ಸರ್ಕಾರಿ ಸ್ವಾಮ್ಯದ ಕಣಜ ವೆಬ್ ತಾಣದ ಪ್ರಕಾರ ಬಿ.ಎಸ್.ವೈ ಸಿಎಂ

5 years ago

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ https://kanaja.karnataka.gov.in/ ವೆಬ್ ತಾಣದ ಪ್ರಕಾರ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿಯವರಲ್ಲ. ಬದಲಾಗಿ ಮಾಜಿ  ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಸಿಎಂ.

ಹೌದು, 26 ಜುಲೈ 2021ರಂದು ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದು, 28 ಜುಲೈ 2021ರಿಂದ ಬಸವರಾಜ ಬೊಮ್ಮಾಯಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ. ಸಚಿವ ಸಂಪುಟ ರಚಿಸಿದ್ದಾರೆ. ವಿ.ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಣಜದ ಪ್ರಕಾರ ರಾಜ್ಯದಲ್ಲಿ ಇನ್ನೂ ಯಡಿಯೂರಪ್ಪನವರೇ ಸಿಎಂ ಆಗಿದ್ದಾರೆ!

Leave a Reply