ಸಾಧಕ ಇಂಜಿನಿಯರ್ ಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ

2 years ago

ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಸಮಾಜ ಕಟ್ಟುವ ಕೆಲಸ, ರಾಜ್ಯ ಶ್ರೀಮಂತವಾಗಲು ಇಂಜಿನಿಯರ್ ಗಳ ಕೊಡುಗೆ ಅಪಾರ: ತುಷಾರ್ ಗಿರಿನಾಥ್

ಬೆಂಗಳುರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ  ನೌಕರರ ಭವನ, ಬಸವ ಸಭಾಂಗಣದಲ್ಲಿ  ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಕೆ.ಆರ್.ಸರ್ಕಲ್ನಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯರವರ “ಪುತ್ಥಳಿಗೆ ಮಾರ್ಲಾಪಣೆ” ಹಾಗೂ ನಂತರ ಬಸವ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಇಂಜಿನಿಯರ್ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಡಾ.ಅವಿನಾಶ್ ಮೆನನ್ರಾಜೇಂದ್ರನ್ (ಆಡಳಿತ), ಡಾ.ಹರೀಶ್ಕುಮಾರ್ ಕೆ.ಮತ್ತು  ಉಪ ಆಯುಕ್ತ ಡಾ.ಮಂಜುನಾಥಸ್ವಾಮಿ ಬಿ.ಎಸ್.,  ಪ್ರಧಾನ ಅಭಿಯಂತರಾದ ಬಿ.ಎಸ್. ಪ್ರಹ್ಲಾದ್, ಡಿಸಿಎಂ ತಾಂತ್ರಿಕ ಸಲಹೆಗಾರ ಕೆ.ಟಿ.ನಾಗರಾಜ್,  ಕರ್ನಾಟಕ ರಾಜ್ಯ ಇಂಜಿನಿಯರುಗಳ ಸಂಘದ  ಮಾಜಿ ಅಧ್ಯಕ್ಷ ನಾಗರಾಜು, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ  ಅಧ್ಯಕ್ಷ ಎ.ಅಮೃತ್ ರಾಜ್ ಸರ್.ಎಂ.ವಿ. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ಸರ್.ಎಂ.ವಿಶ್ವೇಶ್ವರಯ್ಯರವರ ಸ್ಮರಣೆಯಲ್ಲಿ ಸಾಧಕ ಇಂಜನಿಯರ್ ಗಳಿಗೆ ಸನ್ಮಾನ ಮಾಡಲಾಗುತ್ತಿದೆ. ಬಿಬಿಎಂಪಿಯಲ್ಲಿ  ಕಾರ್ಯನಿರ್ವಹಿಸುವುದು ಬಹಳ ಕಷ್ಟ, ಕಠಿಣ ಪರಿಸ್ಥಿತಿ ನಿಭಾಯಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಮ್ಮ ಇಂಜನಿಯರ್ ಗಳು ಸಮಾಜ ಕಟ್ಟುವ ಕೆಲಸ ಇಂಜನಿಯರ್ ಗಳು ಮಾಡುತ್ತಿದ್ದಾರೆ ಎಂದರು.

ಸರ್.ಎಂ.ವಿಶ್ವೇಶ್ವರಯ್ಯರವರು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ರಾಜ್ಯವನ್ನು ಶ್ರೀಮಂತಗೊಳಿಸಲು ಮೈಸೂರು ಮಹಾರಾಜರು, ವಿಶ್ವೇಶ್ವರಯ್ಯರವರ ಕೊಡುಗೆ ಅಪಾರ. ಇಂಜನಿಯರ್ ಮತ್ತು ವೈದ್ಯರು, ಪೌರ ಕಾರ್ಮಿಕರ, ವೃತಿಪರ ಕೆಲಸ ಮಾಡುವವರಿಗೆ ಗೌರವ ಕೊಡಬೇಕು ಎಂದರು.

ಖಾಸಗಿ ವಲಯ ಆರ್ಥಿಕವಾಗಿ ಸಂಪಾದನೆ ಮಾಡುತ್ತಾರೆ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಜನ ಸೇವೆ ಮಾಡುತ್ತಿದ್ದಾರೆ. ಇಂಜನಿಯರ್ ಗಳು ಕಣ್ಣಿಗೆ ಕಾಣುವ ಕೆಲಸ ಮಾಡುತ್ತಾರೆ. ಎಲ್ಲ ತಂತ್ರಜ್ಞಾನವನ್ನು ಬಳಸಿ ಅಭಿವೃದ್ದಿಯತ್ತ ಸಾಗುತ್ತಿದ್ದೇವೆ. ಇಂಜಿನಿಯರ್ ಗಳನ್ನು ಅಭಿವೃದ್ದಿ ಸಂಕೇತವಾಗಿ ನೋಡುತ್ತಿದ್ದೇವೆ. ಶಿಕ್ಷಣದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಉನ್ನತ ತಂತ್ರಜ್ಞಾನ ಆಳವಡಿಸಿಕೊಂಡರೆ ಉತ್ತಮ ತಂತ್ರಜ್ಞನಾಗಬಹುದು ಎಂದರು.

