ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂತು ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹೀಗೆ ಹೇಳುವಾಗ ಅವರಾಗಲೀ, ಅವರ RSS ಸಂಸ್ಥೆಯಾಗಲೀ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ ಎಂಬುದನ್ನು ನಾನು ಅವರ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಬ್ರಿಟಿಷರ ವಸಾಹತುಶಾಹಿ ನೀತಿಯ ಎದುರು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರ ತ್ಯಾಗ ಮತ್ತು ಬಲಿದಾನದಿಂದಾಗಿಯೇ ನಮ್ಮ ದೇಶ ಸ್ವತಂತ್ರ ಹೊಂದಿತು.
ಇನ್ನು ನಂತರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತವರ ಸಂವಿಧಾನ ಬಂದ ಬಳಿಕ ಈ ನೆಲದ ಮೂಲ ನಿವಾಸಿಗಳಿಗೆ ಸಾಮಾಜಿಕ ಸ್ವಾತಂತ್ರ್ಯದ ಪರ್ವ ಆರಂಭಗೊಂಡಿತು.
ಈ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ತಂದು ಕೊಡುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ದೊಡ್ಡದಾಗಿದ್ದು ಇದಕ್ಕಾಗಿ ನಾವು ಅಂಬೇಡ್ಕರ್ ಅಂತಹ ಮಹನೀಯರಿಗೆ ಋಣಿಯಾಗಿರಬೇಕೇ ವಿನಃ ಬಾಲ ರಾಮನಿಗಲ್ಲ.
ಲೋಕಸಭೆ ಚುನಾವಣೆಗಾಗಿ ಅಪೂರ್ಣಗೊಂಡಿದ್ದ ರಾಮ ಮಂದಿರವನ್ನು ಉದ್ಘಾಟಿಸುವ ಕೆಲಸ ಮಾಡಿದ್ದ ಬಿಜೆಪಿಗರು, ತಮಗೆ ಚುನಾವಣೆ ಮುಖ್ಯವೇ ಹೊರತು, ಯಾವ ರಾಮನಲ್ಲ ಎಂಬ ಸಂಗತಿಯನ್ನು ದೇಶಕ್ಕೇ ಸಾರಿ ಹೇಳಿದರು.
ಅದಕ್ಕಿಂತ ಮುಖ್ಯವಾಗಿ ಈ ದೇಶದ ಮೂಲೆ ಮೂಲೆಗಳಲ್ಲಿ ರಾಮ ಮಂದಿರ ಇದೆ, ಮಸೀದಿ, ಚರ್ಚು, ಇಗರ್ಜಿ ಎಲ್ಲವೂ ಇದೆ.
ಆದರೆ ಕರೋನಾ ಸಮಯ ಬಂದಾಗ ಇವೆಲ್ಲವೂ ಕೂಡಾ ಭದ್ರವಾಗಿ ಬಾಗಿಲನ್ನು ಹಾಕಿಕೊಂಡಿದ್ದವು ಎಂಬುದನ್ನು ನಾವ್ಯಾರು ಮರೆಯಬಾರದು.
ಆಗ ಬಡವರಿಗೆ, ಶ್ರಮಿಕರಿಗೆ ನೆರವಾಗಿದ್ದು ಯುಪಿಎ ಕಾಲದ ಮನ್ ರೇಗಾ ಮತ್ತು ಕಾಂಗ್ರೆಸ್ ಸರ್ಕಾರ ನೀಡಿದ ಅನ್ನಭಾಗ್ಯವೇ ವಿನಃ ಯಾವ ರಾಮಮಂದಿರವೂ ಅಲ್ಲ, ಬಾಲ ರಾಮನೂ ಅಲ್ಲ!
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




