ಅಂದಹಾಗೆ, ಈ ವಿಡಿಯೋ, ಫೋಟೋಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ?: ಪ್ರಿಯಾಂಕ್ ಖರ್ಗೆ

1 year ago

ಬಿಜೆಪಿ ಶಾಸಕ ಬಸವರಾಜ್ ಮತ್ತಿಮೊಡರವರು ನನ್ನ “ಸಹೋದರ” ಹೀಗೆ ಹೇಳಿದ್ದು ರಾಜು ಕಪನೂರು.

ಬಿಜೆಪಿಯ ರಾಜ್ಯಾಧ್ಯಕ್ಷ Vijayendra Yediyurappa ಅವರೇ, ನಿಮ್ಮದೇ ಪಕ್ಷದ ಅಭ್ಯರ್ಥಿಗಳು ಯಾರು, ನಿಮ್ಮದೇ ಪಕ್ಷದ ಶಾಸಕರು ಯಾರು, ನಿಮ್ಮದೇ ಪಕ್ಷದ ಮುಖಂಡರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗುವುದಾದರೆ ಈ ಫೋಟೋಗಳಲ್ಲಿ ಇರುವ ನಿಮ್ಮವರನ್ನು ಗುರುತಿಸಿ.

ಅಂದಹಾಗೆ, ಈ ವಿಡಿಯೋ, ಫೋಟೋಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ?

ಹಲವು ಬಿಜೆಪಿ ಮುಖಂಡರು, ಶಾಸಕರು ರಾಜು ಕಪನೂರಗೆ ಪರಮಾಪ್ತರಿದ್ದಾರೆ, ಅವರ ರಾಜೀನಾಮೆಯನ್ನು ಯಾವಾಗ ಕೇಳುವಿರಿ
BJP Karnataka?

ಮುತ್ತಿಗೆ ಹಾಕಲು ಬರುವಾಗ ವಿಜಯೇಂದ್ರರವರು ತಮ್ಮ ಪಕ್ಷದ ಯಾವ ಯಾವ ಶಾಸಕರು ರಾಜು ಕಪನೂರ ಜೊತೆಗೆ ಆಪ್ತರಾಗಿದ್ದಾರೆ ಎನ್ನುವ ಬಗ್ಗೆ ಹೋಮ್ ವರ್ಕ್ ಮಾಡಿಕೊಂಡು ಬರುವುದು ಉತ್ತಮ.

ಮುತ್ತಿಗೆಗೆ ಬರುವಾಗ ಈ ಎಲ್ಲಾ ಫೋಟೋಗಳನ್ನೂ ಹಿಡಿದು ಬರಬೇಕು ಎಂದು ನನ್ನ ಮನವಿ.

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Leave a Reply