ಬೆಂಗಳೂರು: ನಿಗದಿತ ಆದಾಯ ಮೂಲಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಫಾರ್ಮ್ ಹೌಸ್ ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ದಾಳಿ ವೇಳೆ ಸರ್ಕಾರಿ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಚಿನ್ನಾಭರಣ ಹಾಗೂ ತಮ್ಮ ಹಾಗೂ ತಮ್ಮ ಸಂಬಂಧಿಕರ ಹೆಸರಿನಲ್ಲಿ ಸ್ಥಿರಾಸ್ತಿ ಮಾಡಿರುವ ಕುರಿತಂತೆ ದಾಖಲೆ ಪತ್ರಗಳು ಲಭಿಸಿದ್ದು ಅವುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಮುಖವಾಗಿ ಈ ಬಾರಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಹಿರಿಯ ಅಧಿಕಾರಿಗಳು ಖೆಡ್ಡಾಕ್ಕೆ ಬಿದ್ದಿದ್ದಾರೆ. ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಬೀದರ್, ಬೆಳಗಾವಿ, ಚಿಕ್ಕಮಗಳೂರು, ತುಮಕೂರು, ಧಾರವಾಡ, ವಿಜಯಪುರ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳ 40ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ.
ಕಲಬುರ್ಗಿಯಲ್ಲಿ ಎರಡು ಕಡೆ ಇಬ್ಬರು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರ್ ಮಲ್ಲಿಕಾರ್ಜುನ ಅಲಿಪುರ ಅವರ ಬೆಂಗಳೂರಿನ ಮನೆ ಹಾಗೂ ಕಲಬುರಗಿಯಲ್ಲಿರುವ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆದಿದೆ.
ಇನ್ನು ಎರಡು ದಿನದಲ್ಲಿ ನಿವೃತ್ತಿಯಾಗುತ್ತಿದ್ದ ಇವರಿಗೆ ಇಂದು ಅವರ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ, ಲೋಕಾಯುಕ್ತ ದಾಳಿ ಅವರನ್ನು ದಂಗುಬಡಿಸಿದೆ. ಮನೆಯಲ್ಲಿದ್ದ ದಾಖಲೆಗಳು, ಬೆಲೆಬಾಳುವ ವಸ್ತುಗಳನ್ನು ಪತ್ತೆ ಹಚ್ಚಿ ಅವುಗಳ ಮೌಲ್ಯಗಳನ್ನು ಅಂದಾಜು ಮಾಡಲಾಗುತ್ತಿದೆ.
ಇನ್ನು ಸಣ್ಣೂರು ಗ್ರಾಮದ ಪಿಡಿಓ ರಾಮಚಂದ್ರ ಅವರ ಸೇಡಂ ರಸ್ತೆಯಲ್ಲಿರುವ ಮಾನಸ ರೆಸಿಡೆನ್ಸಿ ಹಾಗೂ ವಿಜಯಪುರದ ಬೊಮ್ಮನಹಳ್ಳಿಯಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಡೆಸಲಾಗಿದೆ. ಹಲವು ಕಡೆ ಕೃಷಿ ಜಮೀನು ಮನೆ ಸೇರಿದಂತೆ ಹಲವೆಡೆ ಆಸ್ತಿ ಸಂಪಾದನೆ ಮಾಡಿರುವುದು ಗೊತ್ತಾಗಿದೆ. ಜಿಲ್ಲಾ ಲೋಕಾಯುಕ್ತ ಎಸ್.ಪಿ. ಉಮೇಶ್, ಡಿವೈಎಸ್ಪಿ. ಗೀತಾ ಬೇನಾಳ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಸಾವಾಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ. ಪ್ರದೀಪ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಭದ್ರಾಪುರದಲ್ಲಿರುವ ಫಾರ್ಮ್ ಹೌಸ್, ಹೊಸನಗರದಲ್ಲಿರುವ ಮನೆ ಸೇರಿದಂತೆ ಹಲವೆಡೆ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಕೃಷಿ ಜಮೀನು, ರಾಜ್ಯದ ಹಲವೆಡೆ ನಿವೇಶನ ಸೇರಿದಂತೆ ಹಲವು ಕಡೆ ವಾಣಿಜ್ಯ ವ್ಯವಹಾರಗಳನ್ನು ನಡೆಸಲಾಗುತ್ತಿರುವುದು ಕೂಡ ಗೊತ್ತಾಗಿದೆ.
