ಈಗಾಗಲೇ ದೆಹಲಿಯಲ್ಲಿ ಅಲ್ಲಿನ ಲೆಫ್ಟಿನೆಂಟ್ ಗೌರ್ನರ್, ಪಶ್ಚಿಮ ಬಂಗಾಳದಲ್ಲಿ, ತಮಿಳುನಾಡಿನಲ್ಲಿ, ಹಿಮಾಚಲ ಪ್ರದೇಶದಲ್ಲಿ, ಜಾರ್ಖಂಡಿನಲ್ಲಿ, ಅಲ್ಲಿನ ರಾಜ್ಯಪಾಲರು ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಟ್ಟ ಹಾಕಿ ಸರ್ವಾಧಿಕಾರಿಗಳಂತೆ ನಡವಳಿಕೆ ಪ್ರದರ್ಶಿಸಿದ್ದಾರೆ.
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
ಅಲ್ಲಿನ ರಾಜ್ಯ ಸರ್ಕಾರಗಳು ಸದನದಲ್ಲಿ ಬಹುಮತದಿಂದ ಅಂಗೀಕಾರವನ್ನು ಪಡೆದ ವಿಧೇಯಕಗಳಿಗೆ ಸಹಿ ಮಾಡದೆ ನೆಪಗಳನ್ನ ಒಡ್ಡಿ ಅವುಗಳನ್ನ ಮತ್ತೆ ಹಿಂತಿರುಗಿಸುತ್ತಿರುವ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಇದೇ ಒಂದು ಗಾಳಿ ನಮ್ಮ ಕರ್ನಾಟಕದ ರಾಜ್ಯಪಾಲರಿಗೂ ಬೀಸಿದೆ.
ಇವರು ಸಹ ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯ ಸರ್ಕಾರ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದ ಅತ್ಯಂತ ಪ್ರಮುಖವಾದ ವಿಧೇಯಕಗಳನ್ನು ತಿರಸ್ಕರಿಸುವುದರ ಮೂಲಕ ಮತ್ತು ಕೆಲವು ವಿಧೇಯಕಗಳಿಗೆ ಮತ್ತಷ್ಟು ಅನಾವಶ್ಯಕವಾದ ವಿವರಣೆಗಳನ್ನು ಕೇಳುವುದರ ಮೂಲಕ ಆಡಳಿತ ವ್ಯವಸ್ಥೆಯ ವಿಚಾರದಲ್ಲಿ ಹೆಚ್ಚಾಗಿ ಹಸ್ತಕ್ಷೇಪ ನಡೆಸುತ್ತಿದ್ದಾರೆ.
ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದಂತಹ ನಡವಳಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ರೀತಿಯಲ್ಲಿ ಸರ್ಕಾರಗಳ ಕತ್ತು ಹಿಸುಕುವ ಬದಲಿಗೆ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ, ನಿಮ್ಮ ಪಕ್ಷದ್ದು ಅಲ್ಲದ ರಾಜ್ಯ ಸರ್ಕಾರಗಳನ್ನು ವಜಾ ಮಾಡಿ ನಿಮಗೆ ಇಷ್ಟ ಬಂದ ರೀತಿಯಲ್ಲಿ ನಡೆದುಕೊಂಡು ನಿಮ್ಮ ಸರ್ವಾಧಿಕಾರತ್ವವನ್ನು ಮತ್ತಷ್ಟು ಮೆರೆಯಿರಿ.
