ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ

5 years ago

ಒಟ್ಟು ಮೂವರಿಗೆ ಗೌರವ ಪ್ರಶಸ್ತಿ; ಆರು ಮಂದಿಗೆ ಗೌರವ ಪುರಸ್ಕಾರ ಪ್ರಕಟ

ಬೆಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

ವಿವರ ಈ ಕೆಳಗಿನಂತಿದೆ.

ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ, ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಗಣ್ಯರನ್ನು ಅಕಾಡೆಮಿಯು 2021ರ ಸಾಲಿನ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ. 50000 ನಗದು (ಪ್ರಯಾಣ ವೆಚ್ಚ ಮತ್ತು ವಾಸ್ತವ್ಯ ವೆಚ್ಚಸೇರಿ) ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪುರಸ್ಕಾರವು ರೂ.10000/- ನಗದು (ಪ್ರಯಾಣ ವೆಚ್ಚ ಮತ್ತು ವಾಸ್ತವ್ಯ ವೆಚ್ಚ ಸೇರಿ) ಶಾಲು, ಹಾರ, ಸ್ಮರಣಿಕೆ ಮತ್ತು ಪುರಸ್ಕಾರ ಪತ್ರಗಳನ್ನು ಒಳಗೊಂಡಿರುತ್ತದೆ.

ಕೋರೋನದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾದ ಬಳಿಕ, ಎಲ್ಲವೂ ಸಹಜ ಸ್ಥಿತಿಗೆ ಮರಳಿದ ನಂತರ ಮುಖ್ಯಮಂತ್ರಿಗಳ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ದಿನಾಂಕವನ್ನು ನಿಗದಿಪಡಿಸಿಕೊಂಡು, ಇವರೆಲ್ಲರ ಉಪಸ್ಥಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದ್ಮಶ್ರೀ ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲಾ ಪ್ರತಿಷ್ಠಿತ  ಪ್ರಶಸ್ತಿಯನ್ನು ಪಡೆದಿರುವ ಬ್ಯಾರಿ ಭಾಷಿಕ ಹರೇಕಳ ಹಾಜಬ್ಬ ಅವರಿಗೆ ಈ ತನಕ ಅಕಾಡೆಮಿಯ ಪ್ರಶಸ್ತಿ ದೊರಕದೇ ಇರುವುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಆ ಕೊರಗನ್ನು ನಿವಾರಿಸಿದ ಸಂತೃಪ್ತಿಯು ನಮಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಗೌರವ ಪ್ರಶಸ್ತಿ -2021

  1. ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ :           ಹರೇಕಳ ಹಾಜಬ್ಬ
  2. ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ :           ಹುಸೈನ್ ಕಾಟಿಪಳ್ಳ
  3. ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ :           ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪುರಸ್ಕಾರಕ್ಕೆ ಈ ಕೆಳಗಿನ ಗಣ್ಯರು ಆಯ್ಕೆಯಾಗಿರುತ್ತಾರೆ.

ಗೌರವ ಪುರಸ್ಕಾರ 2021

  1. ಬ್ಯಾರಿ ಸಂಗೀತ ಕ್ಷೇತ್ರ – ಅಶ್ರಫ್ ಅಪೋಲೋ
  2. ಬ್ಯಾರಿ ಸಂಘಟನೆ ಕ್ಷೇತ್ರ – ಡಾ.ಕೆ.ಎ. ಮುನೀರ್ ಬಾವ
  3. ಬ್ಯಾರಿ ಮಹಿಳಾ ಸಾಧಕಿ – ಮರಿಯಮ್ ಫೌಝಿಯ ಬಿಯಸ್.
  4. ಬ್ಯಾರಿ ಯುವ ಪ್ರತಿಭೆ – ಬ್ಯಾರಿ ಝುಲ್ಫಿ
  5. ಬ್ಯಾರಿ ದಫ್ ಕ್ಷೇತ್ರ – ಮೊಹಮ್ಮದ್ ಬಶೀರ್ ಉಸ್ತಾದ್
  6. ಬ್ಯಾರಿ ಬಾಲ ಪ್ರತಿಭೆ – ಮೊಹಮ್ಮದ್ ಫರಾಝ್ ಆಲಿ

Leave a Reply