ಪ್ರೊ.ನರೇಂದ್ರ ನಾಯಕ್ ಅವರಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ವಾಪಸ್ ಪಡೆದ ಸರ್ಕಾರ

3 years ago

ಮಂಗಳೂರು: ಅಚ್ಚರಿದಾಯಕ ನಡೆಯಲ್ಲಿ ಖ್ಯಾತ ವಿಚಾರವಾದಿ, ಫಿರಾ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಅವರಿಗೆ ನೀಡಲಾಗಿದ್ದ ವೈಯಕ್ತಿಕ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.

ನನಗೆ ನಿಯೋಜಿಸಲಾಗಿದ್ದ ಪೊಲೀಸ್ ಅಂಗರಕ್ಷಕರನ್ನು ಇಂದು (ಮಾರ್ಚ್ 30) ದಿಢೀರನೆ ಹಿಂಪಡೆಯಲಾಗಿದೆ ಮತ್ತು ಸ್ವಲ್ಪ ಸಮಯದ ನಂತರ ಅವರ ವೈಯಕ್ತಿಕ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ನನಗೆ ತಿಳಿಸಲಾಯಿತು ಎಂದು ಪ್ರೊ. ನರೇಂದ್ರ ನಾಯಕ್ ೀ ಕುರಿತು ಪ್ರತಿಕ್ರಿಯಿಸಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರದ ಸಲಹೆನು ಉಲ್ಲೇಖಿಸಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರಿಂದ ನನಗೆ ಪತ್ರ ಬಂದಿದೆ ಮತ್ತು ಇನ್ನು ಮುಂದೆ ನನ್ನ ಭದ್ರತೆಗೆ ನಾನೇ ಪಾವತಿಸಬೇಕೆಂದು ಹೇಳಿದೆ. ನಾನು ಯಾವುದೇ ಭದ್ರತೆಯನ್ನು ಕೇಳಿಲ್ಲ ಮತ್ತು ನನ್ನ ರಕ್ಷಣೆಗೆ ನಾನೇ ಪಾವತಿಸುವಷ್ಟು ಸಿರಿವಂತನಲ್ಲ. ನಾನು ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿಯಾಗಿ ಲಿಖಿತವಾಗಿ ಈ ಎಲ್ಲವನ್ನು ವಿವರಿಸಿದ್ದೇನೆ ಎಂದರು.

ಪ್ರೊ. ನರೇಂದ್ರ ನಾಯಕ್ ಅವರಿಗೆ ಅವರು ಸ್ವತಃ ರಕ್ಷಣೆ ಕೋರದೇ ಇದ್ದರೂ ಜುಲೈ 7, 2016 ರಿಂದ ರಾಜ್ಯ ಸರ್ಕಾರದ ವೆಚ್ಚದಲ್ಲಿ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಲಾಗುತ್ತಿದೆ. ಇದರ ಪ್ರಕಾರ ಅವರಿಗೆ ಸರದಿಯ ಮೂಲಕ ಬೆಂಗಾವಲು ನೀಡಲು ಇಬ್ಬರು ಪೊಲೀಸ್ ಬಂದೂಕುಧಾರಿಗಳನ್ನು ನಿಯೋಜಿಸಲಾಯಿತು.

ಆಗ ನಗರವನ್ನೇ ತಲ್ಲಣಗೊಳಿಸಿದ್ದ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದಲ್ಲಿ ಪ್ರೊ.ನಾಯಕ್ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ವಿನಾಯಕ ಬಾಳಿಗಾ ಹತ್ಯೆ ಪ್ರಕರಣಕ್ಕೂ ಭದ್ರತೆಗೂ ಸಂಬಂಧವಿಲ್ಲ ಎಂದು ಅಂದಿನ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಸ್ಪಷ್ಟ್ಟೀಕರಣ ನೀಡಿದ್ದರು.

2013 ರಿಂದ ವಿಚಾರವಾದಿಗಳ ಮೇಲೆ ಸರಣಿ ಹಂತಕ ದಾಳಿಗಳು ನಡೆದಿದ್ದವು. ಮಹಾರಾಷ್ಟ್ರದ ನರೇಂದ್ರ ಧಾಬೋಲ್ಕರ್, ಗೋವಿಂದ್ ಪನ್ಸಾರೆ, ಕರ್ನಾಟದಕ ಸಂಶೋಧಕ ಎಂ.ಎಂ.ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರಂತಹ ರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳನ್ನು ಮೂಲಭೂತವಾದಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಕಾರ್ಯಕರ್ತರು ಕೊಂದಿದ್ದರು.

