ನಿರುದ್ಯೋಗ, ಬೆಲೆಏರಿಕೆ, ಕೋಮುದಳ್ಳುರಿ ಮುಂತಾದ ಗಂಭೀರ ಸಮಸ್ಯೆಗಳಿಂದ ದೇಶ ನಲುಗಿ ಹೋಗಿದೆ. ಇವುಗಳಿಂದ ಮುಕ್ತಿ ಕೊಡಿಸಲು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ರಾಹುಲ್ ಗಾಂಧಿ ಅವರ ಹೆಜ್ಜೆಯ ಜೊತೆಗೆ ಸಾವಿರ ಸಾವಿರ ಹೆಜ್ಜೆಗಳು ನಡೆಯುತ್ತಿವೆ. ಇವರೆಲ್ಲರ ಕಣ್ಣುಗಳಲ್ಲಿ ಕಾಣುತ್ತಿರುವುದು ಅದೊಂದೇ… ಭವಿಷ್ಯದಲ್ಲಿ ಉತ್ತಮ ದಿನಗಳು ನಮ್ಮದಾಗುತ್ತವೆ ಎನ್ನುವ ಭರವಸೆ.
ಐಕ್ಯತಾ ಯಾತ್ರೆಯಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ಅವರ ಪ್ರತಿ ಹೆಜ್ಜೆಯಲ್ಲೂ ಹೊಸ ಹುಮ್ಮಸ್ಸು ಕಾಣುತ್ತಿದೆ. ಮಕ್ಕಳ ಜೊತೆ ಮಕ್ಕಳಾಗಿ, ಚಿಕ್ಕವರ ಜೊತೆ ಚಿಕ್ಕವರಾಗಿ, ಗುರು-ಹಿರಿಯರ ಜೊತೆಗೆ ವಿನಯದಿಂದ ಕೂಡಿ ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ನೊಂದವರ ಜೊತೆ ಸಂವಾದ ನಡೆಸುತ್ತಿದ್ದಾರೆ. ಅವರಿಗೆಲ್ಲಾ ಭಯ ಬೇಡ ಸದಾ ನಾವು ನಿಮ್ಮೊಂದಿಗೆ ಇದ್ದೇವೆ ಅನ್ನುವ ಧೈರ್ಯ ತುಂಬುತ್ತಾ ಮುನ್ನೆಡೆಯುತ್ತಿದ್ದಾರೆ.
ಇವತ್ತೂ ಕೂಡಾ ರಾಹುಲ್ ಗಾಂಧಿ ಅವರು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬೀಡಿ ಕಾರ್ಮಿಕರ ಜೊತೆ ಸಂವಾದ ನಡೆಸಿದರು. ಈ ವೇಳೆ ಇವರೆಲ್ಲಾ ತಮ್ಮ ಸಂಕಷ್ಟಗಳನ್ನು ರಾಹುಲ್ ಅವರಿಗೆ ಮನದಟ್ಟು ಮಾಡಿಕೊಟ್ಟರು. ಇವರ ನೋವನ್ನ ಆಲಿಸಿದ ರಾಹುಲ್ ಗಾಂಧಿ ನಿಮ್ಮೆಲ್ಲರ ಸಂಕಷ್ಟ ನಿವಾರಿಸುವ ಸಲುವಾಗಿಯೇ ಈ ಯಾತ್ರೆ ಹಮ್ಮಿಕೊಂಡಿದ್ದು, ಮುಂದಿನ ದಿನದಲ್ಲಿ ನಿಮ್ಮೆಲ್ಲರ ನೋವು ದೂರಾಗುತ್ತೆ ಅನ್ನುವ ಭರವಸೆ ನೀಡಿದರು.
ಇನ್ನು ಇವತ್ತು ಕೂಡಾ ರಾಹುಲ್ ಹೆಜ್ಜೆ ಹಾಕಿದ ಕಡೆಯಲ್ಲೆಲ್ಲಾ ಅವರಿಗೆ ಅದ್ಧೂರಿ ಸ್ವಾಗತವೇ ಸಿಕ್ಕಿದೆ. ಅನೇಕ ಕಲಾತಂಡಗಳು ರಾಹುಲ್ ಅವರನ್ನು ಬರಮಾಡಿಕೊಂಡು ಮನಸಾರೆ ಅಭಿನಂದಿಸಿದವು. ಅತ್ಯಂತ ವಿಶೇಷ ಅಂದ್ರೆ, ವಿವಿಧ ಕಾರಣಗಳಿಂದ ವಯಸ್ಸಲ್ಲದ ವಯಸ್ಸಿನಲ್ಲಿ ಸಾವನ್ನಪ್ಪಿ ತಮ್ಮ ಅಂಗಾಂಗ ದಾನದ ಮೂಲಕ ಇತರರ ಬಾಳಿಗೆ ಬೆಳಕಾದ ರಕ್ಷಿತಾ, ವೇದಾ ಮತ್ತು ವಿಜಯ್ ಅವರ ಕುಟುಂಬಗಳು ಇವತ್ತು ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದ್ದು.
ಕರ್ನಾಟಕದ ಮನೆ ಮಗನೇ ಆಗಿದ್ದ ಡಾ.ಪುನೀತ್ ರಾಜಕುಮಾರ್ ರಿಂದ ಸ್ಪೂರ್ತಿ ಪಡೆದ 33 ಭಾರತ ಯಾತ್ರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಪಣ ತೊಟ್ಟಿದ್ದು, ಮೈಸೂರಿನ JSS ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಇವರನ್ನೂ ರಾಹುಲ್ ಗಾಂಧಿ ಇವತ್ತು ಅಭಿನಂದಿಸಿದರು.
ಇದಲ್ಲದೇ ಯುವಜನತೆ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆ ಕುರಿತು ಸುಮಾರು 2000 ಯುವಕರೊಂದಿಗೆ ಇವತ್ತು ರಾಹುಲ್ ಗಾಂಧಿ ಅವರು ಸಮಾಲೋಚನೆ ನಡೆಸಿದರು.
ಹೀಗೆ ಭಾರತ್ ಐಕ್ಯತಾ ಯಾತ್ರೆ ದಿನದಿಂದ ದಿನಕ್ಕೆ ಹಲವಾರು ವೈಶಿಷ್ಟ್ಯಗಳೊಂದಿಗೆ ಸಾಗುತ್ತಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಜೈ ಅನ್ನುತ್ತಿದ್ದಾರೆ. ಮುಂದಿನ ದಿನಗಳು ನಮ್ಮದೇ ಅಂತ ಘಂಟಾಘೋಷವಾಗಿ ಹೇಳುತ್ತಿದ್ದಾರೆ.
– ಕೆಪಿಸಿಸಿ



