ಚುನಾವಣೆ ಹತ್ತಿರ ಬಂತು ಎಂದರೆ ಮಾತ್ರ ಬಿಜೆಪಿಗೆ ಹಿಂದೂಗಳ ಬಗ್ಗೆ ಎಲ್ಲಿಲ್ಲದ ಪ್ರೇಮ ಉಕ್ಕಿ ಬರುತ್ತದೆ.
ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ. ಅವರಿಗೆ ಕಾನೂನಿನ ಅರಿವಿಲ್ಲ ಎಂಬುದು ಅವರು ಮಾತನಾಡುವ ರೀತಿಯಲ್ಲೇ ತಿಳಿಯುತ್ತದೆ.

ಹಣಗೆರೆ ಶ್ರೀ ಭೂತಾರಾಯ ಚೌಡೇಶ್ವರಿ ದೇವಸ್ಥಾನ (ಸೈಯದ್ ಸಾದಾತ್ ದರ್ಗಾ) ಹಾಗೂ ಬಾಬು ಬುಡನ್ ಗಿರಿಯಲ್ಲಿ ಮಾತ್ರ ಹಿಂದಿನಿಂದಲೂ ಎರಡು ಧರ್ಮದವರಿಗೂ ಅವಕಾಶ ಇದೆ. BJP Karnataka ಸರ್ಕಾರವಿದ್ದಾಗಲೂ ಕೂಡ ಅನ್ಯ ಧರ್ಮದವರನ್ನು ನೇಮಕ ಮಾಡಿದ್ದಾರೆ ಎಂಬುದನ್ನು ಅವರು ಮರೆತಂತಿದೆ.
ಕಳೆದ 4 ವರ್ಷಗಳ ಅಧಿಕಾರಾವಧಿಯಲ್ಲಿ 40% ಕಮಿಷನ್ ಹೊಡೆಯುವುದರಲ್ಲೇ ಕಾಲ ಕಳೆದ ಇವರು ಹಿಂದೂ ದೇವಾಲಯಗಳು ಹಾಗೂ ಅದರ ಅರ್ಚಕರು, ಸಿಬ್ಬಂದಿ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು ಮಾತ್ರ ಶೂನ್ಯ.

ಕಳೆದ 8 ತಿಂಗಳಿನಲ್ಲಿ ನಮ್ಮ Indian National Congress – Karnataka ಸರ್ಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ನೀಡಿರುವ ವಿವಿಧ ಕೊಡುಗೆಗಳಲ್ಲಿ ಶೇಕಡಾ 25% ರಷ್ಟು ಸಹ ಬಿಜೆಪಿಯವರು ನೀಡಿರುವುದಿಲ್ಲ.
2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕದಲ್ಲಿ ಧಾರ್ಮಿಕ ಪರಿಷತ್ಗೆ ಕೆಲವು ತಿದ್ದುಪಡಿ ತಂದಿದ್ದೇವೆ. ವಿಶ್ವಕರ್ಮ ಸಮುದಾಯಕ್ಕೆ ಅವರ ಬೇಡಿಕೆಯ ಅನುಗುಣವಾಗಿ ಎ, ಬಿ, ಸಿ ಗ್ರೇಡ್ ದೇವಸ್ಥಾನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮೊದಲನೆಯದಾಗಿ ಇದು ಪ್ರಮುಖ ತಿದ್ದುಪಡಿಯಾಗಿದೆ. ಇದನ್ನ ಬಿಟ್ರೆ ಯಾವುದೇ ಬದಲಾವಣೆ ಮಾಡಿಲ್ಲ. ಅವೆಲ್ಲವೂ 2003ರ ಕಾಯ್ದೆಯಲ್ಲಿ ಏನು ಇದೆಯೋ ಹಾಗೆ ಇದೆ.
2011ರಲ್ಲೇ ಶ್ರೀ BS Yediyurappa ಹಾಗೂ D V Sadananda Gowda ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೇ, ಹೆಚ್ಚಿನ ಆದಾಯ ಬಂದ ದೇವಸ್ಥಾನಗಳಲ್ಲಿ ಹಣ ತೆಗೆದುಕೊಳ್ಳಲಾಗುತ್ತಿತ್ತು. 10 ಲಕ್ಷದ ಒಳಗಡೆ ಆದಾಯ ಇರುವ ದೇವಸ್ಥಾನಗಳು ಯಾವುದೇ ರೀತಿಯ ಹಣ ಕೊಡುವಂತಿಲ್ಲ. 10 ಲಕ್ಷದಿಂದ 1 ಕೋಟಿ ಆದಾಯ ಇರುವ ದೇವಸ್ಥಾನಗಳು 5% ಹಣ ಕೊಡಬೇಕು. 1 ಕೋಟಿ ಮೇಲೆ ಆದಾಯವಿರುವ ದೇವಸ್ಥಾನಗಳು 10% ಕೊಡಬೇಕು ಎಂಬುದನ್ನು ಮಾಡಿರುವುದೇ ಬಿಜೆಪಿ.
ಧರ್ಮದ ವಿಚಾರಗಳಲ್ಲಿ ಸತ್ಯ ಮರೆಮಾಚಿ ಸುಳ್ಳು ಸುದ್ದಿ ಹಬ್ಬಿಸಿ ಹಿಂದೂಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುವಂತಹ ದ್ವಿಮುಖ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು.
ನಮ್ಮ ಕರ್ನಾಟಕ ಸಾಮರಸ್ಯದ ನಾಡು, ಭಾವೈಕ್ಯತೆ ಬೀಡಾಗಿದ್ದು, ಜನತೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಮನ್ನಣೆ ನೀಡುತ್ತಾರೆಯೇ ಹೊರತು ಬಿಜೆಪಿಯ ಇಂತಹ ಗಿಮಿಕ್’ಗಳಿಗಲ್ಲ ಎಂಬುದನ್ನು ಅದರ ನಾಯಕರು ಆದಷ್ಟು ಬೇಗ ಅರ್ಥ ಮಾಡಿಕೊಂಡರೆ ಒಳಿತು.
– ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಸಚಿವ




