1924ರಲ್ಲಿ ಕಾಂಗ್ರೆಸ್ ಪಕ್ಷ 39ನೇ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಿತು, ಪ್ರಥಮ ಬಾರಿಗೆ ಮಹಾತ್ಮ ಗಾಂಧೀಜಿ ಅವರು ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿರವರು ಅಧ್ಯಕ್ಷರಾಗಿದ್ದು ಒಂದೇ ಬಾರಿ, ಅದು ನಮ್ಮ ಬೆಳಗಾವಿಯಲ್ಲಿ ಮಾತ್ರ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಈ ಅಧಿವೇಶನದ ಸಂಪೂರ್ಣವಾದ ಜವಾಬ್ದಾರಿಯನ್ನು ಕರ್ನಾಟಕದ ಸಿಂಹ ಎಂದು ಹೆಸರಾಗಿದ್ದ ಗಂಗಾಧರ್ ದೇಶಪಾಂಡೆ ರವರು ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಈ ಅಧಿವೇಶನ ಸಂಘಟನೆಯಾಗಿತ್ತು.
1924ರ ಡಿಸೆಂಬರ್ 26 ಮತ್ತು 27ರಂದು ಈ ಅಧಿವೇಶನ ನಡೆಯಿತು ಈ ಅಧಿವೇಶನಕ್ಕಾಗಿ ಬೃಹತ್ ಆದ ಚಪ್ಪರವನ್ನು ಹಾಕಲಾಗಿತ್ತು, ಸಾವಿರಾರು ಪ್ರತಿನಿಧಿಗಳು ದೇಶದ ವಿವಿಧ ಮೂಲೆಗಳಿಂದ ಮತ್ತು ವಿಶ್ವದ ಅನೇಕ ಭಾಗಗಳಿಂದ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.
ಈ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿರವರ ಜೊತೆಯಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಬಾಯ್ ಪಟೇಲ್, ಮೌಲಾನ ಅಬ್ದುಲ್ ಕಲಾಂ ಅಜಾದ್, ಸರೋಜಿನಿ ನಾಯ್ಡು, ಚಕ್ರವರ್ತಿ ರಾಜಗೋಪಾಲಚಾರಿ, ಲೋಕ ನಾಯಕ ಜಯಪ್ರಕಾಶ್ ನಾರಾಯಣ್, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಮುಂತಾದವರು ಸಹ ಭಾಗವಹಿಸಿದ್ದರು.
ಈ ಸಮಾವೇಶಕ್ಕಾಗಿ ಒಂದು ಬಾವಿಯನ್ನು ನಿರ್ಮಿಸಲಾಗಿತ್ತು. ಈ ಬಾವಿಯನ್ನು ಕಾಂಗ್ರೆಸ್ ಬಾವಿ ಎಂದು ಕರೆಯುತ್ತಾರೆ. ಸಮಾವೇಶಕ್ಕೆ ಬಂದ ಎಲ್ಲರಿಗೂ ನೀರಿನ ವ್ಯವಸ್ಥೆಯನ್ನು ಇದರ ಮೂಲಕ ಮಾಡಲಾಗಿತ್ತು. ಬಾವಿಯನ್ನು ತೋಡುವ ಸಂದರ್ಭದಲ್ಲಿ ಒಬ್ಬ ಹುಡುಗ ಇದರಲ್ಲಿ ಬಿದ್ದು ಸಾವನ್ನಪ್ಪಿದ್ದ.
ಸಮಾವೇಶದ ಪ್ರಮುಖ ಉದ್ದೇಶ ಸ್ವರಾಜ್ಯ, ಅಸ್ಪೃಶ್ಯತೆ ನಿವಾರಣೆ, ಜಾತೀಯ ಅಸಮಾನತೆಯ ವಿರುದ್ಧ ಆಂದೋಲನ, ಪ್ರಮುಖವಾದಂಥ ವಿಚಾರಗಳಲ್ಲಿ ಸಾಕಷ್ಟು ಚರ್ಚೆಯಾಯಿತು.
ಸಮಾವೇಶಕ್ಕೆ ಬಂದತಹ ಪ್ರತಿನಿಧಿಗಳಿಗೆ ಮೊದಲು ಹತ್ತು ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಿದ್ದರು. ಗಾಂಧೀಜಿ ರವರ ಆಕ್ಷೇಪಣೆಯ ಮೇರೆಗೆ ಅದನ್ನು ಒಂದು ರೂಪಾಯಿಗೆ ಇಳಿಸಿದರು.
ಈ ಸಮಾವೇಶಕ್ಕೆ ಒಟ್ಟು ಎರಡು ಲಕ್ಷದ 20 ಸಾವಿರದ 57 ರೂಪಾಯಿಗಳು ಖರ್ಚಾಯಿತು. ಸಮಾವೇಶಕ್ಕಾಗಿ ಒಟ್ಟು ಸಂಗ್ರಹವಾದ ಹಣ ಎರಡು ಲಕ್ಷದ 20 ಸಾವಿರದ 829 ರೂಪಾಯಿಗಳು, ಸಮಾವೇಶವಾದ ನಂತರ 749 ಐದು ಆಣೆ ಉಳಿಕೆಯಾಗಿತ್ತು.