ಇಂತಹ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಅಂತಿಮ ತೀರ್ಮಾನ, ತೀರ್ಪು ಹೊರಬಿದ್ದಿಲ್ಲ. 2018 ರಲ್ಲಿ, ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುವಾಗ, ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಂಕಿತರಿಂದ ಎರಡು ಹಿಟ್ ಲಿಸ್ಟ್‌ಗಳನ್ನು ವಶಪಡಿಸಿಕೊಂಡಿತ್ತು. ಗಿರೀಶ್ ಕಾರ್ನಾಡ್ ಮತ್ತು ಪ್ರೊ.ಕೆ.ಎಸ್.ಭಗವಾನ್ ಅವರಂತಹ ಇತರ ಪ್ರಸಿದ್ಧ ಬುದ್ಧಿಜೀವಿಗಳ ಜೊತೆಗೆ ಪ್ರೊ. ನರೇಂದ್ರ ನಾಯಕ್ ಅವರ ಹೆಸರನ್ನು ಈ ಗುರಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಸರ್ಕಾರದ ದಿಢೀರ್ ನಡೆ ಕುರಿತು ಪ್ರತಿಕ್ರಿಯಿಸಿರುವ ಪ್ರೊ.ನರೇಂದ್ರ ನಾಯಕ್, ನಾನು ಯಾವುದೇ ಅಧಿಕೃತ ರಕ್ಷಣೆಯನ್ನು ಎಂದಿಗೂ ಕೇಳಿಲ್ಲ. ನಾನು ನನ್ನ ಪಾಡಿಗೆ ಮುಂದುವರಿಯಲಿದ್ದೇನೆ ಮತ್ತು ಇದು ನನ್ನ ಕೆಲಸದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ವಕೀಲರಾಗಿರುವ ಅವರ ಪತ್ನಿ ಆಶಾ ನಾಯಕ್ ಅವರು ಹಠಾತ್ ನಡೆಯಿಂದ ನನಗೂ ಆಶ್ಚರ್ಯವಾಯಿತು ಎಂದಿದ್ದಾರೆ. ಚುನಾವಣೆ ಸಮಯದಲ್ಲಿ ಸಾರ್ವಜನಿಕ ವ್ಯಕ್ತಿಗಳಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆಯುವುದು ಸಾಮಾನ್ಯ. ಆದರೆ ಇದು ರಾಜಕೀಯೇತರ ಜನರಿಗೆ ಅನ್ವಯಿಸುವುದಿಲ್ಲ. ಪೊಲೀಸ್ ಇಲಾಖೆಯು ಭದ್ರತೆಗಾಗಿ ಹಣ ಪಾವತಿಸುವಂತೆ ಕೇಳಿತ್ತು. ಆದರೆ ಪಿಂಚಣಿದಾರರು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಹೇಗೆ ಶಕ್ತರಾಗುತ್ತಾರೆ? ಚುನಾವಣೆಯ ಸಮಯದಲ್ಲಿ ಅಪರಾಧಗಳು ಸಂಭವಿಸಬಹುದಾದ ಈ ನಿರ್ಣಾಯಕ ಸಮಯದಲ್ಲಿ ಉನ್ನತ ವ್ಯಕ್ತಿಗೆ ನೀಡಲಾದ ಭದ್ರತೆಯನ್ನು ಹಿಂತೆಗೆದುಕೊಂಡಿರುವುದು ಪೊಲೀಸರು ಮಾಡಿದ ತಪ್ಪು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದ ನಂತರ ಅಧಿಕಾರಿಗಳಿಗೆ ಪತ್ರ ಬರೆಯಲು ಅವರು ಯೋಜಿಸುತ್ತಿದ್ದಾರೆ.

ವೈಜ್ಞಾನಿಕ ಮನೋಭಾವನೆಯನ್ನು ಜನರಲ್ಲಿ ಬಿತ್ತಲು ಕಳೆದ 4 ದಶಕಗಳಿಂದ ನಿರಂತರವಾಗಿ ಪ್ರೊ.ನರೇಂದ್ರ ನಾಯಕ್ ಅವರು ಶ್ರಮಿಸುತ್ತಿದ್ದಾರೆ. ಡೋಂಗಿ ಬಾಬಾಗಳು ಮತ್ತು ಜನರಿಗೆ ಸುಲಭವಾಗಿ ಮೋಸ ಮಾಡುವ ಮಾಟ, ಮಂತ್ರ, ತಂತ್ರ, ಬಾನಾಮತಿ ಮತ್ತು ಇತರ ಕುತಂತ್ರಗಳನ್ನು ಪ್ರಾತ್ಯಕ್ಷಿಕೆ ಸಮೇತ ಬಯಲು ಮಾಡಿ ಜನರನ್ನು ಮೂಢನಂಬಿಕೆಯಿಂದ ಹೊರತರುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ದೇಶ, ವಿದೇಶಗಳಲ್ಲಿ ಅವರು ತರಬೇತಿಗಳನ್ನು ನೀಡಿದ್ದು, ವೈಜ್ಞಾನಿಕ ಚಿಂತನೆಯನ್ನು ಎಳೆಯರು,ಮುದುಕರು, ಮಹಿಳೆಯರು, ಮಕ್ಕಳು ಎಂಬ ಭೇದಭಾವವಿಲ್ಲದೆ ಜಾತಿ, ಮತ, ಅಂತಸ್ತುಗಳನ್ನು ಮೀರಿ ಎಲ್ಲರಿಗೂ ಕಲಿಸುತ್ತಿದ್ದಾರೆ.

