ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ದೇಶಾದ್ಯಂತ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಪ್ತ ಹಾಗೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಮಹಿಳೆಯೊಬ್ಬರ ಜತೆಗಿನ ವಾಟ್ಸ್ಆ್ಯಪ್ ಕಾಲ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
- ಸರ್ವಜನಾಂಗದ ಶಾಂತಿಯ ತೋಟವೇ ನಮ್ಮ ಗುರಿ: ಸಿದ್ದರಾಮಯ್ಯ
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
ರಾಮನಗರ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯೂ ಆಗಿರುವ ಮಹಿಳೆ ಜತೆ ಹುಸೇನ್, ಆಪ್ತವಾಗಿ ಮಾತನಾಡುತ್ತಿರುವ 2 ನಿಮಿಷ 27 ಸೆಕೆಂಡ್ನ ವಿಡಿಯೊ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದರ ಬೆನ್ನಲ್ಲೇ ಅದೇ ಮಹಿಳೆ ರಾಮನಗರ ಜಿಲ್ಲೆಯ ವಿವಿಧ ರಾಜಕಾರಣಿಗಳ ಜೊತೆ ಆಪ್ತವಾಗಿ ಮಾತನಾಡಿರುವ ವಿಡಿಯೋ ದೃಶ್ಯಾವಳಿಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸ ಒದಗಿಸಿದೆ.
ಈ ನಡುವೆ ತಮ್ಮ ವಿಡಿಯೋ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ನಾನೇ ಮಾತನಾಡಿರುವ ವಿಡಿಯೊ ಇರಬಹುದು. ನಾನು ಗೆದ್ದಿರುವುದಕ್ಕೆ ಎದುರಾಳಿಗಳು ಈ ರೀತಿಯ ವಿಡಿಯೊ ಹರಿಬಿಟ್ಟಿದ್ದಾರೆ. ಇಂತಹವೆಲ್ಲಾ ಬರುತ್ತಿರುತ್ತವೆ. ಅದರಲ್ಲಿರುವ ಸತ್ಯಾಂಶವೇನು ಎಂದು ನೋಡುವೆ. ಎಂದಿದ್ದಾರೆ.
ಯಾರದ್ದೋ ಮೇಲಿನ ಕೋಪಕ್ಕೆ ನನ್ನನ್ನು ಸಿಲುಕಿಸುವ ಸಂಚು ನಡೆದಿದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಶಾಸಕನಾದ ನಮಗೆ ಹಲವಾರು ಮಂದಿ ಕರೆ ಮಾಡುತ್ತಾರೆ. ಈ ಕರೆ ಸುಮಾರು ಒಂದೂವರೆ ವರ್ಷ ಹಳೆಯದು ಅದನ್ನು ಈಗ ಇಟ್ಟುಕೊಂಡು ನನ್ನ ತೇಜೋವಧೆ ಮಾಡಲು ಸಂಚು ರೂಪಿಸಿರುವುದು ಬೇಸರ ತರಿಸಿದೆ ಎಂದರು.
ಈ ನಡುವೆ ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್, ರಾಮನಗರದ ಶಾಸಕರಿಗೆ ಸೇರಿದ್ದು ಎಂದು ಹೇಳಲಾದ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸೂಚನೆ ನೀಡುವುದಾಗಿ ಹೇಳಿದ್ದಾರೆ.
ಜಾಲತಾಣಗಳಲ್ಲಿ ಇಂತಹ 108 ವಿಡಿಯೋಗಳಿರುತ್ತವೆ. ಎಲ್ಲರದೂ ಇರುತ್ತವೆ. ಸಿಡಿ ಬಾಯ್ಸ್ ಗೆ ಸೇರಿದ ವಿಡಿಯೋಗಳಿಲ್ಲವೇ? ಎಂದು ಪ್ರಶ್ನಿಸಿದರು.
ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ವಿಶೇಷ ಕಾನೂನಿನ ಅಗತ್ಯವಿದೆ. ಬ್ಲಾಕ್ಮೇಲ್ ಮಾಡುವುದು, ಖಾಸಗಿ ಬದುಕಿಗೆ ಧಕ್ಕೆ ತರುವುದು, ಅಧಿಕಾರ ದುರುಪಯೋಗ ಸೇರಿದಂತೆ ಹಲವು ವಿಚಾರಗಳನ್ನೊಳಗೊಂಡಂತೆ ಕ್ರಮ ಕೈಗೊಳ್ಳಲು ಕಾನೂನಿನ ಅಗತ್ಯವಿದೆ ಎಂದು ಒತ್ತಾಯಿಸಿದರು.




