ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ
ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ, ಮನೋರಾಯನಪಾಳ್ಯ, ರಹಮತ್ ನಗರದಲ್ಲಿ ಕೊರೊನಾದಿಂದ ಮೃತಪಟ್ಟ 25 ಕುಟುಂಬಸ್ಥರಿಗೆ 20,000 ರೂ. ಸಹಾಯಧನ ಮತ್ತು ಕೊರೋನ ಸಾಂಕ್ರಮಿಕ ರೋಗದ ವಿರುದ್ಧ ಪ್ರಾಣದ ಹಂಗುತೊರೆದು ಕಾರ್ಯನಿರ್ವಹಿಸಿದ ಕೊರೋನಾ ವಾರಿಯರ್ಸ್ ಗಳಾದ ವೈದ್ಯರು, ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಭೈರತಿ ಸುರೇಶ್, ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮೃತಪಟ್ಟ ಕುಟುಂಬದವರಿಗೆ ಸಹಾಯಧನ ಮತ್ತು ಕೊರೊನ ವಾರಿಯರ್ಸ್ ಗೆ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.




