ಅಪಾಯದಲ್ಲಿರುವುದು ಧರ್ಮವಲ್ಲ, ಶಿಕ್ಷಣ, ಉದ್ಯೋಗ, ಆರೋಗ್ಯ, ಆರ್ಥಿಕತೆ, ಜನತೆಯ ಬದುಕು: ಸುನಿಲ್ ಕುಮಾರ್ ಬಜಾಲ್

3 years ago

ಮಂಗಳೂರು: ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ ರಾಜ್ಯದ ಬಿಜೆಪಿ ಸರಕಾರ ಜನತೆಗೆ ಎಸಗಿದ ಅನ್ಯಾಯವನ್ನು ಮರೆಮಾಚಲು ಮತ್ತೆ ಧರ್ಮ ರಕ್ಷಣೆ, ಹಿಂದುತ್ವ ಎಂಬ ಹಳಸಿದ ಅಸ್ತ್ರವನ್ನು ಮುನ್ನೆಲೆಗೆ ತರುತ್ತಿದೆ. ಈ ಮೂಲಕ ಯುವಜನತೆಯ ಮನಸ್ಥಿತಿಯನ್ನು ಹಾಳು ಮಾಡಲು ಹಾತೊರೆಯುತ್ತಿದೆ. ಇಂದು ಅಪಾಯದಲ್ಲಿರುವುದು ಧರ್ಮವಲ್ಲ, ಬದಲಾಗಿ ಶಿಕ್ಷಣ ಉದ್ಯೋಗ ಆರೋಗ್ಯ ಆರ್ಥಿಕತೆ ಸೇರಿದಂತೆ ಜನತೆಯ ಬದುಕು ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಅಭಿಪ್ರಾಯಪಟ್ಟರು.

ಬಿಜೆಪಿ ಸೋಲಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ CPIM ನೇತೃತ್ವದಲ್ಲಿ ದ. ಕ ಜಿಲ್ಲೆಯಾದ್ಯಂತ 2 ದಿನಗಳ ಕಾಲ ಸಂಚರಿಸಿದ ವಾಹನ ಪ್ರಚಾರ ಜಾಥಾವನ್ನು ಯೇಯ್ಶಾಡಿಯಲ್ಲಿ ಸಮಾರೋಪಗೊಳಿಸುತ್ತಾ ಅವರು, ಈ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ CPIM ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ, ಅವಿಭಜಿತ ದ. ಕ.ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಕೊಡುಗೆಯನ್ನು ನೀಡದ ಬಿಜೆಪಿಯ ಜನಪ್ರತಿನಿಧಿಗಳು ಕರಾವಳಿಯನ್ನು ತಮ್ಮ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡುವ ಮೂಲಕ ಜಿಲ್ಲೆಯ ಜನತೆಯ ಬದುಕನ್ನೇ ನಾಶ ಮಾಡಿದ್ದಾರೆ. ಮಾತ್ರವಲ್ಲದೆ ಬಹುತೇಕ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮೂಲಕ ತಾವುಗಳು ಅತ್ಯಂತ ನೀಚ ವ್ಯಕ್ತಿತ್ವವುಳ್ಳವರು ಎಂಬುದನ್ನು ಸಮಾಜಕ್ಕೆ ತೋರಿಸಿದ್ದಾರೆ.ಇಂತಹವರನ್ನು ಜನಪ್ರತಿನಿಧಿಗಳು ಅನ್ನೋದಕ್ಕೆ ಅಸಹ್ಯವಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ CPIM ಜಿಲ್ಲಾ ನಾಯಕರಾದ ಕೃಷ್ಣಪ್ಪ ಕೊಂಚಾಡಿ,ಬಿ ಕೆ ಇಮ್ತಿಯಾಜ್, ನವೀನ್ ಕೊಂಚಾಡಿ,ರವಿಚಂದ್ರ ಕೊಂಚಾಡಿ, ಜಾಥಾ ತಂಡದ ಉಪನಾಯಕರಾದ ಸಂತೋಷ್ ಬಜಾಲ್,ಮನೋಜ್ ವಾಮಂಜೂರು,ಜಾಥಾ ಮೆನೇಜರ್ ಯೋಗೀಶ್ ಜಪ್ಪಿನಮೋಗರು,ಸ್ಥಳೀಯ ನಾಯಕರಾದ ದಯಾನಂದ ಶೆಟ್ಟಿಗಾರ್,ನಿತಿನ್ ಬಂಗೇರ, ತಿಮ್ಮಯ್ಯ ಕೊಂಚಾಡಿ, ಪಾಂಡುರಂಗ,ಪ್ರವೀಣ್, ಜಾಥಾ ತಂಡದ ಸದಸ್ಯರಾದ ವಿಲ್ಲಿ ವಿಲ್ಸನ್, ಅನ್ಸಾರ್ ಫೈಸಲ್ ನಗರ, ರಿಹಾಬ್, ಸಾದಿಕ್ ಮುಲ್ಕಿ, ಖಾದರ್ ಅದ್ಯಪಾಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply