ಕೊರೋನ ವಾರಿಯರ್ಸ್ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ

4 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ವಸತಿ ಸಚಿವ ವಿ.ಸೋಮಣ್ಣ ಕಛೇರಿ ಆವರಣದಲ್ಲಿ ಯಶಸ್ವಿನಿ ಫೌಂಡೇಶನ್ ಸಹಯೋಗದೊಂದಿಗೆ, ವಿ.ಸೋಮಣ್ಣ ಹಾಗೂ ಡಾ.ಅರುಣ್ ಸೋಮಣ್ಣ, ಡಾ.ರಾಜ್ ಕುಮಾರ್ ವಾರ್ಡ್‍ ನ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ವಿ.ಸೋಮಣ್ಣ, ಬಡವರಾಗಿ ಹುಟ್ಟಿರಬಹುದು. ಆದರೆ ಬಡತನ ಶಾಶ್ವತವಲ್ಲ. ಯಾವುದೇ ಉದ್ಯೋಗ ಮೇಲು, ಕೀಳಲ್ಲ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಸಿಕ್ಕಾಗ ಜಾತಿ, ವರ್ಗ ನೋಡದೆ ಆರ್ಥಿಕವಾಗಿ ಹಿಂದುಳಿದವರು, ಧ್ವನಿ ಇಲ್ಲದ ಜನರನ್ನು  ಸಮಾಜದ ಮುಖ್ಯವಾಹಿನಿ ತರಬೇಕು ಎಂದರು.

ಕೊವಿಡ್ ಸಾಂಕ್ರಮಿಕ ರೋಗದಿಂದ ಜನಜೀವನ ತತ್ತರಿಸಿತ್ತು. ಅಂತಹ ಕಷ್ಟಕರ ಸಂದರ್ಭದಲ್ಲಿಯೂ ಪ್ರಾಣದ ಹಂಗು ತೊರೆದು ಪೌರ ಕಾರ್ಮಿಕರು ನಗರ ಸ್ವಚ್ಚತೆಗೆ ಹಗಲಿರಳು ಶ್ರಮಿಸಿದರು. ಸಾಂಕ್ರಮಿಕ ರೋಗ ನಿಯಂತ್ರಣ ಮತ್ತು ನಮ್ಮ ಆರೋಗ್ಯ ರಕ್ಷಣೆಗಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ನಮ್ಮ  ಜೀವ, ಜೀವನದ ರಕ್ಷಕರು ಎಂದರು.

Leave a Reply