ಕರ್ನಾಟಕ ರಾಜ್ಯದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡುವ ವಿಚಾರದಲ್ಲಿ ಪಕ್ಷಪಾತದ ಧೋರಣೆಯನ್ನ ಅನುಸರಿಸುತ್ತಿರುವ ವಿಚಾರದಲ್ಲಿ ಸ್ಪಷ್ಟವಾದಂತಹ ಸಾಕ್ಷಿಗಳಿವೆ. ಅನೇಕರ ಮೇಲೆ ಗಂಭೀರವಾದ ಆರೋಪಗಳು ಇದ್ದು ತನಿಖೆಯೂ ಮುಗಿದು ಆರೋಪ ಪಟ್ಟಿ ಸಲ್ಲಿಸುವ ಸಲುವಾಗಿ ಅನುಮತಿಗಾಗಿ ಕಡತವನ್ನು ತಮ್ಮ ಬಳಿಯಲ್ಲಿ ಹಲವಾರು ತಿಂಗಳುಗಳಿಂದ ಇಟ್ಟುಕೊಂಡಿರುವ ಮಾನ್ಯ ರಾಜ್ಯಪಾಲರು ಸಿದ್ದರಾಮಯ್ಯನವರ ವಿಚಾರದಲ್ಲಿ ತೋರಿಸಿದಂತಹ ಆತುರ, ಇದೊಂದು ರಾಜಕೀಯ ಪ್ರೇರಿತ ನಿರ್ಧಾರ ಎನ್ನುವುದಕ್ಕೆ ಬೇರೆ ಯಾವ ಸಾಕ್ಷಿಗಳು ಬೇಕಿಲ್ಲ.
ಕರ್ನಾಟಕ ರಾಜ್ಯದಲ್ಲಿ ಕೋಟ್ಯಂತರ ಮತದಾರರಿಂದ 136 ಮಂದಿ ಶಾಸಕರನ್ನು ಹೊಂದಿರುವ, ಸರ್ಕಾರ ಅಭದ್ರಗೊಳಿಸುವ ಹಾಗೂ ಆಡಳಿತ ಯಂತ್ರವನ್ನು ಸ್ತಬ್ಧಗೊಳಿಸುವ ತಂತ್ರಗಾರಿಕೆ ಇದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಇವರ ದುರಾಲೋಚನೆಯನ್ನು ಅರಿತು ಎಚ್ಚರಿಕೆಯ ನಡೆಯನ್ನು ಇಡಬೇಕು.
ತನ್ನ ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಬರಗಾಲವನ್ನು ಎದುರಿಸಿ, ಪ್ರವಾಹದ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾ ಆಡಳಿತ ಯಂತ್ರವನ್ನು ಸರಿಯಾದ ದಾರಿಯಲ್ಲಿ ಸಾಗಿಸಿಕೊಂಡು ಹೋಗುತ್ತಿರುವ ಸರ್ಕಾರವನ್ನು ಅಸ್ಥಿರಗೊಳಿಸುವುದು ಮತ್ತು ಆಡಳಿತ ಯಂತ್ರವನ್ನು ದುರ್ಬಲಗೊಳಿಸುವುದು, ಈ ಮೂಲಕ ಜನರ ಮನಸ್ಸಿನಲ್ಲಿ ಸರ್ಕಾರದ ಮೇಲೆ ಕೆಟ್ಟದಾದಂತಹ ಅಭಿಪ್ರಾಯವನ್ನು ಮೂಡಿಸಬೇಕೆಂಬ ಕುತಂತ್ರ ಇವರ ನಡವಳಿಕೆಗಳ ಹಿಂದೆ ಅಡಗಿದೆ.
ಒಟ್ಟಾರೆಯಾಗಿ ರಾಜ್ಯಪಾಲರುಗಳ ನಡವಳಿಕೆ ಗಮನಿಸಿದಾಗ ಈ ಹಿಂದೆ ಸರ್ಕಾರಿ ಆಯೋಗದ ಶಿಫಾರಸು ಮತ್ತು ರಾಜ್ಯಪಾಲರ ಅಧಿಕಾರದ ವ್ಯಾಪ್ತಿ ಹಾಗೂ ಇವರ ನೇಮಕಾತಿ ಇವುಗಳ ವಿಚಾರದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಪೂರ್ಣ ಪೀಠದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಸ್ಪಷ್ಟವಾದಂತಹ ಅಭಿಪ್ರಾಯವನ್ನು ನೀಡಬೇಕಾದದ್ದು ಪ್ರಜಾಪ್ರಭುತ್ವದ ಆಶಯಗಳ ರಕ್ಷಣೆ ಹಿನ್ನೆಲೆಯಲ್ಲಿ, ಅತ್ಯಂತ ತುರ್ತಾಗಿರುತ್ತದೆ.
– ಕೆ ಎಸ್ ನಾಗರಾಜ್ ಬೆಂಗಳೂರು




