ನಿನ್ನೆ ಅಹ್ಮದಾಬಾದ್‍ನ ಸ್ಟೇಡಿಯಂನಲ್ಲಿ ಸೇರಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ನಾ ಕಂಡ ಅತ್ಯಂತ ಅನಾಗರಿಕ ಪ್ರೇಕ್ಷಕರು. ಭಾರತದ ಮಾನ ಹರಾಜಾಕಲೆಂದೇ ಅವರು ಅಲ್ಲಿ ಸೇರಿದ್ದರು ಇಲ್ಲ ಅವರನ್ನು ಅಲ್ಲಿ ಸೇರಿಸಲಾಗಿತ್ತು. ಟಾಸ್ ಆಗಿ ಪಾಕೀಸ್ಥಾನ ತಂಡದ ಕಪ್ತಾನ ಬಾಬರ್ ಅಜಾಮ್ ವೀಕ್ಷಕ ವಿವರಣೆಕಾರನೊಂದಿಗೆ ಮಾತಾನಾಡಲು ಇಳಿಯುತ್ತಿದ್ದಂತೆ ಪ್ರೇಕ್ಷಕರು ಪಾಕ್ ವಿರುದ್ಧ ಘೋಷಣೆ ಕೂಗುತ್ತಾ ಅಸಭ್ಯವಾಗಿ ವರ್ತಿಸತೊಡಗಿದರು. ಅವರ ವರ್ತನೆ ಎಷ್ಟೊಂದು ಅನಾಗರಿಕ ಹಾಗೂ ಅಸಭ್ಯವಾಗಿತ್ತೆಂದರೆ ಕಾಮೆಂಟ್ರಿ ಬಾಕ್ಸಿನಲ್ಲಿದ್ದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡಾ ಪ್ರೇಕ್ಷಕರ ವರ್ತನೆಯ ಬಗ್ಗೆ ಸಿಟ್ಟಾದರು.
ಆಮೇಲೆ ಪಂದ್ಯದುದ್ದಕ್ಕೂ ಅಲ್ಲಿ ನಡೆದದ್ದು ತೀರಾ ಅಸಭ್ಯ ಹಾಗೂ ಹೇಸಿಗೆ ಹುಟ್ಟಿಸುವಂತಹ ವರ್ತನೆ.ಅಂದಹಾಗೆ ಇಂಥ ಅನಾಗರಿಕ ಹಾಗೂ ಅಸಹನೀಯ ವರ್ತನೆಯಾಗುತ್ತಿದ್ದಾಗ ಪ್ರೇಕ್ಷಕ ವೃಂದದಲ್ಲಿ ಸ್ವತ ಭಾರತದ ಗೃಹಮಂತ್ರೀ ಆಸೀನರಾಗಿದ್ದರು. ಅವರ ಜೊತೆ ಭಾರತ ಕಂಡ ಮಹಾನ್ ಕ್ರಿಕೆಟ್ ಆಟಗಾರ ಹಾಗೂ ಸದ್ಯ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಕೂಡಾ ಅಲ್ಲೇ ಇದ್ದರು.
ಮತ್ತೆ ಈ ಜನರು ನಮ್ಮದು ವಿಶ್ವದಲ್ಲೇ ಶ್ರೇಷ್ಟ ಸಂಸ್ಕೃತಿ, ನಮ್ಮಲ್ಲಿ ಅತಿಥಿ ದೇವೋಭವ ಎಂದೆಲ್ಲಾ ಸ್ವಕುಚಮರ್ಧನ ಮಾಡಿಕೊಳ್ಳುತ್ತಾರೆ. ಅದರ ಜೊತೆ ಸಹಿಷ್ಣುಗಳು ಎಂಬ ವಿಶೇಷಣ ಬೇರೆ. ನಾವು ಸಹಿಷ್ಟುಗಳಲ್ಲ, ಕೇವಲ ಅವಕಾಶ ವಂಚಿತರು. ಅವಕಾಶ, ಅಧಿಕಾರ, ಜನ ಹಾಗೂ ಧನಬಲ ಇದ್ದಾಗ ನಮ್ಮಷ್ಟು ಕ್ರೂರ, ಅಸಭ್ಯ ಹಾಗೂ ಅನಾಗರಿಕ ಮಂದಿ ಎಲ್ಲೂ ಸಿಗಲಿಕ್ಕಿಲ್ಲ. ನಮ್ಮಲ್ಲಿರುವ ಧರ್ಮೋನ್ಮಾದ ಹಾಗೂ ಯುದ್ದೋನ್ಮಾದ ಬೇರೆಲ್ಲೂ ಇರಲಿಕ್ಕಿಲ್ಲ.
ಇದೆಲ್ಲಾ ನೋಡುವಾಗ ನನಗನಿಸುವುದೇನೆಂದರೆ ನಮ್ಮಲ್ಲಿ ನಡೆಯುವ ಅತ್ಯಾಚಾರ, ಹಿಂಸೆ, ಕೌಟುಂಬಿಕ ಹಿಂಸೆ, ಕೊಲೆ, ಕೋಮು ಗಲಭೆಗಳು, ಮಕ್ಕಳ, ಮಹಿಳೆಯರ ಮೇಲಿನ ಅತ್ಯಾಚಾರ ಮುಂತಾದವುಗಳು ಕೇವಲ ಅಪರಾಧಿಕ ಮನಸ್ಥಿತಿಯ ಕಾರಣಕ್ಕಲ್ಲ, ಬದಲಾಗಿ ನಾವು ರಕ್ತಪಾತ, ಹಿಂಸೆ, ಅತ್ಯಾಚಾರಗಳನ್ನು ಆನಂದಿಸುತ್ತೇವೆ. ಇವುಗಳು ನಮಗೊಂದು ವಿಚಿತ್ರ ಕಿಕ್ ಕೊಡುತ್ತವೆ. ನಮಗಿಂತಾ ದುರ್ಬಲರು, ನಮ್ಮ ಅಧಿಕಾರದಡಿಯಲ್ಲಿರುವವರನ್ನು ಹಿಂಸಿಸಲು, ಅವರಿಗೆ ನೋವನ್ನುಂಟುಮಾಡುವಾಗ ನಮ್ಮಲ್ಲೊಂದು ವಿಚಿತ್ರ ‘ವಿಶ್ವಗುರು’ ಫೀಲಿಂಗ್ ಬರುತ್ತೆ. ಹಾಗಾಗಿಯೇ ನಾವು ಹಿಂಸಾ ರಸಿಕರು, ಸಾವು-ನೋವುಗಳು ನಮ್ಮ ಫೇವರಿಟ್ ಟೈಮ್-ಪಾಸ್.
- Gladson Almeida




