ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆ: ಚಾರ್ಲಿ ಸಿನಿಮಾಗೆ ಕಣ್ಣೀರು ಸುರಿಸುವ ಸಿಎಂ ಬೆಲೆ ಇಳಿಸಿ ಎಂದ ಕಾಂಗ್ರೆಸ್

4 years ago

ಮುಂಬಯಿ: ಮಹಾರಾಷ್ಟ್ರ ಜನತೆಗೆ ನೂತನ ಸಿಎಂ‌ ಏಕನಾಥ ಶಿಂಧೆ ಭರ್ಜರಿ ಗಿಪ್ಟ್ ನೀಡಿದ್ದು ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳನ್ನು ಕಡಿತಗೊಳಿಸಿದ್ದಾರೆ. ಸುಂಕ ಕಡಿತಗೊಳಿಸುವ ಮೂಲಕ ರಾಜ್ಯದ ಜನರಿಗೆ ತೈಲದರಗಳ ಬೆಲೆ ಏರಿಕೆಯಿಂದ ಕೊಂಚ ನಿರಾಳ ನೀಡಿದ್ದು ಪೆಟ್ರೋಲ್ 5 ರೂ. ಮತ್ತು ಡೀಸೆಲ್‌ 3 ರೂ. ಪ್ರತಿ ಲೀಟರಗೆ ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ಪೆಟ್ರೋಲ್  ₹5 ಡೀಸೆಲ್  ₹3 ದರ ಇಳಿಕೆ, ಮಹಾರಾಷ್ಟ್ರದಲ್ಲಿ! ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಇಂಧನ ತೆರಿಗೆ ಇಳಿಸಿದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ@CMofKarnataka ಅವರೇ? ಚಾರ್ಲಿಗೆ ಕಣ್ಣೀರು ಹಾಕುವ ತಮಗೆ ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯವಂತಿಕೆ ತೋರಲು ಕಷ್ಟವೇ? ಎಂದು ಪ್ರಶ್ನಿಸಿದೆ.

 

 

Leave a Reply