ರಾಜ್ಯ ಸರ್ಕಾರ LPG Cylinder ಮೇಲೆ ಶೇ. 55ರಷ್ಟು ತೆರಿಗೆ ವಿಧಿಸುತ್ತಿದೆಯೇ?

3 years ago

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಗೃಹಬಳಕೆಯ ಎಲ್.ಪಿ.ಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರ ಶೇ.5ರಷ್ಟು ಮತ್ತು ರಾಜ್ಯ ಸರ್ಕಾರ ಶೇ.55ರಷ್ಟು ತೆರಿಗೆ ವಿಧಿಸುತ್ತಿದೆ ಎಂಬ ಪೋಸ್ಟ್ ವ್ಯಾಪಕವಾಗಿ ಹಂಚಿಕೆಯಾಗಿದೆ. ಈ ಕುರಿತ ಸತ್ಯ ಸಂಗತಿಯನ್ನು ಪರಿಶೀಲಿಸೋಣ.

factly.in ಕೃಪೆ

ಹೇಳಿಕೆ: ಗೃಹ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಮೇಳೆ ರಾಜ್ಯ ಸರ್ಕಾರ ಶೇ. 55ರಷ್ಟು ತೆರಿಗೆ ವಿಧಿಸುತ್ತಿದೆ, ಕೇಂದ್ರ ಸರ್ಕಾರ ಶೇ.5ರಷ್ಟು ತೆರಿಗೆ ವಿಧಿಸುತ್ತಿದೆ.

ಸತ್ಯ: ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಮೇಲೆ ಶೇ. 5ರಷ್ಟು ಜಿ.ಎಸ್.ಟಿ ( CGST-2.5% + SGST-2.5%) ಸ್ಲ್ಯಾಬ್ ನಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಯಂ ಇಚ್ಛೆಯಂತೆ ಎಲ್.ಪಿ.ಜಿ. ಸಿಲಿಂಡರ್ ಗಳ ಮೇಲೆ ಜಿ.ಎಸ್.ಟಿ ಹಾಕುವಂತಿಲ್ಲ. ಎಲ್.ಪಿ.ಜಿ. ಸಿಲಿಂಡರ್ ಗಳ ಮೇಲೆ ರಾಜ್ಯ ಸರ್ಕಾರ ಶೇ.55ರಷ್ಟು ಜಿ.ಎಸ್.ಟಿ ಹೇರಿಕೆ ಮಾಡಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಪೋಸ್ಟ್ ನಲ್ಲಿರುವ ಡೀಲರ್ಸ್ ಕಮೀಷನ್ ಕೂಡ ತಪ್ಪಾಗಿದೆ. ಡೀಲರ್ಸ್ / ಡಿಸ್ಟ್ರಿಬ್ಯೂಟರ್ಸ್ ಕಮೀಷನ್ 14.2 ಕೆಜಿ ಸಿಲಿಂಡರ್ ಗೆ ರೂ. 61.84 ಆಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೆಯಾಗುತ್ತಿರುವ ಪೋಸ್ಟ್ ಸುಳ್ಳು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿರುವ ಪೋಸ್ಟ್ ನಲ್ಲಿ ಗೃಹಬಳಕೆ ಎಲ್.ಪಿ.ಜಿ. ಸಿಲಿಂಡರ್ ಕುರಿತು ಕೆಲವು ಮಾಹಿತಿಗಳಿವೆ. ಅವನ್ನು ಪರಿಶೀಲಿಸೋಣ:

ರಾಜ್ಯ ಸರ್ಕಾರ ಎಲ್.ಪಿ.ಜಿ ಮೇಲೆ ಶೇ.  55ರಷ್ಟು ತೆರಿಗೆ ಏರುತ್ತದೆಯೇ?

factly.in ಕೃಪೆ

ಗೃಹಬಳಕೆಯ ಸಿಲಿಂಡರ್ ಮೇಲೆ ಜಿ.ಎಸ್.ಟಿಯನ್ನು ಹಾಕಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತಾವೇ ನಿರ್ಧರಿಸಿ ಜಿ.ಎಸ್.ಟಿ ಹೇರುವುದಿಲ್ಲ. Central Board of Indirect and Customs (CBIC) ಪ್ರಕಾರ, ಗೃಹ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಗೆ CGST-2.5% + SGST-2.5% ತೆರಿಗೆ ಇದೆ ಎಂದು ಹೇಳುತ್ತದೆ.  

ಉದಾಹರಣೆಗೆ, 14.2 ಕೆಜಿ ಗೃಹಬಳಕೆಯ ಎಲ್.ಪಿ.ಜಿ ಸಿಲಿಂಡರ್ ಬಿಲ್ ನೋಡಿ. ಬಿಲ್ ನಲ್ಲಿ ಸ್ಪಷ್ಟವಾಗಿ ನಮೂದಾಗಿರುವಂತೆ CGST-2.5% + SGST-2.5% ಸೇರಿ ಶೇ.5ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಶೇ. 55ರಷ್ಟು ತೆರಿಗೆ ವಿಧಿಸುತ್ತಿದೆ ಎಂಬುದಕ್ಕೆ ಯಾವುದೇ ಸತ್ಯ ಸಾಕ್ಷ್ಯಾಧಾರಗಳು ಇಲ್ಲ. ಅಂದಹಾಗೆ ಇದು ಸುಮಾರು 2020ರಲ್ಲಿ ಸೃಷ್ಟಿಯಾಗಿರುವ ನಕಲಿ ಪೋಸ್ಟ್ ಆಗಿದೆ.

factly.in ಕೃಪೆ

Leave a Reply