ಕೆ.ಟಿ.ನಾಗರಾಜು ಮಾತನಾಡಿ, ಸರ್.ಎಂ.ವಿ. ಹುಟ್ಟುಹಬ್ಬದ ದಿನದಂದು ದೇಶದಲ್ಲಿ ಇಂಜನಿಯರ್ ದಿನಾಚರಣೆ ಅಚರಿಸಲಾಗುತ್ತಿದೆ. ಸರ್.ಎಂ.ವಿ.ಅವರಷ್ಟು ಕೀರ್ತಿಗಳಿಸಿದ ಇನ್ನೊಬ್ಬ ಇಂಜಿನಿಯರ್ ಇಲ್ಲ. ರಾಜಕೀಯ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ಮಹನೀಯರುಗಳು ಭಾರತರತ್ನ ಪಡೆದಿದ್ದಾರೆ. ತಾಂತ್ರಿಕ ಕ್ಷೇತ್ರದಲ್ಲಿ ಭಾರತರತ್ನ ಪಡೆದವರು ಸರ್.ಎಂ.ವಿ ಅವರು ಎಂದರು.

ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಆಡಳಿತ ನಡೆಸಿದರು, ಮಹಾರಾಜರ ಪ್ರೀತಿಗೆ ಪಾತ್ರರಾಗಿದ್ದರು. ಡಾ.ರಾಜ್ ಕುಮಾರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಕನ್ನಡ ನಾಡಿನ ಜನರ ಹೃದಯ ಗೆದ್ದಿದ್ದಾರೆ. ಹಿಂದಿನ ಕಾಲದಲ್ಲಿ ಯಾವುದೇ  ವ್ಯವಸ್ಥೆ, ತಾಂತ್ರಿಕ ಸಲಕರಣೆ ಇಲ್ಲದೇ ಇದ್ದರು ಸರ್.ಎಂ.ವಿ.ರವರ ತಂತ್ರಜ್ಞಾನಕ್ಕೆ ಕೊರತೆ ಇರಲಿಲ್ಲ. ಸುಣ್ಣ, ಇಟ್ಟಿಗೆ, ಮಣ್ಣನ್ನು ಬಳಸಿ ಕೆ.ಆರ್.ಎಸ್.ಡ್ಯಾಂ ಕಟ್ಟಿದ್ದಾರೆ. 90 ವರ್ಷವಾದರು ಇಂದು ಕೊಡ ಉತ್ತಮ ಸ್ಥಿತಿಯಲ್ಲಿದೆ ಎಂದರು.

ಸರ್.ಎಂ.ವಿ.ತಮ್ಮ ಸಂಬಳದ ಮೂರು ಲಕ್ಷ ರೂಪಾಯಿಯನ್ನು ಎಸ್.ಜೆ.ಪಿ. ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಮಾಡಿದರು. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರು. ಭದ್ರಾವತಿ ಕಾರ್ಖಾನೆ ಮತ್ತು ಮೈಸೂರು ಡ್ಯಾಂ ನಿರ್ಮಾಣದ ರೂವಾರಿ ಸರ್.ಎಂ.ವಿ.ರವರ ಕುರಿತು ಮಹಾತ್ಮ ಗಾಂಧಿಜೀರವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಪ್ರಧಾನ ಅಭಿಯಂತರ ಪ್ರಹ್ಲಾದ್ ಮಾತನಾಡಿ, ಪಾಲಿಕೆಯಲ್ಲಿ ಕಂದಾಯ, ಇಂಜನಿಯರ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ನೌಕರರು ಎಲ್ಲರು ಒಟ್ಟಾಗಿ ಕೆಲಸ ಮಾಡಿದಾಗ ಬೆಂಗಳೂರು ಅಭಿವೃದ್ದಿ ವೇಗ ಹೆಚ್ಚುತ್ತದೆ. ಪದವಿ ನಿನಗೋಸ್ಕರ ಅಲ್ಲ, ಜನಸೇವೆಗೆ ಎಂದು ಸರ್.ಎಂ.ವಿ.ರವರು ಹೇಳಿದ್ದರು. ಸರ್.ಎಂ.ವಿ.ಆದರ್ಶ ಸಿದ್ದಾಂತದಲ್ಲಿ ಬಿಬಿಎಂಪಿ ಇಂಜನಿಯರ್ ಗಳು ಕೆಲಸ ಮಾಡಬೇಕು ಎಂದರು.

