ಶ್ರೀ ಮಾರಮ್ಮ ದೇವಿ, ದೊಡ್ಡಮ್ಮ ದೇವಿ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲಿರಲಿ. ಬಂದ ಸಂಕಷ್ಟ ನಿವಾರಣೆಯಾಗಲಿ ಎಂದು ಪ್ರಾರ್ಥಿಸುತ್ತೇನೆ: ಲಕ್ಷ್ಮಿನಾರಾಯಣ್
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಬೆಂಗಳೂರು: ಅವಲಹಳ್ಳಿ ಗ್ರಾಮದ ಶ್ರೀ ಮಾರಮ್ಮ ದೇವಿ ಮತ್ತು ಶ್ರೀ ದೊಡ್ಡಮ್ಮದೇವಿ, ಕೆಂಪಮ್ಮ ದೇವಿ ಊರ ಹಬ್ಬ ಅಚರಣೆ
ಮಾಜಿ ಉಪ ಮೇಯರ್ ಲಕ್ಷ್ಮಿನಾರಾಯಣ್, ಬ್ಯಾಂಕ್ ಚಂದ್ರಪ್ಪ, ಆರ್.ಚಂದ್ರಪ್ಪ, ಧರ್ಮಪಾಲ್, ಎಲ್.ಹನುಮಂತರೆಡ್ಡಿ, ಗಿರೀಶ್, ರಮೇಶ್ ಮತ್ತು ಟ್ರಸ್ಟ್ ಪದಾಧಿಕಾರಿಗಳು ಅವಲಹಳ್ಳಿಯ ಗ್ರಾಮಸ್ಥರು, ಹಿರಿಯ ಮುಖಂಡರು ದೇವಿಯ ವಿಶೇಷ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಾತಾಡಿದ ಲಕ್ಷ್ಮಿನಾರಾಯಣ್, ಮನುಷ್ಯ ಎಷ್ಟೆ ಪ್ರಯುತ್ನ ಪಟ್ಟರು ಫಲ ಸಿಗುವುದಿಲ್ಲ, ದೈವ ಕೃಪೆ ಇದ್ದಾಗ ಮಾತ್ರ ಜೀವನದಲ್ಲಿ ಸಾಧನೆ, ಯಶಸ್ಸು ಕಾಣಲು ಸಾಧ್ಯ ಎಂದರು.

ಅವಲಹಳ್ಳಿ ಊರ ಹಬ್ಬಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬಂಧು, ಬಾಂದವರು, ಆತ್ಮೀಯರಿಗೆ ಆಹ್ವಾನ ನೀಡಿ ಅದ್ದೂರಿಯಾಗಿ ಪ್ರತಿ ಮನೆಯಲ್ಲಿ ಊರ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗಲಿ, ಸಕಾಲಕ್ಕೆ ಮಳೆ, ಬೆಳೆ ಮತ್ತು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ನೆಮ್ಮದ್ದಿ ಸಿಗಲಿ ಎಂದು ಶ್ರೀ ಮಾರಮ್ಮ ದೇವಿ ಮತ್ತು ಶ್ರೀ ಡೊಡ್ಡಮ್ಮ ದೇವಿಯ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಾರ್ವಜನಿಕರು ದೇವಿಯ ದರ್ಶನ ಪಡೆದು ಪುನೀತರಾಗಬೇಕು ಎಂದರು.

ಶ್ರೀ ಮಾರಮ್ಮದೇವಿ ಮತ್ತು ಶ್ರೀ ದೊಡ್ಡಮ್ಮ ದೇವಿಗೆ ಕಳಸ ಹೊತ್ತ ಮಹಿಳೆಯರು, ದೀಪಾರತಿ ಮಾಡಿ ಅದ್ದೂರಿಯಾಗಿ ಸ್ವಾಗತ ಕೋರಿದರು. ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ನೇರವೇರಿತು. ಮಹಿಳೆಯರು, ಪುರುಷರು ಇಷ್ಟಾರ್ಥಗಳು ನೆರವೇರಿದ ಕಾರಣ ಮತ್ತು ಇಷ್ಟಾರ್ಥಗಳು ಸಿದ್ದಿಸಲು ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆದರು.




