ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆ ನಾಳೆ ನಡೆಯುತ್ತಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವೇ ಸ್ವತಃ ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದು, ಜುಲೈ 18 ರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರ ಅಸೆಂಬ್ಲಿ ಪ್ರಾರಂಭವಾಗುತ್ತಿದೆ ಮತ್ತು ಅವರು ಮುಂಬೈನಲ್ಲಿ ಇರಲು ಬಯಸಿದ್ದಾರೆ. ಆದರೆ ನಾಳೆ ಸಭೆಗೆ ಹಾಜರಾಗಲಿದ್ದಾರೆ. ಅವರು ಬರುವುದು ಮುಖ್ಯ ಎಂದು ಹೇಳಲು ನಾನು ಅವರಿಗೆ ಕರೆ ಮಾಡಿದೆ. ಅವರು ಜುಲೈ 18 ರಂದು ಬೆಳಗ್ಗೆ ಬರುವುದಾಗಿ ಹೇಳಿದ್ದಾರೆ ಎಂದು ಹೇಳಿದರು



