ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನನ್ನ Facebook Page ನಲ್ಲಿ ಸುಮಾರು #68ಸಾವಿರ ಫಾಲೋವರ್ಸ್, ಇನ್ನು ನನ್ನ Facebook IDಯಲ್ಲಿ #20ಸಾವಿರ ಫಾಲೋವರ್ಸ್, ಇನ್ನು instagram ನಲ್ಲಿ #18ಸಾವಿರ ಫಾಲೋವರ್ಸ್, ಟ್ವಿಟರ್ ನಲ್ಲಿ #6ಸಾವಿರ ಫಾಲೋವರ್ಸ್ ಹಾಗೂ ನನ್ನ ಯೂಟ್ಯೂಬ್ ನಲ್ಲಿ #16ಸಾವಿರ ಫಾಲೋವರ್ಸ್ ಇದ್ದಾರೆ.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಇನ್ನು 2009ರಲ್ಲಿ ನಾನು ಫೇಸ್ಬುಕ್ ಖಾತೆ ತೆರೆದದ್ದು . ಅಂದಿನಿಂದ ಇಂದಿನವರೆಗೂ ಜನಗಳಿಗೆ ಉಪಯೋಗವಾಗುವ ಅದೆಷ್ಟೋ ಹೋರಾಟಗಳು , ನಾಡು ನುಡಿ ವಿಚಾರವಾಗಿ ಜೈಲಿಗೆ ಹೋಗುವಷ್ಟು ಗಟ್ಟಿತನದ ಹೋರಾಟಗಳು ,ಜಾಗೃತಿ ಮೂಡಿಸಲು ಲೆಕ್ಕವಿಲ್ಲದಷ್ಟು ಟ್ವಿಟರ್ ಟ್ರೆಂಡ್ ಗಳು ಮಾಡಿದ್ದೇನೆ ಯಾರೂ ಕೂಡ ಕಮೆಂಟಾಗಬಹುದು ಇನ್ ಬಾಕ್ಸ್ ಆಗಬಹುದು ವಾಟ್ಸಪ್ ಮೆಸೇಜ್ ಆಗಬಹುದು ಇಷ್ಟು ಆಸಕ್ತಿವಹಿಸಿ ಮೆಸೇಜ್ ಹಾಕಿರಲಿಲ್ಲ.
ಹೋಗಲಿ ಒಬ್ಬ ಕನ್ನಡ ಹೋರಾಟಗಾರ ಇವನು ಬಹಳ ಸಣ್ಣ ವಯಸ್ಸಿನಿಂದ ನೋಡುತ್ತಾ ಬಂದಿದ್ದೇವೆ ಈತನ ಹುಟ್ಟು ಹಬ್ಬಕ್ಕಾಗಲಿ ನನ್ನ ಖಾತೆಯಲ್ಲಿರುವ ಇರುವ ಅಷ್ಟು ಸ್ನೇಹಿತರು ಶುಭಾಶಯ ಕೋರೋಣ ಎಂದು ಯಾರೂ ಮೆಸೇಜ್ ಹಾಕಿರಲಿಲ್ಲ. ಅಬ್ಬಬ್ಬಾ ಎಂದರೆ ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಅತಿ ಹೆಚ್ಚು ಎಂದರೆ 4ರಿಂದ 5 ಸಾವಿರ ಹುಟ್ಟು ಹಬ್ಬದ ಶುಭಾಶಯಗಳು ಮೆಸೇಜ್ ನನಗೆ ಬರುತ್ತದೆ ಅದನ್ನು ಬಿಟ್ಟು ಇನ್ನು ಯಾವುದೇ ಸಂದರ್ಭದಲ್ಲಿ ನನಗೆ ಇಷ್ಟು ಮೆಸೇಜುಗಳು ಬರುವುದಿಲ್ಲ.
ಆದರೆ ನಿನ್ನೆ ಒಂದೇ ಒಂದು ಸ್ಟೇಟಸ್ಗೆ ನನ್ನ ಫೋನ್ ತುಂಬಿ ತುಳುಕುವಷ್ಟು ಮೆಸೇಜುಗಳು ಬಂದಿವೆ ಎಂದರೆ ನೀವು ಊಹಿಸಲು ಆಗದಷ್ಟು..! ಅದೆಷ್ಟೋ ಮೆಸೇಜುಗಳು ಬಾಗಿಲಿನ ಹೊಸಲಲ್ಲಿ ನಿಂತುಕೊಂಡು ಒಳಗೆ ಬರಲು ಕಾಯುತ್ತಿರುವ ಜನಗಳ ರೀತಿ ಅದೆಷ್ಟೋ ಮೆಸೇಜುಗಳು ಇದೆ ,ಅದು ನನಗೆ ಕಾಣುತ್ತಿಲ್ಲ ಅದನ್ನು ಹೊರತುಪಡಿಸಿದರೆ ನನಗೆ ಕಾಣುತ್ತಿರುವ ಮೆಸೇಜ್ ಗಳು ಈ ರೀತಿ ಇದ್ದಾರೆ.
