ಗ್ರಾಮಗಳಲ್ಲಿ ಕಾನೂನು ನೆರವು ಹಾಗೂ ಜಾಗೃತಿ ಅಭಿಯಾನ

4 years ago

ಮಂಡ್ಯ: ಕೆ.ಎನ್. ನಾಗೇಗೌಡ ಕಾನೂನು ಕಾಲೇಜು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿಎರಡು ದಿನಗಳ ಕಾನೂನು ನೆರವು ಹಾಗೂ ಕಾನೂನು ಜಾಗೃತಿ ಅಭಿಯಾನ ನಡೆಯಿತು.

ಸಮಾರೋಪ ಸಮಾರಂಭ ಕೊರೇಗಾಲ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಮಾದೇಶ.ವಿ. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಹಾಗೂ ಅಧ್ಯಕ್ಷರು ತಾಲ್ಲೂಕು ಕಾನೂನು ಸೇವಾ ಸಮಿತಿ ಅವರು, ಮಮತ ಶಿವಪೂಜಿ, ಪ್ರಧಾನ ಸಿವಿಲ್ ನ್ಯಾಯಾಧೀಶರು, ಮಂಜು ಹೆಚ್.ಎನ್. ಪ್ರಾಂಶುಪಾಲರು ಕೆ.ಎನ್.ನಾಗೇಗೌಡ, ಕಾನೂನು ಕಾಲೇಜು, ಉಪನ್ಯಾಸಕರಾಗಿ ಎಂ.ವಿ.ರಮೇಶ್, ವಕೀಲರು, ಹಿರಿಯ ವಿದ್ಯಾರ್ಥಿ ಡಾ.ಎ.ಆರ್.ಗೋವಿಂದಸ್ವಾಮಿ, ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply