ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ
ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ, ಕುರುಬರಹಳ್ಳಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 200 ಯುನಿಟ್ ಉಚಿತ ವಿದ್ಯುತ್ ಮತ್ತು ಗೃಹಲಕ್ಷ್ಮೀ ಯೋಜನೆ ಮನೆಯ ಯಾಜಮಾನಿಗೆ 2000 ರೂಪಾಯಿ ಮತ್ತು ಪ್ರತಿ ವ್ಯಕ್ತಿಗೆ 10 ಕೆ.ಜಿ.ಅಕ್ಕಿ ಉಚಿತ ಕಾರ್ಯಕ್ರಮ ಜನರಿಗೆ ಖಾತರಿ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಎ.ಐ.ಸಿ.ಸಿ. ಕಾರ್ಯದರ್ಶಿ ಬೆಂಗಳೂರು ಉಸ್ತುವಾರಿ ಅಭಿಷೇಕ್ ದತ್ತ, ಕಾಂಗ್ರೆಸ್ ಪಕ್ಷದ ಮುಖಂಡ ನಿಜಾಮ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಕುಮಾರ್, ಮಾಜಿ ಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಸ್.ಕೇಶವಮೂರ್ತಿ, ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಕಾಂಗ್ರೆಸ್ ಮುಖಂಡರಾದ ರಾಧಕೃಷ್ಣ, ಮಾಜಿ ಉಪಮಹಾಪೌರ ಬಿ.ಎಸ್.ಪುಟ್ಟರಾಜು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ, ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಚೇತನಾ ಎಸ್.ಕೇಶವಮೂರ್ತಿ, ಮಲ್ಲಿಕಾರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಡಿ.ಕೆ.ಶಿವಕುಮಾರ್ ರವರು ಮಾತನಾಡಿ, ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ ದೇವರ ಕ್ಷೇತ್ರ, ಮಾತೃಭೂಮಿ ಎನ್ನುತ್ತೇವೆ, ಲಕ್ಷ್ಮೀಪಾರ್ವತಿ, ಲಕ್ಷ್ಮೀವೆಂಕಟೇಶ್ ಎಲ್ಲ ಕಡೆ ಮಹಿಳೆಯರಿಗೆ ಸ್ಥಾನಮಾನ ನೀಡಲಾಗಿದೆ. ಧರ್ಮ ಮತ್ತು ಅಧರ್ಮದ ನಡುವೆ ಇಂದು ಯುದ್ದ. ಮತದಾರರೆ ಪ್ರಭುಗಳು, ಕಾರ್ಯಕರ್ತರೆ ನಮ್ಮ ಜೀವಾಳ ಎಂದರು.
ಕೇಂದ್ರ ಸರ್ಕಾರ ಎಲ್ಲ ಶ್ರಮಿಕ ವರ್ಗದವರಿಗೆ ಯಾವುದೇ ಅನುದಾನ ನೀಡಿಲ್ಲ ಮತ್ತು 2 ಕೋಟಿ ಉದ್ಯೋಗ ಎಲ್ಲಿ ಹೋಯಿತು? ಎಂದರು.
ಚುನಾವಣೆ ಪೂರ್ವ ಸರ್ವೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂಬ ವರದಿ ಇದೆ. ಬಿಜೆಪಿ ಅವಧಿಯಲ್ಲಿ ಐ.ಟಿ. ಸಿಟಿ ಮತ್ತು ಸಿಲಿಕಾನ್ ಸಿಟಿ ಎಲ್ಲ ಹೋಗಿ ಕರಷ್ಷನ್ ಸಿಟಿ ಎಂದು ಕುಖ್ಯಾತಿ ಪಡೆದಿದೆ ಎಂದರು.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಮಹಾಜನತೆ ನಂಬಿಕೆ ಇಟ್ಟು ಬಂದಿದ್ದೇನೆ, ದೇವರ ಸ್ಥಳವಾದ ಈ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಬೇಕು. ಪ್ರತಿ ಮನೆ 200 ಯೂನಿಟ್ ವಿದ್ಯುತ್ ನೀಡುವುದರಿಂದ ಅತ್ಯಂತ ಪ್ರಯೋಜನಕಾರಿಯಾಗಿದೆ ಮತ್ತು ಮನೆಯ ಯಾಜಮಾನಿಗೆ ನೇರವಾಗಿ ಅವರ ಅಕೌಂಟ್ 2000 ಹಾಕಲಾಗುತ್ತದೆ, ಪ್ರತಿ ವ್ಯಕ್ತಿಗೆ 10ಕೆ.ಜಿ.ಅಕ್ಕಿ ಮೂರು ಯೋಜನೆಗಳನ್ನು ನೀಡಲಾಗತ್ತದೆ. ನುಡಿದಂತೆ ನಡೆ, ನಡೆದಂತೆ ನುಡಿಯುತ್ತೇವೆ ಎಂದು ಹೇಳಿದರು.
