ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆ

5 years ago

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ಬೆಂಗಳೂರು ವತಿಯಿಂದ ಡಾ ಅನುಪಮಾ ನಿರಂಜನ ಹುಟ್ಟುಹಬ್ಬದ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆ – ೨೦೨೧ ಅನ್ನು ಆಯೋಜಿಸಲಾಗಿದೆ.

ಕನ್ನಡ ಸಂಘರ್ಷ ಸಮಿತಿಯು ಖ್ಯಾತವೈದ್ಯೆ, ಕಥೆಗಾರ್ತಿ ಡಾ. ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಅಂಗವಾಗಿ ಉದಯೋನ್ಮುಖ ಕಥೆಗಾರ್ತಿಯರಿಗೆ ಮಹಿಳಾ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಇದುವರೆಗೆ ಒಂದೂ ಕಥಾ ಸಂಕಲನವನ್ನು ಪ್ರಕಟಿಸದೆ ಇರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆಯು ಸ್ವಂತ ರಚನೆಯಾಗಿದ್ದು ಮಹಿಳಾ ಕೇಂದ್ರಿತ ಕಥಾವಸ್ತುವನ್ನು ಒಳಗೊಂಡಿರಬೇಕು. ಸ್ಪರ್ಧೆಗೆ ಕಳುಹಿಸುವ ಕಥೆಯು ಈ ಮೊದಲು ಎಲ್ಲೂ, ಯಾವ ರೂಪದಲ್ಲೂ ಪ್ರಕಟವಾಗಿರಬಾರದು. ೧೨೦೦ ಪದಗಳು ಅಥವಾ ಎ೪ ಅಳತೆಯ ಕಾಗದದಲ್ಲಿ ೫ ಪುಟಗಳ ಮಿತಿಯಲ್ಲಿರುವ ಕಥೆಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಕನ್ನಡದಲ್ಲಿ ಬರೆದು ಅಥವಾ ಡಿಟಿಪಿ ಮಾಡಿಸಿ ಕಳುಹಿಸಬೇಕು. ರೂ. ೨೦೦/- ಪ್ರವೇಶ ಶುಲ್ಕದ ಸಹಿತ ಕಥೆಯನ್ನು ಕಳುಹಿಸಲು ಕೊನೆಯ ದಿನಾಂಕ ೨೬-೪-೨೦೨೧. ತಡವಾಗಿ ಬಂದ ಕತೆಯನ್ನು ಸ್ವೀಕರಿಸುವುದಿಲ್ಲ. ವಿಳಾಸ: ಡಾ. ಕೋ. ವೆಂ. ರಾಮಕೃಷ್ಣಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ನಂ. ೩೧೩, ೨೫ನೇ ಅಡ್ಡರಸ್ತೆ, ೬ನೇ ಬಡಾವಣೆ, ಜಯನಗರ, ಬೆಂಗಳೂರು – ೫೬೦೦೭೦. ಸಂಪರ್ಕ : ೯೯೦೨೫ ೮೯೪೨೪, ೯೪೪೮೮ ೫೧೭೮೧, ಮಿಂಚಂಚೆ: kannadasangharshasamiti@gmail.com

ಕಥೆಯ ಹಾಳೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ದಾಖಲಿಸಬಾರದು. ಪ್ರತ್ಯೇಕ ಹಾಳೆಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಬರೆದು, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರದ ಜೊತೆ ಕಳುಹಿಸಬೇಕು. “ಇದುವರೆಗೆ ನನ್ನ ಒಂದೂ ಕಥಾಸಂಕಲನ ಪ್ರಕಟವಾಗಿರುವುದಿಲ್ಲ. ಕಥೆಯು ನನ್ನ ಸ್ವಂತ ರಚನೆಯಾಗಿದ್ದು, ಅನುವಾದವಾಗಲಿ, ಬೇರೆ ಕಥೆಯ ನಕಲಾಗಲಿ ಆಗುವುದಿಲ್ಲ” ಎಂದು ಸ್ವಯಂ ದೃಢೀಕರಣದೊಡನೆ ಕಳುಹಿಸಬೇಕು.

ಪ್ರವೇಶ ಶುಲ್ಕವನ್ನು ‘ಕನ್ನಡ ಸಂಘರ್ಷ ಸಮಿತಿ’ಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು. (ಶ್ರೀರಾಮ ಕೋ ಆಪರೇಟಿವ್ ಬ್ಯಾಂಕ್, ಬೆಂಗಳೂರು. ಖಾತೆ ಸಂಖ್ಯೆ 200300011051 IFSC CODE: HDFC0CSRCBL (ಐದನೇ ಅಕ್ಷರ ಸೊನ್ನೆ).

ವಿಜೇತರಿಗೆ ಮೂರು ಬಹುಮಾನಗಳನ್ನು ನೀಡಲಾಗುವುದು. ರೂ. ೨೦೦೦/- ೧೫00/-, ೧000/-, ಸಮಿತಿಯು ನೇಮಿಸುವ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಕಥೆಗಳನ್ನು ಯಾವುದೇ ಕಾರಣಕ್ಕೂ ವಾಪಸ್ಸು ಕಳುಹಿಸುವುದಿಲ್ಲ ಮತ್ತು ಅದನ್ನು ಪ್ರತಿಭಟಿಸುವ ಹಕ್ಕು ಸಮಿತಿಗೆ ಇರುತ್ತದೆ ಎಂದು ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಡಾ ಕೋ ವೆಂ ರಾಮಕೃಷ್ಣಗೌಡ ಕೋರಿದ್ದಾರೆ.

Leave a Reply