ಸಿ.ಟಿ.ರವಿ ಗಡೀಪಾರಿಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

5 years ago

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೇವಲ ಪ್ರಚಾರಕ್ಕಾಗಿ ಹಾಗೂ ಮೋದಿಯ ದುರಾಡಳಿತವನ್ನು ಮರೆಮಾಚಲು ಬಡವರ ಅನ್ನದಾತೆ ಎಂದೇ ಖ್ಯಾತಿ ಪಡೆದಿರುವ ಇಂದಿರಾ ಗಾಂಧಿ ಹೆಸರಿನಲ್ಲಿರುವ ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸಬೇಕು ಎಂಬ ಕೀಳುಮಟ್ಟದ ಮನಸ್ಥಿತಿ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದರು.

ಬಿಜೆಪಿಯ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ ಅಣ್ಣಾಮಲೈ ಬೆಂಬಲಕ್ಕೆ ಧಾವಿಸಿರುವ ಸಿ.ಟಿ.ರವಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರ ನಡೆಯನ್ನು ಖಂಡಿಸಿ ಪ್ರತಿಭಟನೆ ಮಾಡಿ, ಪ್ರತಿಕೃತಿ ದಹಿಸಲಾಯಿತು.

ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ನರೇಂದ್ರ ಮೋದಿ ಅಚ್ಚೇ ದಿನ್ ಆಡಳಿತದಲ್ಲಿ ಜನರು ಜೀವನ ಸಾಗಿಸುವುದೇ ಕಷ್ಟವಾಗಿದೆ ಪ್ರತಿನಿತ್ಯ ಡೀಸೆಲ್ ಪೆಟ್ರೋಲ್ ಎಲ್. ಪಿ.ಜಿ ಹಾಗೂ  ಆಹಾರ ಪದಾರ್ಥಗಳ ಬೆಲೆ  ಏರಿಕೆಯಿಂದ ಜನರು ದೇಶದಲ್ಲಿ ಇಂದು  ನರಳುತ್ತಿದ್ದಾರೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು.

ಇಂತಹ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರನ್ನು ಬದಲಾಯಿಸುವ ಕುತಂತ್ರದ ರಾಜಕೀಯವನ್ನು  ಬಿಜೆಪಿ ನಡೆಸುತ್ತಿದೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನಿರುದ್ಯೋಗಿಯಾಗಿರುವ ಸಿ.ಟಿ.ರವಿ ಕರ್ನಾಟಕದ ಜನರಿಗೆ  ತಮಿಳುನಾಡಿನ ಅಣ್ಣಾಮಲೈ ಹೇಳಿಕೆಯನ್ನು ಬೆಂಬಲಿಸಿ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಕನ್ನಡ ದ್ರೋಹಿಯನ್ನು ಕರ್ನಾಟಕದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಸದಾ ಸಿದ್ಧ ಎಂಬ ಮಾತನ್ನು ಆಡಿದ್ದಾರೆ. ಆದರೆ ಸಿ.ಟಿ.ರವಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಿ.ಟಿ.ರವಿಯವರನ್ನ ಮುಖ್ಯಮಂತ್ರಿಗಳು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸುವ ಹೇಳಿಕೆ ನೀಡುತ್ತಿರುವ ಬಿಜೆಪಿಯ ನಾಯಕರ ಮನಸ್ಥಿತಿಯನ್ನು ಗಮನಿಸಿದರೆ ನಿಜವಾಗಿಯೂ ಅವರು ಬಡವರ ವಿರೋಧಿಗಳು ಎಂಬುದು ಸಾಬೀತಾಗಿದೆ.  ಬಡವರಿಗಾಗಿ ಜೀವತೆತ್ತ ಇಂದಿರಾಜೀ ರವರ ಹೆಸರನ್ನು ಹೇಳುವ ಯೋಗ್ಯತೆ ಬಿಜೆಪಿಯ ಯಾವ ನಾಯಕನಿಗೂ ಇಲ್ಲ. ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಪಕ್ಷದ ನಾಯಕರು ಬಂದಿರುವುದು ದುರದೃಷ್ಟಕರ ಎಂದರು.

Leave a Reply