ಇಂಜಿನಿಯರ್ ಸಂಘದ ಮಾಜಿ ಅಧ್ಯಕ್ಷ ನಾಗಾರಾಜು ಮಾತನಾಡಿ, ಸರ್.ಎಂ.ವಿ.ರವರ ಆದರ್ಶ ಮತ್ತು ತತ್ವಗಳನ್ನು ಎಲ್ಲ ಇಂಜನಿಯರ್ ಗಳು ಆಳವಡಿಸಿಕೊಳ್ಳಬೇಕು. ದಶಕಗಳ ಕಾಲವಾದರು ಸಹ ದೇಶದ ಜನ ಸರ್.ಎಂ.ವಿ.ಯವರನ್ನು ಇಂದು ಸಹ ನೆನಪು ಮಾಡಿಕೊಳ್ಳುತ್ತಾರೆ. ಸರ್ಕಾರ ಒಂದು ರೂಪಾಯಿ ಅನವ್ಯಶಕವಾಗಿ ಖರ್ಚು ಮಾಡುತ್ತಿರಲಿಲ್ಲ, ಪ್ರವಾಸದಲ್ಲಿ ಊಟ, ಉಳಿದುಕೊಳ್ಳುವ ವೆಚ್ಚವನ್ನು ಸ್ವಂತ ಭರಿಸಿ, ಸರ್ಕಾರದ ಹಣವನ್ನು ಉಳಿಸಿದರು ಎಂದರು.

ವಾರದ ಮನೆಯ ಊಟ, ಬೀದಿ ದೀಪದ ಕೆಳಗಿ ಓದಿ, ದೇಶ ಸೇವೆ, ಈಶ ಸೇವೆ ಎಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಯನ್ನು ಸರ್.ಎಂ.ವಿ. ಮಾಡಿದ್ದಾರೆ. ನಿಸ್ವಾರ್ಥವಾಗಿ ಯಾವುದೇ ಕಾರಣಕ್ಕೂ ರಾಜಿಯಾಗದೇ ತಮ್ಮ ನಿಲುವಿಗೆ ಬದ್ದರಾಗಿ ಕೆಲಸ ಮಾಡಿ ದೇಶ ಕಂಡ ಸರ್ವ ಶೇಷ್ಠ ಇಂಜನಿಯರ್ ಎಂಬ ಕೀರ್ತಿಗೆ ಸರ್.ಎಂ.ವಿ. ಪಾತ್ರರಾದರು ಎಂದರು.

ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ನಾಗರಾಜು, ಬಸವರಾಜ್ ಆರ್. ಕಬಾಡೆ, ಸುಗುಣ, ರಾಕೇಶ್ ಕುಮಾರ್ ಹೆಚ್.ಎಸ್.ಮಹದೇಶ್, ರೂಪೇಶ್, ಮುನಿರೆಡ್ಡಿ, ಎಲ್ ವೆಂಕಟೇಶ್, ರಾಮಚಂದ್ರಪ್ಪ ಹೆಚ್.ಎಸ್., ರಾಜಣ್ಣ, ಬಿ. ಶರತ್, ಬಿ.ಎನ್.ಪ್ರದೀಪ್, ಆಶಾ, ಚಂದ್ರಶೇಖರ್ ನಾಯಕ್ ಅವರಿಗೆ  ಪ್ರದಾನ ಮಾಡಲಾಯಿತು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಎಸ್.ಜಿ.ಸುರೇಶ್, ಕೆ.ಜಿ.ರವಿ, ಡಿ.ರಾಮಚಂದ್ರ, ಡಾ.ಶೋಭ, ರೇಣುಕಾಂಬ, ಮಂಜೇಗೌಡ, ಬಿ.ರುದ್ರೇಶ್, ಮಂಜುನಾಥ್ ಎನ್,ಸಂತೋಷ್ ಕುಮಾರ್ ನಾಯ್, ಹೆಚ್.ಬಿ.ಹರೀಶ್, ವಿ.ಉಮೇಶ್, ಸಂತೋಷ್, ನರಸಿಂಹ ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಹಾಜರಿದ್ದರು.

Leave a Reply