ಸುರಪುರ: ಮಹರ್ಷಿ ವಾಲ್ಮೀಕಿ ಜಗತ್ತು ಕಂಡ ಶ್ರೇಷ್ಠ ಮಹಾಕವಿ ಎಂದು ಗ್ರಾ.ಪಂ. ಸದಸ್ಯ ಆರ್.ಎಸ್ ಮಾಲಗತ್ತಿ ಹೇಳಿದರು.
ತಾಲೂಕಿನ ಮಾಲಗತ್ತಿ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಣ ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನೈತಿಕ ಮೌಲ್ಯಗಳನ್ನು ಬಿಂಬಿಸಿದ ಮಹಾನ್ ಗ್ರಂಥ ರಾಮಾಯಣ ಎಂದರು.
ಯಾವುದೇ ಆದರ್ಶ ನಾಯಕರ ಜಯಂತಿಗಳು ಪೂಜೆಗೆ ಸೀಮಿತವಾಗದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ. ರಾಮಾಯಣ ಕೃತಿಯಿಂದ ಜೀವನದ ಪಾಠ ಕಲಿಯುವಂತಾಗಿದೆ ಎಂದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಆರ್ ಮಲ್ಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷ ಸಣ್ಣಕ್ಕೆಪ್ಪ ಸಾಹುಕಾರ, ವಿ ಎಸ್ ಎಸ್ ಎನ್ ಅಧ್ಯಕ್ಷ ಭೀಮಣ್ಣ ದೊರೆ, ಮಾಜಿ ಅಧ್ಯಕ್ಷ ಶ್ರೀನಿವಾಸ್ ದೊರೆ, ಗ್ರಾ.ಪಂ ಉಪಾಧ್ಯಕ್ಷ ನಿಂಗಣ್ಣ ಸಾಹುಕಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮಪ್ಪ ಬರ್ಡೋಲ್, ತಾ.ಪಂ ಸದಸ್ಯ ಭೀಮರಾಯಗೌಡ ಮಾಲಿಪಾಟೀಲ್, ನಾರಾಯಣ ದೊರೆ, ಮಹಾರಾಯ ಸಾಹುಕಾರ, ಗ್ರಾ.ಪಂ. ಸದಸ್ಯರಾದ ನಿಂಗಣ್ಣ ನಾಯ್ಕೋಡಿ, ವೆಂಕೋಬ್ ದೊರೆ, ವೆಂಕೋಬ್ ಹವಾಲ್ದಾರ ಸೇರಿದಂತೆ ಮುಖಂಡರು ಹಾಜರಿದ್ದರು.



