ಸತೀಶ್ ಜಾರಕಿಹೊಳಿ ಫೌಂಡೇಷನ್ ನಿಂದ 10 ದಿನಗಳ ಕಾಲ ಉಚಿತ ತರಬೇತಿ

4 years ago

ಸೈನಿಕರು ಮತ್ತು ಪೊಲೀಸ್ ಕಾನ್ಸ್ಟೇಬಲ್ ಆಗಬಯಸುವವರಿಗೆ ಉತ್ತಮ ಅವಕಾಶ

ತರಬೇತಿ ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳಿಗೆ ಸೀಮಿತ

ಬೆಳಗಾವಿ: ದ್ವಿತೀಯ ಪಿಯುಸಿ ತೇರ್ಗಡೆಯಾಗಿ ಸೈನಿಕರಾಗಿ ದೇಶಸೇವೆ ಮತ್ತು ಪೊಲೀಸ್ ಇಲಾಖೆಗೆ ಸೇರಿ ರಾಜ್ಯದಲ್ಲಿ ಸೇವೆ ಸಲ್ಲಿಸಬಯಸುವವರಿಗೆ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಅವಧಿಯಲ್ಲಿ ಲಿಖಿತ ಪರೀಕ್ಷೆಗಳಿಗೆ ತಯಾರಿ ಮತ್ತು ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕುರಿತು ನುರಿತ ವಿಷಯ ತಜ್ಞರಿಂದ ಉಚಿತವಾಗಿ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ ಹೆಸರು ನೋಂದಾಯಿಸಬಹುದು.

ಹೆಸರು ನೋಂದಾಯಿಸಲು ಕಡೆಯ ದಿನಾಂಕ: 15/01/2022

ತರಬೇತಿ ಆರಂಭದ ದಿನಾಂಕ: 17/01/2022

ಹೆಸರು ನೋಂದಾಯಿಸಲು ಈ ಕೆಳಗಿನ ಮೊಬೈಲ್ ಗಳಿಗೆ ಸಂಪರ್ಕಿಸಬಹುದು.

ಸಂಪರ್ಕ ಸಂಖ್ಯೆಗಳು: 8217303616, 9663826115

Leave a Reply