ಕೊಯ್ಯದೆ ಆಪರೇಷನ್ ಮಾಡುವುದು, ಶೂನ್ಯದಿಂದ ವಸ್ತುಗಳನ್ನು ಉತ್ಪಾದಿಸುವುದು, ಬೆಂಕಿ, ಗಾಜುಗಳು ಮೇಲೆ ನಡೆಯುವುದು, ಇಸ್ಪೀಟ್ ಎಲೆಗಳ ನಂಬರ್ ಗಳನ್ನು ಗುರುತಿಸುವುದು, ತೆಂಗಿನಕಾಯಿ, ನಿಂಬೆಹಣ್ಣಿನಲ್ಲಿ ರಕ್ತಬರುವುದು, ದೇವರು, ದೆವ್ವ, ಭೂತ, ಪಿಶಾಚಿ ಮೈಮೇಲೆ ಬರುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಕೈಯಲ್ಲಿರುವ ಪೇಪರ್ ನಲ್ಲಿರುವ ನಂಬರ್ ಹೇಳುವುದು, ಬಿಸಿ ಎಣ್ಣೆಯಲ್ಲಿ ಬೋಂಡ ಮೊದಲಾದವುಗಳನ್ನು ಕರಿಯುವುದು, ತೆಂಗಿನಕಾಯಿ ಓಡಾಡುವುದು, ತುಂಡಾದ ಹಗ್ಗ ಬೆಸೆಯುವುದು, ಚಾಕುವಿನಿಂದ ತಂಬಿಗೆ ಎದ್ದೇಳುವುದು, ಭಾರೀ ತೂಕದ ಕಲ್ಲುಗಳನ್ನು ಬೆರಳುಗಳ ಸಹಾಯದಿಂದ ಮೇಲಕ್ಕೆ ಏಳಿಸುವುದು ಇತ್ಯಾದಿಗಳನ್ನು ಅವರು ಪ್ರಾತ್ಯಕ್ಷಿಕೆ ಸಮೇತ ಜನರಿಗೆ ತೋರಿಸಿ ಮೂಢನಂಬಿಕೆಯಿಂದ ಹೊರಬರಲು ಪ್ರೇರಣೆ ನೀಡುತ್ತಿದ್ದಾರೆ. ಈ ಮೂಲಕ ಜನರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಶೋಷಣೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಅಮಾಯಕರನ್ನು ಶೋಷಿಸಿ ಹಣ ಮಾಡುವ ವರ್ಗದ ಪಾಲಿಗೆ ಬಿಸಿತುಪ್ಪವಾಗಿದ್ದಾರೆ. ಜೊತೆಗೆ ಕೆಲವು ಮಠಾಧೀಶರ ಕರ್ಮಕಾಂಡಗಳ ವಿರುದ್ಧ ಮತ್ತು ಮೆಡಿಕಲ್ ಮಾಫಿಯಾ, ಆಹಾರ ಮಾಫಿಯ ವಿರುದ್ಧ ಕೂಡ ಅವರು ಗಟ್ಟಿದನಿಯಾಗಿದ್ದು, ಜನಪರವಾದ ಚಿಂತಕರಾಗಿದ್ದಾರೆ.

ಪ್ರೊ. ನರೇಂದ್ರ ನಾಯಕ್ ಅವರು ನೀಡಿರುವ ಹೇಳಿಕೆಯ ಸಂಪೂರ್ಣ ಪಠ್ಯ ಇಲ್ಲಿದೆ:

Dear all,
This is to bring to the attention of all of you that the concerns expressed about my safety in previous communications by you are now coming true. Elections for the legislative assembly of Karnataka state due for May, 2023 were announced today and within hours the security provided for me was withdrawn. Probably this is because the administration is no longer under the political leaders and any responsibility for taking the decision can be ascribed to bureaucracy! The gunman provided to me by the police from June, 2016 has been removed with effect from today. I had not asked for this security at any time but it was said to have been provided following threats to the lives of us prominent rationalists. Narendra Dhabolkar was murdered in 2013 and after that Pansare, Kalburgi and Gauri Lankesh.

About a month ago I had a letter from the DCP of Mangalore police that henceforth I should pay for the security provided. While I had not asked for it and I am not a wealthy person to pay for my own protection as mentioned in that letter, I had replied in writing to the same stating all the facts after meeting the concerned person.

There are a number of extremist elements out to get me for my work as a rationalist and to uphold principles of secularism, human and democratic rights. Right now the trial of the RTI activist Vinayak Baliga is going on and witnesses have complained to the court that they are being threatened. A number of reports in local language have been published, here is the one in English.

This is the case in which I had played a major role in getting the proper investigation done and real culprits prosecuted. The people behind this are very politically powerful individuals and are supposedly threatening the witnesses.

I am bringing this to the attention of Humanist International so that anything happening to me will be the result of removing the security cover which was there since nearly 6 years.

In case of anything happening to me as a result of the actions of the criminal, communal elements, I do hope that these things will be recalled.

With regards
Yours sincerely
Narendra Nayak

Leave a Reply