ಭಾರತದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದ್ದರೂ ಸಹ ಪ್ರಧಾನಿ ಮತ್ತು ಗೃಹ ಸಚಿವ ಎಂಬ ಮಹಾತ್ಮರಿಬ್ಬರಿಗೂ ದೇಶ ಕ್ಕಿಂತ ತಮ್ಮ ಪಕ್ಷದ ಚುನಾವಣೆ ಮುಖ್ಯವಾಗಿದೆ.
ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ತಂದಿತ್ತ ಮಹಿಳಾ ಕುಸ್ತಿಪಟುಗಳು ಇಂದು ದೆಹಲಿಯ ಬೀದಿಯಲ್ಲಿ ಅನಾಥ ಮಕ್ಕಳಂತೆ ಪರಿತಪಿಸುತ್ತಿದ್ದಾರೆ.
ಕುಸ್ತಿ ಫೆಡರೇಶನ್ ಅಧ್ಯಕ್ಷನ ಲೈಂಗಿಕ ಕಿರುಕುಳದ ವಿರುದ್ಧ ಕಳೆದ ಹತ್ತು ದಿನಗಳಿಂದ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಸತ್ಯಾಗ್ರಹ ನಡೆಸುತ್ತಿರುವ ಈ ಹೆಣ್ಣು ಮಕ್ಕಳು ಕಳೆದ ರಾತ್ರಿ ದೆಹಲಿಯಲ್ಲಿ ಬಿದ್ದ ಮಳೆಗೆ ತೊಯ್ದು ಹೋಗಿದ್ದಾರೆ.
ರಾತ್ರಿಯ ಪಾಳಿಯಲ್ಲಿ ಇದ್ದ ಪಾನಮತ್ತ ಪೊಲೀಸರು ಈ ಹೆಣ್ಣು ಮಕ್ಕಳಿಗೆ ಹಾಸಿಗೆ ಹೊದಿಕೆ ನೀಡಲು ಬಂದವರಿಗೆ ಹೆದರಿಸಿ ಕಳಸಿವುದರ ಜೊತೆಗೆ ಹೆಣ್ಣು ಮಕ್ಕಳನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹೆಣ್ಣು ಮಕ್ಕಳ ಸಮಸ್ಯೆ ಆಲಿಸಬೇಕಾದ ಪ್ರಧಾನಿ ಕರ್ನಾಟಕದ ಬೀದಿ ಬೀದಿಗಳಲ್ಲಿ ರೋಡ್ ಷೋ ಮೂಲಕ ಜನರಿಗೆ ದರ್ಶನ ನೀಡುತ್ತಿದ್ದಾನೆ. ಭಕ್ತರಿಗೆ ತಿರುಪತಿ ತಿಮ್ಮಪ್ಪ ನೀಡುವ ದರ್ಶನ ಕ್ಕಿಂತ ಈ ಮಾಹಾತ್ಮನ ದರ್ಶನ ಅತ್ಯಂತ ದುಬಾರಿಯಾಗಿದೆ.
ಕಾಂಗ್ರೇಸ್ ಆಡಳಿತಕ್ಕೆ ಬಂದರೆ ಕರ್ನಾಟಕದಲ್ಲಿ ಹಿಂಸಾಚಾರ.ಕೋಮುಗಲಭೆ ಹೆಚ್ಚಾಗುತ್ತದೆ ಎಂದು ಸಾರ್ವಜನಿಕ ಸಭೆಗಳಲ್ಲಿ ಪುಂಗುತ್ತಿರುವ ಬಿ.ಜೆ.ಪಿ. ನಾಲಾಯಕ್ ನಾಯಕರು ತಮ್ಮದೇ ಪಕ್ಷ ಅಧಿಕಾರದಲ್ಲಿ ಇರುವ ಈಶಾನ್ಯ ಭಾರತದ ಮಣಿಪುರ ರಾಜ್ಯ ಹತ್ತಿ ಉರಿಯುತ್ತಿರುವುದನ್ನು ಮರೆತಿದ್ದಾರೆ.
ದೇಶದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವ ಕರ್ನಾಟಕದ ಚುನಾವಣೆಯಲ್ಲಿ ಓರ್ವ ಗ್ರಾಮ ಪಂಚಾಯತಿ ಸದಸ್ಯನಂತೆ ಓಡಾಡುತ್ತಿದ್ದಾನೆ.
ಈ ದೇಶವನ್ನು ಈ ಸ್ಥಿತಿಯಲ್ಲಿ ನಾವು ಕಾಣದ ಆ ದೇವರು ಅಥವಾ ಅವರ ಅಯೋಧ್ಯೆಯ ಶ್ರೀ ರಾಮನೇ ಕಾಪಾಡಬೇಕು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



