ಬೆಂಗಳೂರು: SSLC ಪರೀಕ್ಷೆ ಬರೆದಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದ ಎಲ್ಲ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದರು.
ಇಂದು S.S.L.C ಫಲಿತಾಂಶ ಪ್ರಕಟವಾಗಲಿದೆ.
ಮಧ್ಯಾಹ್ನ ೩:೩೦ಕ್ಕೆ ಪತ್ರಿಕಾಘೋಷ್ಠಿ ಕರೆದಿರುತ್ತೇವೆ.@nimmasuresh ಅವರ ಶ್ರಮ, ಅವರು ತೆಗೆದುಕೊಂಡಂಥ ದೃಢ ನಿರ್ಧಾರದ ಫಲ ಇದು.
ಎಲ್ಲಾ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಶುಭ ಕೋರುತ್ತೇನೆ.ಕರ್ಮಣ್ಯೇವಾಧಿಕಾರಸ್ತೆ ಮಾಫಲೇಶುಕದಾಚನ
ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ @BSBommai
— B.C Nagesh (@BCNagesh_bjp) August 9, 2021
020-21 ನೇ ಶೈಕ್ಷಣಿಕ ಸಾಲಿನ SSLC ಪರೀಕ್ಷೆ ಫಲಿತಾಂಶ ಘೋಷಿಸಿದ ಅವರು, ಈ ಸಾಲಿನಲ್ಲಿ ಶೇ.99.9ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಪಾಸ್ ಆಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಜುಲೈ 19 ಮತ್ತು 22 ರಂದು ಪರೀಕ್ಷೆ ನಡೆದಿತ್ತು. 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿ ತನ್ನ ಬದಲಿಗೆ ಬೇರೆಯವರ ಮೂಲಕ ಪರೀಕ್ಷೆ ಬರೆಸಿದ್ದರು. ಆ ವಿದ್ಯಾರ್ಥಿಯನ್ನು ಮಾತ್ರ ಫೇಲ್ ಮಾಡಲಾಗಿದೆ ಎಂದು ಹೇಳಿದರು.
ಎಲ್ಲಾ SSLC ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಲ್ಲಿ ಫಲಿತಾಂಶವನ್ನ ಪಡೆಯುತ್ತಾರೆ.
ಇದಲ್ಲದೆ, ಕೆಎಸ್ ಇಇಬಿಯ ಅಧಿಕೃತ ವೆಬ್ಸೈಟ್ https://t.co/0EabBMabrO ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಫಲಿತಾಂಶ ನೋಡಬಹುದಾಗಿದೆ. #SSLC #Karnataka #SSCLResults— B.C Nagesh (@BCNagesh_bjp) August 9, 2021
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. 562 ರಿಂದ 625 ಅಂಕಗಳನ್ನು ಪಡೆದವರಿಗೆ A+ ಗ್ರೇಡ್ ನೀಡಲಾಗಿದೆ. ಬಿ ಗ್ರೇಡ್ನಲ್ಲಿ 2,87,694 ವಿದ್ಯಾರ್ಥಿಗಳು, ಸಿ ಗ್ರೇಡ್ನಲ್ಲಿ 1,13,610 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದರು.
ವಿದ್ಯಾರ್ಥಿಗಳು ತಮ್ಮ ಫಲಿತಾಂಸವನ್ನು https:// sslc.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು.



