ಚಿಕ್ಕೋಡಿ: ನದಿ ದಡಕ್ಕೆ ತೇಲುತ್ತ ಬಂದ ಬೃಹದಾಕಾರದ ಮೊಸಳೆಯನ್ನು ನೋಡಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಗವಾಡ ತಾಲೂಕಿನ ಮೊಳವಾಡ ಆರಂಭಿಕ ಹಂತದಲ್ಲಿನ ಕೃಷ್ಣಾ ನದಿಯ ಸೇತುವೆ ಬಳಿ ಕಾಣಿಸಿಕೊಂಡ ಬೃಹದಾಕಾರದ ಮೊಸಳೆಯನ್ನು ಕಂಡು ಗ್ರಾಮದ ರೈತರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ.
ನದಿಗೆ ನೀರು ಹೆಚ್ಚಾಗಿದ್ದರಿಂದ ದಡದತ್ತ ಬರುತ್ತಿರುವ ಜಲಚರ ಪ್ರಾಣಿಗಳನ್ನು ನೋಡಿ ರೈತರು ಮತ್ತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.




