ಉರಿಗೌಡ ಮತ್ತು ನಂಜೇಗೌಡರ ಕುರಿತು ನೈಜ ಮಾಹಿತಿ
ಮಿತ್ರರೇ,
ಟಿಪ್ಪುವನ್ನು ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಒಕ್ಕಲಿಗ ಯೋಧರು ಕೊಂದರು ಎಂದು ಸುಳ್ಳಿನ ಹರಿಶ್ಚಂದ್ರರು ಇಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಆ ಇಬ್ಬರು ಒಕ್ಕಲಿಗ ಯೋಧರ ನೈಜ ಕಥನವನ್ನು ಮೈಸೂರು ವಿಶ್ವ ವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ ಎನ್.ಎಸ್,ರಂಗರಾಜು ಅವರು ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯೊಂದಿಗೆ ಮಾತನಾಡುತ್ತಾ ಹಂಚಿಕೊಂಡಿದ್ದಾರೆ.
ವಾಸ್ತವವಾಗಿ ಉರಿಗೌಡ ಮತ್ತು ನಂಜೇಗೌಡ ಇಬ್ಬರೂ ಹೈದರಾಲಿಯ ನೆಚ್ಚಿನ ಯೋಧರಾಗಿದ್ದರು. ಒಮ್ಮೆ ಹೈದರಾಲಿಯು ಶ್ರೀರಂಗಪಟ್ಟಣದಿಂದ ಹೊರಗೆ ಇದ್ದಾಗ, ಮರಾಠರು ದಾಳಿ ಮಾಡಿದಾಗ ಹೈದರಾಲಿಯ ಪತ್ನಿ ( ಟಿಪ್ಪುವಿನ ತಾಯಿ) ಹಾಗೂ ಟಿಪ್ಪು ಸುಲ್ತಾನ್ ಇಬ್ಬರನ್ನೂ ರಕ್ಷಿಸಿದ ರಕ್ಷಿಸಿದ ಮಹಾನ್ ಮಾನತಾವಾದಿಗಳೇ ಹೊರತು ಟಿಪ್ಪುವನ್ನು ಖಡ್ಗದಿಂದ ಕೊಂದ ಯೋದರಲ್ಲ.
ಟಿಪ್ಪುಸುಲ್ತಾನ್ ಮತ್ತು ಹೈದರಾಲಿಯ ಇತಿಹಾಸದ ಅಧ್ಯಯನದಲ್ಲಿ ಜಗತ್ ಪ್ರಸಿದ್ಧ ಇತಿಹಾಸ ತಜ್ಞೆಯಾದ ಕೆಟ್ ಬ್ರಿಟ್ಟಲ್ ಬ್ಯಾಂಕ್ (Kate.Brittlebank) ಆಸ್ಟ್ರೇಲಿಯಾದ ಮೊನಸ್ ವಿಶ್ವ ವಿದ್ಯಾನಿಲಯದಲ್ಲಿ ಏಷ್ಯಾ ಇತಿಹಾಸದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಟಿಪ್ಪುವಿನ ಇತಿಹಾಸ ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲ ತಜ್ಞೆಯಾಗಿದ್ದಾರೆ
ಟಿಪ್ಪುವಿನ ಸಾವಿನ ಕೊನೆಯ ಕ್ಷಣವನ್ನು ಸಹ ಇವರು ಬ್ರಿಟೀಷ್ ಸೈನ್ಯಾಧಿಕಾರಿಗಳು 1799 ರ ಮೇ 5 ರಂದು ನಡೆದ ರಣರಂಗದಲ್ಲಿ ಟಿಪ್ಪುವಿನ ಸಾವು ಹೇಗಾಯಿತು ಎಂದು ಈಸ್ಟ್ ಇಂಡಿಯ ಕಂಪನಿಗೆ ನೀಡಿದ ವರದಿಯನ್ನು ಆಧರಿಸಿ ದಾಖಲಿಸಿದ್ದಾರೆ. ಟಿಪ್ಪುವಿಗೆ ಪಿರಂಗಿ ದಾಳಿಯಲ್ಲಿ ಗಾಯವಾಗಿ ಅಸ್ವಸ್ಥನಾದ ಸಂದರ್ಭದಲ್ಲಿ ಟಿಪ್ಪುವಿನ ಸೊಂಟದಲ್ಲಿದ್ದ ಆಭರಣಯುಕ್ತವಾದ ಬೆಲ್ಟ್ ( ಪಟ್ಟಿಯನ್ನು) ಅನ್ನು ಬ್ರಿಟೀಷ್ ಯೋಧನೊಬ್ಬ ಕಳಚಿಕೊಳ್ಳಲು ಪ್ರಯತ್ನಿಸಿದಾಗ ಟಿಪ್ಪುಸುಲ್ತಾನ್ ಆ ಯೋಧನಿಗೆ ತನ್ನ ಕತ್ತಿಯಿಂದ ಬಲವಾದ ಪೆಟ್ಟು ನೀಡುತ್ತಾನೆ. ಇದರಿಂದ ರೊಚ್ಚಿಗೆದ್ದ ಮತ್ತೊಬ್ಬ ಬ್ರಿಟೀಷ್ ಯೋಧ ಟಿಪ್ಪುವಿನ ಮೇಲೆ ಹತ್ತಿರದಿಂದ ಎರಡು ಬಾರಿ ಗುಂಡು ಹಾರಿಸುತ್ತಾನೆ. ತಕ್ಷಣ ಟಿಪ್ಪು ಸುಲ್ತಾನ್ ಅಸುನೀಗುತ್ತಾನೆ. ವಾಸ್ತವವಾಗಿ ಆ ಯೋಧರಿಗೆ ಮಡಿದ ವ್ಯಕ್ತಿ ಟಿಪ್ಪು ಸುಲ್ತಾನ್ ಎಂದು ಗೊತ್ತಿರುವುದಿಲ್ಲ.
