ಬೆಂಗಳೂರು ಮೆಟ್ರೋದಲ್ಲಿ ಯುವತಿ ಲಾಗ ಹಾಕಿದ ವಿಡಿಯೋ ವೈರಲ್

3 years ago

#video #young #woman #Bengaluru #Metro #gone #viral #mishasharma #jimnastics

ಬೆಂಗಳೂರು: ಬೆಂಗಳೂರಿನ ಮೆಟ್ರೋ ಕೋಚ್‌ ಒಂದರಲ್ಲಿ ಪ್ರಯಾಣಿಕರು ಸಂಚರಿಸುವ ವೇಳೆ ಯುವತಿಯೊಬ್ಬರು ಪಲ್ಟಿ ಹೊಡೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಜಿಮ್ನಾಸ್ಟಿಕ್ ಕೌಶಲ್ಯವನ್ನು ಜನರೆದುರು ಯುವತಿ ಪ್ರದರ್ಶಿಸಿದ್ದಾಳೆ.

View this post on Instagram

A post shared by MISHA SHARMA 🇮🇳 (@mishaa_official_)

ವಿಡಿಯೋದಲ್ಲಿರುವ ಯುವತಿಯನ್ನು ಅಥ್ಲೀಟ್ ಮಿಶಾ ಶರ್ಮಾ ಎಂದು ಹೇಳಲಾಗಿದ್ದು, ಮೆಟ್ರೋ ಅಧಿಕಾರಿಗಳ ನಿರಂತರ ಎಚ್ಚರಿಕೆಯ ನಡುವೆ ಚಲಿಸುತ್ತಿರುವ ಮೆಟ್ರೋದಲ್ಲಿ ಪಲ್ಟಿ ಹೊಡೆಯುವುದು, ಸಾಹಸವನ್ನು ರೆಕಾರ್ಡ್ ಮಾಡಿ ವಿಡಿಯೋವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜೂನ್ 26 ರಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅದು ಸ್ವಲ್ಪ ಸಮಯದ ನಂತರ ವೈರಲ್ ಆಗಿದ್ದು, 3.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಕೈಚಳಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಈ ಕೌಶಲ್ಯವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಮೆಟ್ರೋ ಸಂಚಾರದ ವೇಳೆ ಇಂತಹ ಚಮತ್ಕಾರ ನಡೆಸಲು ಸೂಕ್ತ ಸ್ಥಳವಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

Leave a Reply