ಗದಗ: ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ-ನಲ್ಮ್) ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಸಂಪನ್ಮೂಲ ಗೌರವಧನ ಆಧಾರಿತ 1 ಹುದ್ದೆಗೆ (ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ) ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ ನೀಡಲಾಗುವದು. ಮಾಸಿಕ ಗೌರವಧನ ರೂ.೮೦೦೦/-ಪ್ರಯಾಣ ಭತ್ಯೆಯಾಗಿ ರೂ.೨೦೦೦/-ರವರೆಗೆ ಇರುತ್ತದೆ. (ಮುಳಗುಂದ ಪಟ್ಟಣ ಪಂಚಾಯತಿಯ ವ್ಯಾಪ್ತಿಯ ಡೇ-ನಲ್ಮ್ ಯೋಜನೆಯಡಿಯಲ್ಲಿ ರಚಿಸಿದ ಪ್ರದೇಶ ಮಟ್ಟದ ಒಕ್ಕೂಟ/ಸ್ವ-ಸಹಾಯ ಸಂಘಗಳಲ್ಲಿ ಕನಿಷ್ಠ ಮೂರು ವರ್ಷದಿಂದ ಸದಸ್ಯರಾಗಿರಬೇಕು ಹಾಗೂ ಮುಳಗುಂದ ಪಟ್ಟಣದ ಹವಾಸಿಯಾಗಿರಬೇಕು, ಕಂಪ್ಯೂಟರ್ನಿರ್ವಹಣೆ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಲಗತ್ತಿಸುವುದು) ಸ್ವ-ಸಹಾಯಸಂಘದಲ್ಲಿ ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು. ಸುಸ್ತಿದಾರರಾಗಿರಬಾರದು. ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು, ಸ್ವ-ಇಚ್ಛಾ ಸೇವಾ ಮನೋಭಾವ ಹೊಂದಿರಬೇಕು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಬೇರೆ ಬೇರೆ ಸ್ಥಳಗಳಲ್ಲಿ/ ಜಿಲ್ಲೆಗಳಲ್ಲಿ/ಹೊರ ರಾಜ್ಯಗಳಲ್ಲಿ ನೀಡುವ ತರಬೇತಿಗೆ ಅಥವಾ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು ಅಭ್ಯರ್ಥಿಯು ಸ್ವ-ಸಹಾಯ ಸಂಘದಿಂದ ಸಾಲ ಪಡೆದು ಆಸ್ತಿ ಸೃಜಿಸುವಿಕೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಮುಂತಾದ ಚಟುವಟಿಕೆಗಳನ್ನು ಕೈಗೊಂಡಿರಬೇಕು. ಆಸಕ್ತ ಅಭ್ಯರ್ಥಿಗಳು ಮುಖ್ಯಾಧಿಕಾರಿ ಪಟ್ಟಣ ಪಂಚಾಯತ ಮುಳಗುಂದ ಈ ವಿಳಾಸಕ್ಕೆ ದಿನಾಂಕ: 17/01/2022ರೊಳಗಾಗಿ ಕಛೇರಿ ಅವಧಿಯಲ್ಲಿ ಡೇ-ನ್ಮಲ್ ಶಾಖೆಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯತ್ ಕಾರ್ಯಾಲಯ, ಮುಳಗುಂದ ದೂರವಾಣಿ ಸಂಖ್ಯೆ 08372-280128 ಸಂಪರ್ಕಿಸಬಹುದು.



