ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತೇವೆ: ಡಿ.ಕೆ.ಶಿವಕುಮಾರ್

3 years ago

#electricity #promised #DKShivakumar #farmers

ಬೆಂಗಳೂರು: ವಿದ್ಯುತ್ ಖರೀದಿ ಮಾಡಲು, ಈ ಬರಗಾಲದಲ್ಲಿ ವಿದ್ಯುತ್ ಅಭಾವವನ್ನ ಸೃಷ್ಟಿ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾರು ಅಂತಹ ಜ್ಞಾನ ಭಂಡಾರದಿಂದ, ಅನುಭವದ ಮಾತುಗಳನ್ನು ಆಡಿಸಿದರೊ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಆಯುಧ ಪೂಜೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಚಿಂತೆಯಿಲ್ಲ ನಮ್ಮ ಜನರನ್ನು ಕಾಪಾಡುತ್ತೇವೆ, ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಉತ್ಪಾದನೆ ನಿಲ್ಲಬಾರದು ಎಂದು ಸೂಚನೆ ನೀಡಿದ್ದು, ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು

ಈ ಮೊದಲು ಕೃಷಿ ಪಂಪ್ ಸೆಟ್ಟುಗಳಿಗೆ 6 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು, 2013 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 7 ಗಂಟೆ ನೀಡಲು ತೀರ್ಮಾನ ಮಾಡಿತು. ಆದರೆ ನಂತರ ಸರ್ಕಾರಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಲಿಲ್ಲ. ನಾವು ಏನೇ ತೊಂದರೆಯಾದರೂ ರೈತರಿಗೆ 5 ಗಂಟೆಗಳ ಕಾಲ ವಿದ್ಯುತ್ ನೀಡಲೇಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

Leave a Reply