ಬೆಂಗಳೂರು: ನಾವು ಆಟ ಆಡಲು ವಿದೇಶಕ್ಕೆ ಹೋಗುತ್ತಿಲ್ಲ. ರಾಜ್ಯದ ಜನರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ಬಂಡವಾಳ ಆಕರ್ಷಿಸುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಒಳಿತಾದರೆ, ದೇಶಕ್ಕೂ ಒಳಿತು. ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಇದ್ದಂತೆ ಹೀಗಿದ್ದರೂ ಕೇಂದ್ರ ಸರ್ಕಾರ ನಮಗೆ ಅಡ್ಡಿ ಮಾಡುತ್ತಿದೆ ಎಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಮಂತ್ರಿ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಬಂಡವಾಳ ಹೂಡಿಕೆ ಪ್ರಸ್ತಾಪಗಳೊಂದಿಗೆ ಉದ್ಯಮಿಗಳನ್ನು ಕರ್ನಾಟಕಕ್ಕೆ ಆಹ್ವಾನಿಸಲು ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಪ್ರವಾಸ ಮೊಟುಕುಗಳಿಸಿ ಬೆಂಗಳೂರಿಗೆ ಹಿಂತಿರುಗಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಿಯೋಗಕ್ಕೆ ವಿದೇಶ ಪ್ರವಾಸ ಕೈಗೊಳ್ಳಲು ನೀಡಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ, ತಿರಸ್ಕಾರ ಮಾಡಲಿ, ಆದ್ರೆ ಅದಕ್ಕೆ ಕಾರಣ ಕೊಡಬೇಕು ಎಂದರು.
ʻಮೇಕ್ ಇನ್ ಇಂಡಿಯಾʼ ಅಂತಾ ದೊಡ್ಡ ದೊಡ್ಡ ಮಾತುಗಳು ಹೇಳ್ತಾರೆ. ಯಾವುದೇ ಘೋಷಣೆ ಕೊಟ್ಟರೂ ಅದು ಪ್ರಾರಂಭವಾಗಬೇಕಿರೋದು ಕರ್ನಾಟಕದಿಂದ್ಲೇ. ನಮ್ಮಲ್ಲಿ ಅಷ್ಟೊಂದು ಮಾನವ ಸಂಪನ್ಮೂಲ ಹಾಗೂ ಅರ್ಹತೆ ಇದೆ ಈ ಸತ್ಯ ಗೊತ್ತಿದ್ದು ಕರ್ನಾಟಕಕ್ಕೆ ಒಳ್ಳೆಯದಾಗಬಾರದು ಎಂದು ದುರುದ್ದೇಶದಿಂದ ಅನುಮತಿ ನಿರಾಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದೇಶಿ ಪ್ರವಾಸಕ್ಕೆ ಮೊದಲಿಗೆ ನಿಯೋಗಕ್ಕೆ ಅನುಮತಿ ನೀಡದ ಕೇಂದ್ರ, ನಂತರ ಕೆಲವರಿಗೆ ಅನುಮತಿ ನೀಡಿತು. ಆದರೆ,ನನಗೆ ಅನುಮತಿ ನಿರಾಕರಿಸಿತು. ‘ಈ ಎಲ್ಲ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ನಿರ್ಧಾರ ಸರಿಯಲ್ಲ, ಇದರ ಬಗ್ಗೆ ಮುಂದೆ ಮಾತನಾಡುವೆ ಎಂದರು.
ನಾವು ಆಟ ಅಡೋದಕ್ಕೆ ಅಲ್ಲಿಗೆ ಹೋಗ್ತಿಲ್ಲ, ಜನರಿಗೆ ಉದ್ಯೋಗ ಸೃಷ್ಟಿ ಮಾಡೋದು ನಮ್ಮ ಕರ್ತವ್ಯ. ಬಂಡವಾಳ ತರೋದು ಕೂಡ ನಮ್ಮ ಕರ್ತವ್ಯವಾಗಿದೆ. ಕರ್ನಾಟಕಕ್ಕೆ ಒಳ್ಳೆದಾದ್ರೆ ನಮ್ಮ ರಾಷ್ಟ್ರಕ್ಕೆ ತಾನೆ ಒಳ್ಳೆದು, ಕರ್ನಾಟಕ ದೇಶದ ಅರ್ಥಿಕತೆಯ ಎಂಜಿನ್. ವಿನಾಃ ಕಾರಣ ಸಾರಸಾಗಟಾಗಿ ತಿರಸ್ಕಾರ ಮಾಡೋದು ಸರಿಯಲ್ಲ ಎಂದರು .
ಹೋದ ಬಾರಿ ನಾವು ಎಂ.ಬಿ ಪಾಟೀಲ್ ಅವರು ಅಮೆರಿಕಗೆ ಹೋಗಿದ್ವಿ. ಆಗ 35 ರಿಂದ 40 ಸಾವಿರ ಕೋಟಿ ಲೆಟರ್ ಆಫ್ ಇಂಟೆಂಟ್ ಹಾಗೂ ಎಂಓಯೂ ಗಳಾಗಿದ್ವು. ಅದನ್ನ ಇನ್ವೆಸ್ಟ್ ಕರ್ನಾಟಕದಲ್ಲಿ ಸಾಲಿಡಿಫೈ ಮಾಡಿದ್ವಿ. ಮೊನ್ನೆ ಸೆಮಿಕಂಡಕ್ಟರ್ ಮತ್ತೆ ಎಲೆಕ್ಟ್ರಾನಿಕ್ಸ್ ಮ್ಯಾನಿಫಾಕ್ಚರ್‌ಗೆ ಸುಮಾರು 20 ಸಾವಿರ ಕೋಟಿ ರೂ ಅನುಮೋದನೆ ಕೊಟ್ಟಿದ್ದೀವಿ. ಇದರ ಪ್ರತಿಫಲವಾಗಿ ಕರ್ನಾಟಕ ಎಲೆಕ್ಟ್ರಾನಿಕ್ಸ್ ಹಬ್ ಹಾಗೂ ಏರೋಸ್ಪೇಸ್ ಹಬ್ ಆಗಿದೆ. ನವೋದ್ಯಮದಲ್ಲಿ ಅಗ್ರಸ್ಥಾನ ಪಡೆದು ಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿದೆ ಎಂದರು.




