ಬೆಂಗಳೂರು: ಅಸಹಜ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಿರಿಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಸಹಜ ನಡವಳಿಕೆಗಳ ಬಗ್ಗೆ ಸಂತ್ರಸ್ತ ಯುವಕರು ಬಹಿರಂಗ ಪಡಿಸಿರುವ ಮಾಹಿತಿ ಬೆಚ್ಚಿ ಬೀಳುವಂತಿವೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಸೂರಜ್ ರೇವಣ್ಣ ಅವರದ್ದು ದ್ವಿಮುಖ ವ್ಯಕ್ತಿತ್ವ. ಅವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ ಎಂದು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಸೀರೆ ಉಟ್ಟು, ಬಳೆತೊಡುವ ಸೂರಜ್ ಹಣೆ ಮೇಲೆ ಢಾಳಾಗಿ ಕುಂಕುಮ, ಹರಿಶಿನ ಹಚ್ಚಿಕೊಂಡು ಯಾವುದೋ ದೇವರ ಪೂಜೆ ಮಾಡುತ್ತಾರೆ. ಅವರ ವ್ಯಕ್ತಿತ್ವವೇ ಅತ್ಯಂತ ವಿಚಿತ್ರವಾಗಿದೆ ಎಂದು ಮಾಹಿತಿ ನೀಡಿರುವುದಾಗಿ ಗೊತ್ತಾಗಿದೆ.
ಹಗಲಿನ ವೇಳೆ ಎಲ್ಲರ ಸಮ್ಮುಖದಲ್ಲಿ ಅತ್ಯಂತ ಸಾಮಾನ್ಯ ವ್ಯಕ್ತಿಯಂತೆ ಸಹಜ ನಡವಳಿಕೆ ಹೊಂದಿರುತ್ತಿದ್ದ ಸೂರಜ್ ರೇವಣ್ಣ ರಾತ್ರಿ ವೇಳೆಯಲ್ಲಿ ಒಂಟಿಯಾಗಿದ್ದ ಸಮಯದಲ್ಲಿ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತಾರೆ. ಈ ವೇಳೆ ಯಾರಾದರೂ ಹುಡುಗರು ಸಿಕ್ಕರಂತೂ ಅವರ ವರ್ತನೆ ಹೇಳಲು ಅಸಾಧ್ಯ ಎಂದು ತಿಳಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.




