಿ ಬಹಳ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದ್ದರು. ಆದರೆ ಒಬ್ಬ ದಲಿತ ಅಧಿಕಾರಿ ದಕ್ಷನಾಗಿ, ಪ್ರಾಮಾಣಿಕನಾಗಿ, ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರು ಅವರನ್ನು ಯಾರು ಹೊಗಳುವುದಿಲ್ಲ, ಪ್ರಶಂಸಿಸುವುದಿಲ್ಲ, ಬೆಂಬಲಕ್ಕೆ ನಿಲ್ಲುವುದಿಲ್ಲ ಎನ್ನುವುದಕ್ಕೆ ಶರತ್ ಅವರ ವರ್ಗಾವಣೆಯೇ ಉದಾಹರಣೆ. ಅದೇ ರೀತಿ ಅಂತಹ ಅಧಿಕಾರಿ ಪರವಾಗಿ ನಿಂತಂತಹ ಜನಪ್ರತಿನಿಧಿಯ ಬಂಬಲಕ್ಕೆ ನಿಲ್ಲುವುದಿಲ್ಲ ಎನ್ನುವುದಕ್ಕೆ ಶಾಸಕ ‘ಬಿ.ಹರ್ಷವರ್ಧನ್’ ಅವರೇ ಉದಾಹರಣೆ.

ಆದರೆ ಅದೇ ರೋಹಿಣಿ ಸಿಂಧೂರಿ ಯಾವ ರೀತಿಯ ದಕ್ಷ ಅಧಿಕಾರಿಯೂ ಅಲ್ಲ, ಅವರಲ್ಲಿ ಪ್ರಾಮಾಣಿಕತೆಯೂ ಇಲ್ಲ. ಯಾವ ಜನಪರ ಕೆಲಸ ಮಾಡದಿದ್ದರೂ ಸಹ ಅವರ ಬೆಂಬಲವಾಗಿ ನಿಲ್ಲಲು ಕಾರಣವೇನು? ಭೂಗಳ್ಳರ ಫೈಲ್ ಅದು ಇದು ಮಣ್ಣು- ಮಸಿ ಎಲ್ಲವೂ ಮಾಧ್ಯಮಗಳ ಸೃಷ್ಟಿ! ಇಲ್ಲಿ ಜಾತಿ, ವ್ಯಾಪಾರ, ಸೌಂದರ್ಯ ಮತ್ತು ಅಧಿಕಾರ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ.

ಮನುವಾದಿ ಮಾಧ್ಯಮಗಳು ಪ್ರೀತಿ ಅನ್ನುವವನನ್ನು ಏತಿ ಅನ್ನಿಸುತ್ತಿವೆ, ಹಾಗೆಯೇ ಏತಿ ಅನ್ನುವವನನ್ನು ಪ್ರೀತಿ ಅನ್ನಿಸುತ್ತಿವೆ ಅಷ್ಟೇ!

  • ಪ್ರಜ್ವಲ್ ಶಶಿ ತಗಡೂರು

Leave a Reply