ಜಿ.ಸಿ.ಚಂದ್ರಶೇಖರ್ ಮಾತನಾಡಿ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಇದೆ. ನಮ್ಮ ಪಕ್ಷ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಮತದಾರರು ಉತ್ತಮ ಪಕ್ಷ ಆಯ್ಕೆ ಮಾಡುವ ಅವಕಾಶ ಲಭಿಸಿದೆ, ಬಿಜೆಪಿ ಭ್ರಷ್ಟ ಸರ್ಕಾರ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದರು.
ಕೊರೋನ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಜನರ ನೋವಿಗೆ ಸ್ಪಂದಿಸಲಿಲ್ಲ. ಯಾವ ಮುಖ ಇಟ್ಟುಕೊಂಡು ಬಿಜೆಪಿ ಮತ ಕೇಳಲು ಹೋಗುತ್ತಿದ್ದಾರೆ, ರೈತರ ಸಾಲದ ಮನ್ನ ಮಾಡಬೇಡಿ ಎಂದು ಲೋಕಸಭಾ ಸದಸ್ಯ ತೇಜಸ್ವಿಸೂರ್ಯ ಮಾತನಾಡುತ್ತಾರೆ. ರೈತ ವಿರೋಧಿ, ಜನವಿರೋಧಿ ಅವಿವೇಕಿಗಳನ್ನು ಸೋಲಿಸುವ ಮೂಲಕ ರಾಜ್ಯದ ಜನ ಸೇಡು ತೀರಿಸಿಕೊಳ್ಳಬೇಕು ಎಂದು ಹೇಳಿದರು.
ಅಭಿಷೇಕ್ ದತ್ತ ಮಾತನಾಡಿ, ಕರ್ನಾಟಕದಲ್ಲಿ ಬಹಳ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಮೂರು ಯೋಜನೆಗಳಿಗೆ ಗ್ಯಾರಂಟಿ ಕಾರ್ಡ್ ಪ್ರತಿ ಮನೆಗಳಿಗೆ ವಿತರಿಸಲಾಗುತ್ತಿದೆ. ನೋಟು ಅಮ್ಯಾನೀಕರಣದಿಂದ ದೇಶ ಅತಂತ್ರದತ್ತ ಸಾಗಿದೆ. ರಾಜ್ಯ ಶಾಸಕನ ಮನೆ ಮತ್ತು ಮಗನ ಮನೆಯಲ್ಲಿ 6 ಕೋಟಿಗೂ ಹೆಚ್ಚು ಲಂಚದ ಹಣ ಸಿಕ್ಕಿದೆ. ಗ್ಯಾಸ್ ಸಿಲಿಂಡರ್, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಮಹಿಳೆಯರು ಮತ್ತು ಅವರ ಕುಟುಂಬ ವರ್ಗ ಸಂಕಷ್ಟದಲ್ಲಿ ಇದ್ದಾರೆ. ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗಲು ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಟಿಕೆಟ್ ಆಕಾಂಕ್ಷಿ ಎಸ್.ಕೇಶವಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷ ನನ್ನನು ಗುರುತಿಸಿ ಎರಡು ಬಾರಿ ಮಹಾನಗರ ಪಾಲಿಕೆನಾಗಿ ಆಯ್ಕೆಯಾಗಲು ಸಹಕಾರ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಈ ಬಾರಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸುವುದು ಖಚಿತ ಎಂದು ಹೇಳಿದರು.
ಎಮ್.ಶಿವರಾಜುರವರು ಮಾತನಾಡಿ, ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜನತೆಗೆ ನೀಡಿದ 165ಭರವಸೆಯನ್ನ ಈಡೇರಿಸಿದೆ. ಹಸಿವಿನಿಂದ ಯಾರೂ ಬಳಲಬಾರದು ಎಂದು ಪ್ರತಿ ವ್ಯಕ್ತಿಗೆ 10ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಬಿಜೆಪಿ ಕಮಿಷನ್ ಸರ್ಕಾರ ತೊಲಗಬೇಕು, ಜನಪರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪರಿಸರ ರಾಮಕೃಷ್ಣ, ಸುಧೀಂದ್ರ, ನಟರಾಜ್ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.