1- ಫೇಸ್ಬುಕ್ ಕಾಮೆಂಟ್ ನಲ್ಲಿ 1100ಕ್ಕೂ ಹೆಚ್ಚು
2- ಫೇಸ್ಬುಕ್ ಇನ್ ಬಾಕ್ಸ್ ನಲ್ಲಿ 34000ಕ್ಕೂ ಹೆಚ್ಚು
3- ವಾಟ್ಸಾಪ್ ಮೆಸೇಜ್ ನಲ್ಲಿ 12300 ಕ್ಕೂ ಹೆಚ್ಚು
4- ಟ್ವಿಟರ್ ನಲ್ಲಿ 2600ಕ್ಕೂ ಹೆಚ್ಚು
5- ಇನ್ಸ್ಟಾಗ್ರಾಮ್ ನಲ್ಲಿ 1600ಕ್ಕೂ ಹೆಚ್ಚು
ಬಹುತೇಕ 51,600 ಅಧಿಕೃತ ಮೆಸೇಜುಗಳು.
ಗೆಳೆಯರೇ ನಿಮ್ಮ ಆಸಕ್ತಿ ಹಾಗೂ ನನ್ನ ಫೇಸ್ ಬುಕ್ ನಲ್ಲಿ ನೀವೆಷ್ಟು ಜನ ಆಕ್ಟಿವ್ ಇದ್ದೀರಿ ನಿಮ್ಮ ಕಳಕಳಿ ಯಾವುದರ ಕಡೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿ ಆ ಸ್ಟೇಟಸ್ ಹಾಕಿದ್ದೇನೆ ಅಷ್ಟೇ
ಸಾಕು ಎಲ್ಲರೂ ಇಷ್ಟಕ್ಕೆ ನಿಲ್ಲಿಸಿಬಿಡಿ ನಂಗೂ ಕಳಿಸಿ ನಂಗೂ ಕಳಿಸಿ ಎಂದು ಮೆಸೇಜ್ ಹಾಕಿ ಕಿರಿಕಿರಿ ಮಾಡಬೇಡಿ.
ಕೊನೆಯಲ್ಲಿ HD ವಿಡಿಯೋ ಬಗ್ಗೆ ಹೇಳಬೇಕು ಎಂದರೆ ವಿಡಿಯೋ ಖಂಡಿತ ನನಗೂ ತಲುಪಿದೆ ,ಆದರೆ ಅಂತ ಅಸಹ್ಯದ ವಿಡಿಯೋ ನಾನು ಯಾರಿಗೂ ಫಾರ್ವರ್ಡ್ ಮಾಡುವುದಿಲ್ಲ ,ಮಾಡಲು ನನಗೆ ಮುಜುಗರ ಆಗುತ್ತದೆ ಇಷ್ಟು ಮಾತ್ರ ಹೇಳಬಲ್ಲೆ .ಮನುಷ್ಯ ರೂಪದಲ್ಲಿರುವ ಕಾಮುಕ ಪಿಪಾಸು, ಚುನಾವಣೆಯಲ್ಲಿ ಠೇವಣಿ ಇಲ್ಲದೆ ಜನ ಸೋಲಿಸಬೇಕು ಎಂಬುದು ನನ್ನ ಪ್ರಾಮಾಣಿಕವಾದ ಆಸೆ .ಸಾಮಾನ್ಯ ಮನೆತನದ ಹುಡುಗರು ರಾಜಕಾರಣಕ್ಕೆ ಬರಬೇಕು.
ಧನ್ಯವಾದಗಳು
ನಿಮ್ಮೆಲ್ಲರಿಗೂ ಶುಭವಾಗಲಿ.
– ಭೈರಪ್ಪ ಹರೀಶ್ ಕುಮಾರ್, ಕನ್ನಡ ಪರ ಹೋರಾಟಗಾರ