ಶಿಕಾರಿಪುರದಲ್ಲಿರುವ ಅವರ ಮನೆ ಹಾಗೂ ಕಚೇರಿಗಳಲ್ಲಿ ಲೋಕಾ ಅಧಿಕಾರಿಗಳು ಇಂಚಿಂಚೂ ಜಾಲಾಡಿದ್ದಾರೆ. ಅಕ್ರಮ ಸಂಪತ್ತು ಪತ್ತೆಮಾಡಿದ್ದಾರೆ. ಚಿಕ್ಕಮಗಳೂರು ನಗರ ಸಭೆಯ ಲೆಕ್ಕಾಧಿಕಾರಿ ಲತಾಮಣಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ನಗದು ಹಣ, ಚಿನ್ನಾಭರಣ ಸೇರಿದಂತೆ ಹಲವು ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಗದಗ ನಗರ ಠಾಣೆಯ ಇನ್ಸ್ಪೆಕ್ಟರ್ ಧೃವರಾಜ್ ಅವರ ಗದಗದ ಶಿವಾನಂದ ನಗರದಲ್ಲಿರುವ ಮನೆಗೆ ಲೋಕಾಯುಕ್ತ ಪೊಲೀಸರು ಬರುತ್ತಿದ್ದಂತೆಯೇ ಮನೆಯವರು, ಶಾಕ್ ಆಗಿದ್ದಾರೆ. ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇವರಿಗೆ ಬಾಗಲಕೋಟೆ ಹಾಗೂ ಜಮಖಂಡಿಯಲ್ಲಿ ಮನೆಯಿದ್ದು, ಅಪಾರ ಸಂಪತ್ತು ಸಂಪಾದಿಸಿದ್ದಾರೆಂಬ ದೂರುಗಳು ಕೇಳಿಬಂದಿವೆ. ಪೊಲೀಸ್ ಜೀಪ್ ಅನ್ನು ಕೂಡ ತಪಾಸಣೆ ಮಾಡಲಾಗಿದ್ದು, ಡೈರಿ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿ ನಗದು ಹಣ ಸೇರಿದಂತೆ ಹಲವು ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಹೊರವಲಯದ ಆನೇಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮರ್ನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಇನ್ನು ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಪ್ರಕಾಶ್ ಅವರ ಗೋವಿಂದರಾಜ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಇವರು ಹಲವು ನಿವೇಶನಗಳು ಹಾಗೂ ವಾಣಿಜ್ಯ ಕೇಂದ್ರಗಳನ್ನು ಹೊಂದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಧಾರವಾಡದಲ್ಲಿ ಮಲಪ್ರಭಾ ಯೋಜನಾ ಪ್ರಾಧಿಕಾರದ ಇಂಜಿನಿಯರ್ ಅಶೋಕ್ ವಾಲ್ಟಂದ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾ ದಾಳಿ ನಡೆದಿದ್ದು, ಇವರ ಬಳಿಯೂ ಕೃಷಿ ಜಮೀನು, ನಿವೇಶನಗಳು ಹಾಗೂ ಅಪಾರ ಸಂಪತ್ತು ಪತ್ತೆಯಾಗಿದೆ.
ಯಾವೆಲ್ಲ ಅಧಿಕಾರಿಗಳ ಮೇಲೆ ದಾಳಿ?:
ಪ್ರಕಾಶ್, ಬಿಬಿಎಂಪಿ ಕಾರ್ಯ ನಿರ್ವಾಹಕ ಇಂಜಿನಿಯರ್, ಬೆಂಗಳೂರು
ಡಾ. ಎಸ್. ಪ್ರದೀಪ್, ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್, ಸಾವಯವ ಕೃಷಿ ವಿಭಾಗ, ಶಿವಮೊಗ್ಗ
ನಗದು,ಚಿನ್ನದ ಮತ್ತು ಬೆಳ್ಳಿಯ ಆಭರಣಗಳು
ಬೆಲೆ ಬಾಳುವ ವಾಚ್ಗಳು,ಆಸ್ತಿ ದಾಖಲಾತಿಗಳು
ಹಣಕಾಸು ದಾಖಲೆಗಳು
ಲತಾ ಮಣಿ, ಲೆಕ್ಕಾಧಿಕಾರಿ, ಪಟ್ಟಣ ಪುರಸಭೆ, ಚಿಕ್ಕಮಗಳೂರು
ಚಿನ್ನಾಭರಣ,ನಗದು,ಬೆಳ್ಳಿಯ ವಸ್ತುಗಳು, ಆಸ್ತಿ ದಾಖಲೆ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳು
ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ ಪಟ್ಟಣ ಪುರಸಭೆ, ಆನೇಕಲ್
ಚಿನ್ನಾಭರಣ,ನಗದು,ಬೆಳ್ಳಿಯ ವಸ್ತುಗಳು, ಆಸ್ತಿ ದಾಖಲೆ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳು
ಧೃವರಾಜ್, ಪಟ್ಟಣ ಪೊಲೀಸ್ ನಿರೀಕ್ಷಕರು, ಗದಗ
ಚಿನ್ನಾಭರಣ,ನಗದು,ಬೆಳ್ಳಿಯ ವಸ್ತುಗಳು, ಆಸ್ತಿ ದಾಖಲೆ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳು
ಅಶೋಕ್ ವಲ್ಸಂದ್, ಇಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್, ಧಾರವಾಡ
ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ (ನೆಕ್ಲೆಸ್, ಪಾಟ್ಲಿ, ಬಿಲ್ವರ್ ಇತ್ಯಾದಿ)
2 ಕೆಜಿ ಬೆಳ್ಳಿ ಪಾತ್ರೆಗಳು, ಆರತಿ ತಟ್ಟೆ, ದೀಪಗಳು
ಅಕ್ರಮ ಆಸ್ತಿಯ ದಾಖಲೆಗಳು
ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆ
ಡಿ.ಬಿ.ಪಾಟೀಲ,ಸಿಪಿಐ.ಗದಗ
ಮೂರು ಲಕ್ಷಕ್ಕೂ ಹೆಚ್ಚು ನಗದು
ಚಿಲ್ಲರೆ ಹಣ, ಬೆಳ್ಳಿ ಕಾಯಿನ್, ಚಿನ್ನಾಭರಣ, ಆಸ್ತಿ ದಾಖಲೆ ಪತ್ರಗಳು.
ಮಲ್ಲಿಕಾರ್ಜುನ ಅಲಿಪುರ, ಮಾಜಿ ಇಂಜಿನಿಯರ್, ಆರ್ಡಿಪಿಆರ್, ಕಲಬುರಗಿ
ರಾಮಚಂದ್ರ, ಪಿಡಿಒ, ಕಲಬುರಗಿ