ಅತಿಥಿಗಳ ವ್ಯವಸ್ಥೆ,ಸಂಘಟನೆಗಾಗಿ, ರೈಲು, ಟೆಲಿಗ್ರಾಂ ಇವುಗಳಿಗಾಗಿ 66,749 ಐದು ಆಣೆ ಖರ್ಚಾಗಿತು, ನೀರಿನ ವ್ಯವಸ್ಥೆಗಾಗಿ 19,545 ಖರ್ಚಾಯಿತು ಪೆಂಡಾಲ್ ಹಾಕಲು 23, 480 ಪೈಸೆ 6 ಖರ್ಚಾಗಿತ್ತು ಬಾವಿ ತೋಡಿಸಲು ನಾಲ್ಕು ಸಾವಿರದ 320 ರೂಪಾಯಿಗಳು ಖರ್ಚಾಗಿತ್ತು, ಊಟಕ್ಕಾಗಿ 28 ಸಾವಿರದ 317 ರೂಪಾಯಿ 7 ಆಣೆ , ಖಾದಿ ಉತ್ಪನ್ನಗಳ ಮಾರಾಟದಿಂದ 22 ಸಾವಿರ 256 ರೂಪಾಯಿಗಳು ಸಂಗ್ರಹವಾಗಿತ್ತು.
ಈ ಸಮಾವೇಶದಲ್ಲಿ ಪವಿತ್ರ ಖಾದಿ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಇದನ್ನು ವಿಷ್ಣು ಶಾಸ್ತ್ರಿ ಮತ್ತು ಇತರರು ಸಂಘಟಿಸಿದ್ದರು. ಇದರ ಉದ್ದೇಶ ಖಾದಿ ಉತ್ಪಾದನೆ ಮತ್ತು ಮಾರಾಟ ಹಾಗೂ ಮಹತ್ವವನ್ನು ಸಾರುವ ಉದ್ದೇಶವಾಗಿತ್ತು. ಇದರ ಜೊತೆಯಲ್ಲಿ ಸ್ಥಳೀಯರು ಕಿತ್ತೂರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಾಟಕವನ್ನು ಪ್ರದರ್ಶಿಸಿ ಸ್ವಾತಂತ್ರ ಚಳುವಳಿಯ ಹೋರಾಟಗಾರರಿಗೆ ಸ್ಪೂರ್ತಿಯನ್ನು ತುಂಬಿದರು.
ಕರ್ನಾಟಕದ ಏಕೀಕರಣದ ಪ್ರಥಮ ಸಭೆಯು ಸಹ ಇದೆ ವೇದಿಕೆಯಲ್ಲಿ ನಡೆಯಿತು. ಕಂಬಳಿಸಿದ್ದಪ್ಪನವರು ಇದರ ನೇತೃತ್ವವನ್ನು ವಹಿಸಿದ್ದರು.
ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆ ಸಮಾವೇಶದಲ್ಲಿ ಹಾಡಲಾಯಿತು.
ಕಾಂಗ್ರೆಸ್ ಬೆಳಗಾವಿ ಅಧಿವೇಶನ ಕಾಂಗ್ರೆಸ್ ಪಕ್ಷದಲ್ಲಿನ ಅನೇಕ ಸಮಸ್ಯೆಗಳನ್ನ ಪರಿಹರಿಸಿ ಒಗ್ಗಟ್ಟನ್ನು ಮೂಡಿಸಲು ಪ್ರಮುಖವಾದಂಥಹ ಪಾತ್ರವನ್ನು ನಿರ್ವಹಿಸಿರುತ್ತದೆ.
ಕರ್ನಾಟಕ ಸರ್ಕಾರ ಮತ್ತು ಕೆಪಿಸಿಸಿ ವತಿಯಿಂದ ಮಹಾತ್ಮಾ ಗಾಂಧೀಜಿರವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ನೂರು ವರ್ಷದ ನೆನಪಿಗಾಗಿ ಕಾರ್ಯಕ್ರಮವನ್ನು ಇದೇ ಡಿಸೆಂಬರ್ 26 ಮತ್ತು 27ರಂದು ಅದ್ದೂರಿಯಾಗಿ ಸಂಘಟಿಸಿರುತ್ತದೆ.
ಮಹಾತ್ಮ ಗಾಂಧೀಜಿರವರು ಅಧಿವೇಶನದ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಬೆಳಗಾವಿಯಲ್ಲಿ ಉಳಿದುಕೊಂಡಿದ್ದರು. ಈ ಮೊದಲು ಮಹಾತ್ಮ ಗಾಂಧೀಜಿರವರು 1916ರಲ್ಲಿ ಬಾಲಗಂಗಾಧರನಾಥ ತಿಲಕರ ಜೊತೆಯಲ್ಲಿ ಬೆಳಗಾವಿಗೆ ಬಂದಿದ್ದರು ಹಾಗೂ 1920ರಲ್ಲಿ ಬೆಳಗಾವಿಯಲ್ಲಿ ಕೆಲವು ದಿನಗಳ ಕಾಲ ಕಾರ್ಯಕ್ರಮದಲ್ಲಿ ಇದ್ದರು.
1924ರ ಮಹಾತ್ಮ ಗಾಂಧೀಜಿರವರು ಅಧಿವೇಶನದಲ್ಲಿ ಉಳಿದುಕೊಳ್ಳಲು 350 ರೂಪಾಯಿಗಳ ವೆಚ್ಚದಲ್ಲಿ ಕುಟೀರವನ್ನು ನಿರ್ಮಿಸಲಾಗಿತ್ತು. ಮಹಾತ್ಮ ಗಾಂಧೀಜಿರವರು ಇಷ್ಟೊಂದು ಮೊತ್ತವನ್ನ ಖರ್ಚು ಮಾಡಿರುವುದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
– ಕೆ ಎಸ್ ನಾಗರಾಜ್, ಬೆಂಗಳೂರು