ನಂತರ ಬ್ರಿಟೀಷ್ ಅಧಿಕಾರಿಗಳು ಟಿಪ್ಪು ಸೇನೆಯ ಇತರೆ ಸೈನಿಕರನ್ನು ಸ್ಥಳಕ್ಕೆ ಕರೆತಂದು ಟಿಪ್ಪುವಿನ ಮೃತದೇಹವನ್ನು ತೋರಿಸಿ ಅವರಿಂದ ಟಿಪ್ಪು ಸಾವನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಂದಿನ ವರದಿಗಳ ಪ್ರಕಾರ ಟಿಪ್ಪುವಿನ ಎಡಬುಜದಲ್ಲಿ ಎರಡು ಬಂದೂಕಿನ ಗುಂಡಿನ ಗಾಯಗಳ ಗುರುತು ಮತ್ತು ಪಿರಂಗಿಯಿಂದ ಸಿಡಿದ ಗುಂಡಿನ ಆಳವಾದ ಗಾಯವನ್ನು ಹೊರತು ಪಡಿಸಿದರೆ ಬೇರೆ ಯಾವ ಕತ್ತಿಯ ಗಾಯವೂ ಇರಲಿಲ್ಲ.
ಇನ್ನು ಉರಿಗೌಡ ಮತ್ತು ನಂಜೇಗೌಡರ ಕತ್ತಿಯ ಗುರುತು ಎಲ್ಲಿ ಹುಡುಕೋಣ? ಆ ವೇಳೆಗೆ ವೃದ್ಧರಾಗಿ ಸಾವನ್ನಪ್ಪಿದ್ದ ಅಥವಾ ನಿವೃತ್ತಿ ಹೊಂದಿದ್ದ ಈ ಅನಾಮಿಕ ಒಕ್ಕಲಿಗ ಯೋಧರು ಟಿಪ್ಪುವಿನ ಪ್ರಾಣ ರಕ್ಷಣೆ ಮಾಡಿದ ಕಾರಣಕ್ಕಾಗಿ ಬೆಳಕಿಗೆ ಬಂದರೇ ಹೊರತು ಟಿಪ್ಪುವನ್ನು ಕೊಂದಿದ್ದಕ್ಕಾಗಿ ಅಲ್ಲ.
1790 ರ ದಶಕದಲ್ಲಿ ಕೊಡಗಿನ ಕೊಡವರ ಜನಸಂಖ್ಯೆ ಎಂಟು ಸಾವಿರ ದಾಟಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಕೋಡಂಗಿ ಕಾರ್ಯಪ್ಪ ಎಂಬ ಅವಿವೇಕಿ ಎಂಬತ್ತು ಸಾವಿರ ಕೊಡವರನ್ನು ಟಿಪ್ಪು ಸುಲ್ತಾನ್ ಕೊಂದು ಹಾಕಿದ ಎಂದು ಸುಳ್ಳುಗಳ ಇತಿಹಾಸ ಸೃಷ್ಟಿಸುತ್ತಿದ್ದಾನೆ. ಇಂತಹ ಅನೇಕ ಕೋಡಂಗಿಗಳಿಗೆ ಸಂಘಪರಿವಾರದ ಬೂಟು ನೆಕ್ಕಿದರೆ ಮಾತ್ರ ಹೊಟ್ಟೆ ಗೆ ಅನ್ನ ಸಿಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಟ್ಟು ಕತೆಗಳನ್ನು ಹಬ್ಬಿಸುವುದು ಅವರ ವೃತ್ತಿಯಾಗಿದೆ. ಈ ಕುರಿತು ಪ್ರಜ್ಞಾವಂತರ ಎಚ್ಚರಿಕೆ ವಹಿಸಬೇಕು.
ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಕೊಡಗಿನ ಕೋಡಂಗಿಯನ್ನು ನಂಬಬೇಕಾ? ಅಥವಾ ಇತಿಹಾಸ ತಜ್ಞರನ್ನು ನಂಬಬೇಕಾ? ಎಂಬುದಾಗಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು





2 Responses
I need book
ಉರೀಗೌಡ ನಂಜೇಗೌಡ ದೊಡ್ಡ ನಂಜೇಗೌಡರನ್ನು ಕುರಿತು ಆಳವಾದ ಅಧ್ಯಯನ/ ಸಂಶೋಧನೆ/ ದೇಶೀಯ ಮತ್ತು ವಿದೇಶಿಯ ಐತಿಹಾಸಿಕ ಹಾಗೂ ಜಾನಪದ ಲಾವಣಿಗಳು ಮುಂತಾದವುಗಳ ಅಭ್ಯಾಸ ಮಾಡಬೇಕು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ.