ಬೆಂಗಳೂರು: ಇಥಿಯೋಪಿಯನ್ ಎರ್ ಲೈನ್ಸ್ ವತಿಯಿಂದ ಹೋಟೆಲು ರಿನಸೆನ್ಸ್ ಸಭಾಂಗಣದಲ್ಲಿ ಮಾರಾಟ ವ್ಯವಸ್ಥಾಪಕರಾದ ಅಡಿಸು ಎರಮಾಸ್,ಪ್ರಾದೇಶಿಕ ವ್ಯವಸ್ಥಾಪಕರಾದ ರಿಜಿಟ್ಟು ಎಶಿತು, ಮಾರಾಟ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ಮೀನ, ಪ್ರಾದೇಶಿಕ ಆಯುಕ್ತರಾದ ಶ್ರೀನಿವಾಸನ್ ಜಯಶೀಲನ್,ನಿರ್ದೇಶಕಿ, ಸಿ.ಇ.ಓ ಇಶಾ ಗೋಯಲ್ ರವರು ಮಾಧ್ಯಮಗೋಷ್ಟಿ ನಡೆಸಿದರು.
ಇಥಿಯೋಪಿಯನ್ ಏರ್ ಲೈನ್ ಸಂಸ್ಥೆ 1946ರಲ್ಲಿ ಪ್ರಾರಂಭವಾಯಿತು. ಬೆಂಗಳೂರಿನಿಂದ ಅಡಿಸ್ ಅಬಾಬಾ ನೇರ ವಿಮಾನಯಾನ ಹಾರಾಟ 2019ರಲ್ಲಿ ಪ್ರಾರಂಭಿಸಿತು. ಇದು ಆಫ್ರಿಕಾ ದೇಶದ ಅತಿ ಡೊಡ್ಡ ವಿಮಾನಯಾನ ಸಂಸ್ಥೆಯಾಗಿದೆ.
ಕಲೆ,ಸಂಸ್ಕೃತಿ ಮತ್ತು ನೂರಾರು ಪ್ರವಾಸಿ ತಾಣಗಳನ್ನು ನೋಡುವ ಮನತಣಿಯುವ,ಸೌಂದರ್ಯದ ಗಣಿಯಾಗಿರುವ ಇಥಿಯೋಪಿಯನ್ ದೇಶಕ್ಕೆ ಎಲ್ಲರಿಗೂ ಸ್ವಾಗತ ಬಯಸುತ್ತದೆ ಈ ಏರ್ ಲೈನ್ಸ್.
ಬೆಂಗಳೂರಿನಿಂದ ವಾರದಲ್ಲಿ ಮೂರು ದಿನ ಅಡಿಸ್ ಅಬಾಬಾಕ್ಕೆ ವಿಮಾನಯಾನ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾಗಿದೆ. ಆಫ್ರಿಕಾ,ಅಮೇರಿಕ, ಯುರೋಪ್ ದೇಶಗಳಿಗೆ ಇಥಿಯೋಪಿಯನ್ ಏರ್ ಲೈನ್ ಬೆಂಗಳೂರಿನಿಂದ ವೇಗದ ಸಂಪರ್ಕ ಕಲ್ಪಿಸುತ್ತದೆ.
ಇಥಿಯೋಪಿಯನ್ ದೇಶ ಪ್ರವಾಸ,ವ್ಯಾಪಾರ,ಹೂಡಿಕೆ ಮತ್ತು ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳವಾಗಿದೆ.
ಈ ಸಂಸ್ಥೆಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ.




