ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 15000 ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ: ಎಸ್.ಕೆ.ನಟರಾಜ್
ಬೆಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಜನಪರ ಆಡಳಿತ ನೀಡಿ, ಜನಮನ್ನಣೆ ಗಳಿಸಿದೆ ಎಂದು ಮಾಜಿ ಮೇಯರ್ ಎಸ್.ಕೆ.ನಟರಾಜ್ ಹೇಳಿದರು.
ಜಯನಗರ ಸಾರಕ್ಕಿಯಲ್ಲಿ ಮಾಜಿ ಮೇಯರ್ ಎಸ್.ಕೆ.ನಟರಾಜ್ ಹುಟ್ಟುಹಬ್ಬವನ್ನು ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಅದ್ದೂರಿಯಾಗಿ ಅಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಆರ್.ಅಶೋಕ್ ಮತ್ತು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಹಕಾರದಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷ ಸಂಘಟನೆ ಬಲಿಷ್ಠವಾಗಿದೆ. ಬೆಂಗಳೂರು ನಗರ ಅಭಿವೃದ್ಧಿಗೆ ನಾನು ಮಹಾಪೌರನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.
ಜಯನಗರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಪ್ರಮುಖರು ಮತ್ತು ಕಾರ್ಯಕರ್ತರು, ಮತದಾರರು ನನ್ನನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಬಿ.ಜೆ.ಪಿ. ಪಕ್ಷ ಗುರುತಿಸಿ ನನಗೆ ಟಿಕೇಟು ನೀಡಿದರೆ ಬಿ.ಜೆ.ಪಿ. ಪಕ್ಷ 15 ಸಾವಿರ ಮತಗಳ ಅಂತರರಿಂದ ಬಿ.ಜೆ.ಪಿ. ಪಕ್ಷ ಗೆಲುವು ಸಾಧಿಸಲಿದೆ ಎಂದರು.
ಶಾಸಕರಾದ ಎಂ.ಕೃಷ್ಣಪ್ಪ, ಮಾಜಿ ಬಿ.ಬಿ.ಎಂ.ಪಿ. ಸದಸ್ಯರಾದ ಲಕ್ಷ್ಮೀ ನಟರಾಜ್, ಎ.ಹೆಚ್.ಬಸವರಾಜ್, ಗೋವಿಂದನಾಯ್ಡು, ಸೋಮಶೇಖರ್, ಚನ್ನಗಿರಿಯಪ್ಪ, ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್, ಬಿ.ಜೆ.ಪಿ. ಮುಖಂಡರಾದ ಚಿರಂಜೀವಿ ವಿನ್ಯಾಸ್, ಯಶವಂತ್ ರೆಡ್ಡಿ, ಸುರೇಶ್, ಎಸ್.ಕೆ.ನಟರಾಜ್ ರವರಿಗೆ ಶುಭಕೋರಿದರು. ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.




