ಜಿಬಿಎ ಅಧಿಕಾರಿ, ನೌಕರರು ಆತಂಕ ಪಡಬೇಡಿ, ಅಮಾನತು ನೋಟಿಸ್ ನೀಡಿದರೆ ಭಯಪಡಬೇಡಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಗಲು-ರಾತ್ರಿ ಎನ್ನದೆ ಸಮೀಕ್ಷೆ ಮಾಡುತ್ತಿರುವ ಅಧಿಕಾರಿ, ನೌಕರರಿಗೆ ವಿನಾಕಾರಣ ನೋಟಿಸ್ ನೀಡಿ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಕಂದಾಯ ಮೌಲ್ಯಮಾಪಕ ಶ್ರೀನಿವಾಸ್ ಅವರನ್ನು ಅಮಾನತ್ತು ಮಾಡಿರುವುದನ್ನ ಖಂಡಿಸಿ ಬೃಹತ್ ಸಭೆ ಏರ್ಪಡಿಸಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿ ಮತ್ತು ನೌಕರರ ಕ್ಷೇಮಾಭವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎ.ಅಮೃತ್ ರಾಜ್ ಮಾತನಾಡಿ, ರಾಜ್ಯ ಸರ್ಕಾರಿ ನೌಕರರು ಮತ್ತು ಪಾಲಿಕೆ ನೌಕರರಿಗೆ ಯಾವುದೇ ಸಮಸ್ಯೆಯಾದಲ್ಲಿ ಹೋರಾಟದ ಮೂಲಕ ನ್ಯಾಯ ಪಡೆಯುವ ಹಕ್ಕು ಇದೆ. ಸಿಬ್ಬಂದಿ ಕೊರತೆ ನಡುವೆ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನ ಮಾನಸಿಕವಾಗಿ ಕುಗ್ಗಿಸುವ ಕೆಲಸವಾಗಬಾರದು ಎಂದರು.
ಜಿಬಿಎ ಮುಖ್ಯ ಆಯುಕ್ತರು ಮಾತನಾಡಿ ಪ್ರತಿಭಟನೆ, ಹೋರಾಟ ಮಾಡಬೇಡಿ ನಾವು ನಿಮ್ಮ ಜೊತೆಯಲ್ಲಿ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಸಿ.ಎಸ್.ಷಡಕ್ಷರಿ ಮಾತನಾಡಿ, ಬೆಂಗಳೂರಿನ ಸಮೀಕ್ಷೆ ಕಾರ್ಯದಲ್ಲಿ ಹಲವಾರು ಗೊಂದಲಗಳು ಇವೆ. ಸಮೀಕ್ಷೆಯಿಂದ ಶಾಲೆ, ಕಾಲೇಜು, ಸರ್ಕಾರ, ಬಿಜಿಎ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರ ಕುರಿತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂದರು.
ಮೇಲಧಿಕಾರಿಗಳ ವಿರುದ್ದ ಅಕ್ರೋಶದಿಂದ ಮಾತನಾಡಬೇಕಾಗಿ ಬಂದಿದೆ. ಮೇಲಾಧಿಕಾರಿಗಳ ಸಮೀಕ್ಷೆ ಮಾಡಿ ಅದರ ಕಷ್ಟ ಏನು ಎಂಬುದು ತಿಳಿಯುತ್ತದೆ. ಲೋಕಸಭಾ, ವಿಧಾನಸಭಾ ಹಲವು ಚುನಾವಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆದರೆ ಇಂತಹ ಕೆಟ್ಟ ಸಮೀಕ್ಷೆ ವ್ಯವಸ್ಥೆಯಿಂದ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಮಾನತು, ನೋಟಿಸ್ ಕೊಟ್ಟರೆ ಭಯಪಡಬೇಡಿ, ಏನು ಮಾಡಲು ಸಾಧ್ಯವಿಲ್ಲ. 18ನೇ ತಾರೀಖಿನವರಗೆ ಸಮೀಕ್ಷೆ ಮಾಡಿ ಮುಗಿಸಿ ಎಂದರು.
ರಮೇಶ್ ಸಂಗಾ ಮಾತನಾಡಿ, ಸಮೀಕ್ಷೆ ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿ, ನೌಕರರ ಮೇಲೆ ಕೆಲಸದ ಒತ್ತಡವಿದೆ. ಸಮೀಕ್ಷೆ ಮಾಡುವಾಗ ಸಮಸ್ಯೆಗಳು ಹಲವಾರು ಇದೆ ಶೌಚಾಲಯ ವ್ಯವಸ್ಥೆ ಇಲ್ಲ, ಬೀದಿ ನಾಯಿಗಳ ಕಚ್ಚಿರುವ ಪ್ರಕರಣಗಳು ಇವೆ. ನಮ್ಮ ಸಮಸ್ಯೆ ಹೇಳುತ್ತೇವೆ ಪರಿಹಾರ ಮಾಡಿ ಎಂದು ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಸಮೀಕ್ಷೆ ನಿಯೋಜನೆಯಲ್ಲಿ ಅವೈಜ್ಞಾನಿಕವಾಗಿ ನೇಮಿಸಲಾಗಿದೆ ಎಂದರು.
ಹಿರಿಯ ಅಧಿಕಾರಿಗಳು ಮಹಿಳಾ ನೌಕರರಿಗೆ ಯಾಕೆ ಹಿಂಸೆ ನೀಡುತ್ತಿದ್ದಾರೆ ಎಂಬ ಚಿಂತನೆ ಮಾಡಬೇಕು. ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು 10 ಮನೆ ಸಮೀಕ್ಷೆ ಮಾಡಲಿ. ಆಗ ಕಷ್ಟ ಏನು ಎಂಬುದು ಗೊತ್ತಾಗುತ್ತದೆ ಎಂದರು.




