ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಬಸವತೀರ್ಥ ಮಠದ ಶ್ರೀ ವಿರುದ್ಧ ದೂರು ದಾಖಲು

3 years ago

ಬೀದರ್: ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪಕ್ಕೆ ಸಂಬಂಧಿಸಿ ಹುಮನಾಬಾದ್ನ ಹೊರವಲಯದಲ್ಲಿರುವ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಕಲ್ಲೂರ್ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಫೆ.17 ರಂದು ಭಾಲ್ಕಿ ಕ್ರಾಸ್ ಬಳಿಯ ಹುಮನಾಬಾದ್-ಬೀದರ್ ರಸ್ತೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಪಿಸ್ತೂಲ್ ಹಿಡಿದುಕೊಂಡು ನಿಂತಿದ್ದು ಸಮೀಪ ಹೋಗಿ ನೋಡುತ್ತಿದ್ದಂತೆ ಕಾನೂನಿನ ಅರಿವಿದ್ದರೂ ಸಾರ್ವಜನಿಕರ ಮಧ್ಯೆ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ನಾಗೇಶ ಕಲ್ಲೂರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಾಳಿಯಲ್ಲಿ ಗುಂಡುಹಾರಿಸಿದ ಬೆನ್ನಲ್ಲೇ ರಾಯಚೂರಿನ ಚೌಕಿಮಠದಲ್ಲಿ ಹುಮನಾಬಾದ್ ಸಬ್ ಇನ್ಸ್ಪೆಕ್ಟರ್ ಮಂಜುನಗೌಡ ಪಾಟೀಲ್ ಅವರು ಸಿದ್ದಲಿಂಗ ಸ್ವಾಮಿಯಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ದೂರು ದಾಖಲು: ಹುಮನಾಬಾದ್ ತಾಲ್ಲೂಕಿನ ಬಸವ ತೀರ್ಥ ಗ್ರಾಮದ ಬಸವ ತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ಅವರ ವಿರುದ್ಧ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಕುರಿತಂತೆ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ನಮ್ಮ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದನ್ನು ತಡೆಯಲು ಹೋದಾಗ ಹಲವರು ಹಲ್ಲೆ ನಡೆಸಿದ್ದು, ನನ್ನ ಪತ್ನಿ ಮೇಲೆ ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಾಲ್ಲೂಕಿನ ಕಲ್ಲೂರ ತಾಂಡಾ ನಿವಾಸಿ ಸೋಮನಾಥ ಲಕ್ಷ್ಮಣ ಪವಾರ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

Leave a Reply