ಸಚಿವ ಸಂಪುಟದ ಸದಸ್ಯರಾದ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಯನ್ನು ಕೇಳುತ್ತಿರುವ ಬಿಜೆಪಿಗರು ಎಂದಿನಂತೆ ಆಡಳಿತ ಪಕ್ಷದ ಮೇಲೆ ದ್ವೇಷಕ್ಕಾಗಿಯೇ ದ್ವೇಷ ಎಂಬ ತಮ್ಮ ಅನೀತಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿಷಯಾಧಾರಿತವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಹಿಂದಿನಿಂದಲೂ ದೊಡ್ಡ ಮಟ್ಟದ ಅಸಹನೆಯನ್ನು ಹೊಂದಿರುವ ಬಿಜೆಪಿಗರು ಇದೀಗ ಬಿಜೆಪಿ ಪಕ್ಷದವರೊಂದಿಗೆ ನಂಟನ್ನು ಇಟ್ಟುಕೊಂಡಿರುವ ಸಚಿನ್ ಎಂಬ ವ್ಯಕ್ತಿಯ ಸಾವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.
ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಕೂಡಾ ವಿಷತಾಧಾರಿತವಾಗಿ ರಾಜಕೀಯ ಮಾಡಲು ಬಾರದೇ ಕೇವಲ ಶವ ರಾಜಕೀಯದ ಮೂಲಕವೇ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವ ಕೆಟ್ಟ ಕೆಲಸ ಮಾಡಿದ್ದ ಬಿಜೆಪಿಗರು ಸಿಬಿಐ ತನಿಖೆಯ ವರದಿಗಳ ಬಂದ ನಂತರ ಸುಮ್ಮನಾಗಿದ್ದರು.
ಹಲವು ಅಪಪ್ರಚಾರದ ಪ್ರಯತ್ನಗಳ ನಡುವೆಯೂ ಜನಾಭಿಪ್ರಾಯ ಪಡೆಯುವಲ್ಲಿ ಸೋತ ಇವರು ಬಹುಮತ ಪಡೆಯಲು ವಿಫಲರಾಗಿ ನಂತರ ಇದ್ದ ಸರ್ಕಾರ ಕೆಡವಿ ಕೆಟ್ಟ ಆಡಳಿತ ನಡೆಸಿದ್ದು ಈಗ ಇತಿಹಾಸ.
ಈಗ ಸರ್ಕಾರವನ್ನು ವಿರೋಧಿಸಲು ಕಾರಣವಿಲ್ಲದೇ ಒದ್ದಾಡುತ್ತಿರುವ ಬಿಜೆಪಿಗರು ಪ್ರಿಯಾಂಕ್ ಖರ್ಗೆ ಅವರನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ!
ಬಿಜೆಪಿಗರೇ, ವಿಷಯಾಧಾರಿತ ಹೋರಾಟ ನಡೆಸದೇ ಮತ್ತೆ ಮತ್ತೆ ಕೋಮು ರಾಜಕೀಯ, ಶವ ರಾಜಕೀಯ ಮಾಡುತ್ತಿದ್ದರೆ ಜನ ನಿಮ್ಮನ್ನು ಮತ್ತೊಮ್ಮೆ ತಿರಸ್ಕರಿಸುವುದು ನಿಶ್ಚಿತ.!
– ಡಾ. ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




